ಸಿನಿವಾಣಿ

ಚಂದನವನದಲ್ಲಿ ಹಾಡುಗಳ ಹಬ್ಬ; ಗೀತೆಗಳಿಂದಲೇ ರಂಗೇರಿದ ಸ್ಯಾಂಡಲ್​ವುಡ್​

ಬೆಂಗಳೂರು: ಸ್ಯಾಂಡಲ್​ವುಡ್ ಮತ್ತೆ ಹಳೇ ಲಯಕ್ಕೆ ಮರಳುತ್ತಿದೆ. ಕಳೆದ ಎರಡು ವರ್ಷಗಳಿಂದ ಯಾವುದೇ ಸಂಭ್ರಮ ಸಡಗರ ಕಾಣದ ಚಿತ್ರೋದ್ಯಮ, ಇದೀಗ ನಿಧಾನಕ್ಕೆ ಮುನ್ನೆಲೆಗೆ ಬರುತ್ತಿದೆ. ಅದರಲ್ಲೂ ಇದೀಗ ನವರಾತ್ರಿಯ ಹಬ್ಬದ ಸೀಸನ್. ಸಾಲುಸಾಲು ಸಿನಿಮಾ ಘೋಷಣೆ ಒಂದೆಡೆಯಾದರೆ, ಚಿತ್ರತಂಡಗಳಿಂದ ಹಾಡು, ಟ್ರೇಲರ್​ಗಳ ಹರಿವೂ ಹೆಚ್ಚಾಗಿದೆ.

ಹಾಡುಗಳಿಂದಲೇ ರಂಗೇರಿದ ಚಂದನವನ: ಗಣೇಶ್ ಮತ್ತು ಸಿಂಪಲ್ ಸುನಿ ಕಾಂಬಿನೇಷನ್ ‘ಸಖತ್’ ತಂಡದಿಂದ ‘ಪ್ರೇಮಕ್ಕೆ ಕಣ್ಣಿಲ್ಲ ...’ ಹೆಸರಿನ ಹಾಡನ್ನು ಹೊರತಂದಿದೆ. ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಭರತ್ ನಾವುಂದ ನಿರ್ದೇಶನದ ಮನುರಂಜನ್ ನಟಿಸಿರುವ ‘ಮುಗಿಲ್​ಪೇಟೆ’ ಚಿತ್ರದ ರೊಮ್ಯಾಂಟಿಕ್ ಹಾಡು ಕಿವಿಗಿಂಪು ನೀಡುತ್ತಿದೆ. ಅದೇ ರೀತಿ ಪ್ರೇಮ್ ನಟನೆಯ ‘ಪ್ರೇಮಂ ಪೂಜ್ಯ’ ಚಿತ್ರದ 10ನೇ ಹಾಡು, ಶ್ರೀಮುರಳಿ ‘ಮದಗಜ’ ಚಿತ್ರದ ‘ಗೆಳೆಯ ಗೆಳೆಯ ...’, ‘ಶ್ರೀಕೃಷ್ಣ ಆಟ್​ಜೀಮೇಲ್.ಕಾಮ್ ಮತ್ತು ‘ಪುರುಷೋತ್ತಮ’ ಚಿತ್ರದ ಹಾಡುಗಳು ಸಹ ಬಿಡುಗಡೆ ಆಗಿವೆ.