ಸಿನಿವಾಣಿ

ಸುಶಾಂತ್ ಆತ್ಮಹತ್ಯೆ ಹಿಂದೆ ಸೂರಜ್ ಪಾಂಚೋಲಿ ಕೈವಾಡ ಇದೆಯಾ?

ಸುಶಾಂತ್​ ಸಾವಿನ ಬೆನ್ನಲ್ಲೇ ಬಾಲಿವುಡ್​ನಲ್ಲಿನ ನೆಪೋಟಿಸಂ ಬಗ್ಗೆ ಹಲವಾರು ಕಲಾವಿದರು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಹೊರಗಿನ ಪ್ರತಿಭೆಗಳಿಗೆ ಬಾಲಿವುಡ್​ನಲ್ಲಿ ಮನ್ನಣೆ ನೀಡುವುದಿಲ್ಲ ಎಂಬ ಮಾತುಗಳು ಹೇಳಿಬರುತ್ತಿವೆ. ಒಂದಷ್ಟು ಸಂಸ್ಥೆಗಳು ಇಡೀ ಬಾಲಿವುಡ್​ನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ದರ್ಬಾರ್ ಮಾಡುತ್ತಿವೆ ಎಂದೂ ಆರೋಪಗಳು ಹೇಳಿಬರುತ್ತಿವೆ. ಈ ನಡುವೆ ಸುಶಾಂತ್​ ಸಾವಿಗೆ ಸೂರಜ್​ ಪಾಂಚೋಲಿ ಕಾರಣವಾಗಿರಬಹುದಾ ಎಂಬ ಮಾತು ಕೇಳಿ ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸುವ ಸೂರಜ್​ ಪಾಂಚೋಲಿ ತಾಯಿ ಝರೀನಾ ‘ಜನ ಸುಖಾಸುಮ್ಮನೇ ಈ ಪ್ರಕರಣದಲ್ಲಿ ನನ್ನ ಮಗ ಸೂರಜ್​ ಹೆಸರನ್ನು ತಳುಕು ಹಾಕುತ್ತಿದ್ದಾರೆ. ಸುಶಾಂತ್​ಗೂ ಆತ್ಮಹತ್ಯೆಗೂ ನನ್ನ ಮಗನಿಗೂ ಯಾವುದೇ ಸಂಬಂಧವಿಲ್ಲ. ಜನ ಸಿಕ್ಕಿದ್ದೇ ತಡ ಏನೆನೋ ಆರೋಪ ಮಾಡುತ್ತಿದ್ದಾರೆ. ಅಂದಹಾಗೆ ಸೂರಜ್​ ಮತ್ತು ಸುಶಾಂತ್​ ಸ್ನೇಹಿತರಲ್ಲ. ಒಬ್ಬರನ್ನೊಬ್ಬರ ಬಲ್ಲವರಾದರೂ, ಎದುರಿಗೆ ಸಿಕ್ಕಾಗಷ್ಟೇ ಮಾತನಾಡುತ್ತಿದ್ದರು. ಅವರು ಒಬ್ಬರಿಗೊಬ್ಬರು ಸಹೋದರರ ರೀತಿ ಇದ್ದರು’ ಎಂದಿದ್ದಾರೆ.

‘ಮತ್ತೊಬ್ಬರ ಸ್ಥಿತಿಯನ್ನು ತಮ್ಮ ಅನುಕೂಲಕ್ಕಾಗಿ ಈ ರೀತಿ ಬಳಕೆ ಮಾಡಿಕೊಳ್ಳಬಾರದು. ನನಗನಿಸಿದ ಮಟ್ಟಿಗೆ ಜನ ತುಂಬ ಫ್ರೀಯಾಗಿದ್ದಾರೆ. ಇಂಥ ವಿಚಾರದಲ್ಲಿ ಹೆಚ್ಚಿನ ಆಸಕ್ತಿ. ಅವರು ವಿಚಾರ ಮಾಡುವುದಿಲ್ಲ. ಇಂಥ ವಿಷಯಗಳು ಸಂಬಂಧಪಟ್ಟವರಿಗೆ ಎಷ್ಟೊಂದು ನೋವು ತಂದೊಡ್ಡುತ್ತವೆ ಎಂಬುದು. ಈಗಾಗಲೇ ಸೂರಜ್​ ಹಲವು ಕಾರಣಕ್ಕೆ ನೊಂದಿದ್ದಾನೆ. ಮತ್ತೆ ಆ ಕೆಲಸ ಮಾಡಬೇಡಿ‘ ಎಂದು ಕೇಳಿಕೊಂಡಿದ್ದಾರೆ ಝರೀನಾ. (ಏಜೆನ್ಸೀಸ್​)