ಸಿನಿವಾಣಿ

ದೀಪಿಕಾ 35; ಧೂಮ್ 4ರಲ್ಲಿ ಪಡುಕೋಣೆ ಪುತ್ರಿ ವಿಲನ್?

ಸಿನಿಮಾ ಸೆಲೆಬ್ರಿಟಿಗಳ ಬರ್ತ್​ಡೇ ಅಂದರೆ ಅಲ್ಲಿ ಒಂದಿಲ್ಲೊಂದು ವಿಶೇಷತೆಗಳಿರುತ್ತವೆ. ಸಿನಿಮಾ ತಂಡಗಳಿಂದ ಹೊಸ ಹೊಸ ಘೋಷಣೆಗಳಿರಬಹುದು, ಫಸ್ಟ್ ಲುಕ್ ಪೋಸ್ಟರ್, ಟೀಸರ್ ಸೇರಿ ಏನಾದರೊಂದು ಇದ್ದೇ ಇರುತ್ತದೆ. ಆದರೆ, ಈ ಸಲ ಬಾಲಿವುಡ್ ಸುಂದರಿ, ಕನ್ನಡತಿ ದೀಪಿಕಾ ಪಡುಕೋಣೆ ಬರ್ತ್​ಡೇಗೆ ಸಿನಿಮಾ ತಂಡಗಳಿಂದ ಯಾವುದೇ ವಿಶೇಷ ಘೋಷಣೆ ಆಗಿಲ್ಲ. ಅದರ ಬದಲು, ದೀಪಿಕಾ ಹುಟ್ಟುಹಬ್ಬದ ಸಂಭ್ರಮ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಕಾಣುತ್ತಿದೆ. ಈ ನಡುವೆ ದೀಪಿಕಾ ಕುರಿತಾಗಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ, ಅದು ಎಷ್ಟರ ಮಟ್ಟಿಗೆ ನಿಜ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿಷಯ ಏನೆಂದರೆ, ಯಶ್​ರಾಜ್ ಫಿಲಂಸ್ ಬ್ಯಾನರ್​ನಲ್ಲಿ ನಿರ್ಮಾಣವಾಗಲಿರುವ ‘ಧೂಮ್ 4’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿ ದ್ದಾರಂತೆ.

‘ಧೂಮ್ 4’ ಚಿತ್ರವು ಕೆಲವು ವರ್ಷಗಳಿಂದ ಸುದ್ದಿಯಲ್ಲಿದ್ದು, ಈ ಚಿತ್ರದಲ್ಲಿ ಶಾರುಖ್ ಖಾನ್ ವಿಲನ್ ಆಗಿ ನಟಿಸುತ್ತಾರೆ ಎಂದು ಹಿಂದೆ ಹೇಳಲಾಗಿತ್ತು. ಆ ಸುದ್ದಿಯೇ ಇನ್ನೂ ಅಧಿಕೃತವಾಗಿಲ್ಲ, ಹೀಗಿರುವಾಗಲೇ ಈಗ ಶಾರುಖ್ ಜತೆಗೆ ದೀಪಿಕಾ ಹೆಸರು ಸೇರಿಕೊಂಡಿದ್ದು, ಈ ಇಬ್ಬರೂ ‘ಧೂಮ್ 4’ರಲ್ಲಿ ವಿಲನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.