ಸಿನಿವಾಣಿ

ತ್ರಿಬಲ್ ರೈಡಿಂಗ್ ಮುಗಿಸಿದ ಗೋಲ್ಡನ್ ಸ್ಟಾರ್ ಗಣೇಶ್

ಬೆಂಗಳೂರು: ನಟ ಗಣೇಶ್ ನಾಯಕನಾಗಿ ನಟಿಸುತ್ತಿರುವ ‘ತ್ರಿಬಲ್ ರೈಡಿಂಗ್’ ತಂಡವೀಗ ಸಿಹಿ ಸುದ್ದಿಯೊಂದನ್ನು ನೀಡಿದೆ. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದು ಶೀಘ್ರದಲ್ಲಿ ತೆರೆಗೆ ಬರಲಿದ್ದೇವೆ ಎಂಬ ಸೂಚನೆ ನೀಡಿದೆ. ಮಹೇಶ್ ಗೌಡ ನಿರ್ದೇಶನ ಮಾಡಿರುವ ‘ತ್ರಿಬಲ್ ರೈಡಿಂಗ್’ ಸಿನಿಮಾ ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ.

ಈ ಸಿನಿಮಾದಲ್ಲಿ ಗಣೇಶ್​ಗೆ ಮತ್ತೆ ಮೂವರು ನಾಯಕಿಯರು ಜತೆಯಾಗಿದ್ದಾರೆ. ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್ ನಟಿಸಿದ್ದಾರೆ. ಈ ಹಿಂದೆ ‘ಮುಗುಳುನಗೆ’ ಚಿತ್ರದಲ್ಲಿ ಗಣೇಶ್​ಗೆ ನಾಲ್ವರು ನಾಯಕಿಯರಿದ್ದರು. ಈ ಸಿನಿಮಾದಲ್ಲಿ ಸಾಧುಕೋಕಿಲ, ರವಿಶಂಕರ್ ಗೌಡ, ರಂಗಾಯಣ ರಘು, ಕುರಿ ಪ್ರತಾಪ್ ಸೇರಿ ಹಲವರಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ, ಜೈ ಆನಂದ್ ಛಾಯಾಗ್ರಹಣ ಚಿತ್ರಕ್ಕಿದೆ. ರಾಮ್ ಗೋಪಾಲ್ ಬಂಡವಾಳ ಹೂಡುತ್ತಿದ್ದಾರೆ.