ವಾಣಿಜ್ಯ

ವಾಹನಗಳಲ್ಲೆ ತರಕಾರಿ ಮಾರಾಟ

Chitradurga

ಕೊಂಡ್ಲಹಳ್ಳಿ: ಗ್ರಾಮದಲ್ಲಿ ಸೋಮವಾರ ವಾರದ ಸಂತೆಗೆ ಹಮ್ಮಿಕೊಳ್ಳಲು ಯತ್ನಿಸಿದ ವ್ಯಾಪಾರಿಗಳು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆಯಿತು.

ಇಲ್ಲಿನ ಬಸ್ ನಿಲ್ದಾಣದಲ್ಲೇ ತರಕಾರಿ ಮಾರಲು ರೈತರು, ವರ್ತಕರು ಆರಂಭಿಸಿದರು. ಇದನ್ನು ಗಮನಿಸಿದ ಗ್ರಾಪಂ ಸಿಬ್ಬಂದಿ ನಿಷೇಧಾಜ್ಞೆಯ ಕಾರಣ ಹೇಳಿ, ಸಂತೆ ನಡೆಸುವಂತಿಲ್ಲ ಎಂದು ತಿಳಿಸಿದರು.

ಗಾಡಿಗಳಲ್ಲಿ ಮಾರಾಟಕ್ಕೆ ತಿಳಿಸಿದರೂ ತೆರವುಗೊಳಿಸದಿದ್ದಾಗ ಪೊಲೀಸರು ಬಂದು ಮಾರಾಟ ನಿಲ್ಲಿಸಿದರು. ಕೂಡಲೇ ತರಕಾರಿ ವ್ಯಾಪಾರಿಗಳು ಸ್ಥಳದಿಂದ ತೆರಳಿದರು. ಗ್ರಾಮದ ಬೀದಿಗಳಲ್ಲಿ ಮಾರಾಟ ನಡೆಸಿದ್ದು ಕಂಡು ಬಂತು.