ವಾಣಿಜ್ಯ

ಕೆಲವೆಡೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 65 ರೂ. ಕಡಿತ

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ದೇಶದ ಕೆಲವು ಮಹಾನಗರಗಳಲ್ಲಿ ಸಬ್ಸಿಡಿ ರಹಿತ ಗ್ಯಾಸ್‌ ಸಿಲಿಂಡರ್‌ ಬೆಲೆಯಲ್ಲಿ 65 ರೂಪಾಯಿಗಳ ಕಡಿತ ಮಾಡಲಾಗಿದೆ. ಹೊಸ ದರ ಇಂದಿನಿಂದಲೇ ಜಾರಿಗೊಳ್ಳಲಿದೆ.

ಜಾಗತಿಕ ಮಟ್ಟದ ಕಚ್ಚಾ ತೈಲದ ಇಳಿಕೆಯ ಹಿನ್ನೆಲೆಯಲ್ಲಿ, ದರ ಕಡಿತಗೊಂಡಿದ್ದು, ಕಳೆದ ಎರಡು ತಿಂಗಳಿನಲ್ಲಿ ಎರಡನೆಯ ಬಾರಿ ಬೆಲೆ ಕಡಿತಗೊಂಡಂತಾಗಿದೆ.

ಮುಂಬೈ: 714.50 (62 ರೂ. ಕಡಿತ)

ಚೆನ್ನೈ: 761.50(64.5 ರೂ. ಕಡಿತ)

ನವದೆಹಲಿ: 744 ರೂ. (61.5 ರೂ. ಕಡಿತ)

ಕೋಲ್ಕತ್ತಾ: 774.50(65 ರೂ. ಕಡಿತ)