ಸಿನಿವಾಣಿ

'ನೀವು ಯಾವತ್ತಿದ್ದರೂ ನನಗೆ ಸ್ಫೂರ್ತಿಯ ಚಿಲುಮೆ'; ದೀಪಿಕಾ ಬರ್ತ್​​ಡೇಗೆ ಆಲಿಯಾ ಕಡೆಯಿಂದ ವಿಶೇಷ ವಿಷ್

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ 35ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಅವರ ಜನ್ಮದಿನಕ್ಕೆ ಅಭಿಮಾನಿ ಬಳಗ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ನೆಚ್ಚಿನ ನಟಿಯ ಫೋಟೋಗಳನ್ನು ಶೇರ್ ಮಾಡಿಕೊಂಡು, ವಿಷ್ ಮಾಡುತ್ತಿದ್ದಾರೆ. ಅದೇ ರೀತಿ ಬಾಲಿವುಡ್​ನ ಸಹೋದ್ಯೋಗಿಗಳೂ ದೀಪಿಕಾಗೆ ಶುಭಾಶಯ ರವಾನಿಸುತ್ತಿದ್ದಾರೆ. ಅದೇ ರೀತಿ ನಟಿ ಆಲಿಯಾ ಭಟ್​ ಸಹ ದೀಪಿಕಾ ಬಗ್ಗೆ ವಿಶೇಷವಾದ ಬರಹದ ಮೂಲಕವೇ ಶುಭಾಶಯ ಕೋರಿದ್ದಾರೆ.

‘ಹ್ಯಾಪಿ ಬರ್ತ್​ಡೇ ಡಿಪಿ! ನೀವು ಯಾವತ್ತಿದ್ದರೂ ನನ್ನ ಇನ್ಸ್​ಪಿರೇಷನ್. ನಿಮ್ಮ ಸೌಂದರ್ಯ ಮತ್ತು ಶಕ್ತಿಯಿಂದಲೇ ನನ್ನೊಳಗೆ ಸ್ಫೂರ್ತಿಯಾಗಿರುತ್ತೀರಿ. ನಿಮ್ಮ ಸಾಹಸಮಯ ಪಯಣ ಹೀಗೆ ಮುಂದುವರಿಯಲಿ. ಲವ್ ಯೂ ಎಂದಿದ್ದಾರೆ.

ಅಂದಹಾಗೆ, ಇತ್ತೀಚೆಗಷ್ಟೇ ದೀಪಿಕಾ ಜತೆಗೆ ರಾಜಸ್ತಾನದ ರಣತಂಗೋರ್​ನ ರಾಷ್ಟ್ರೀಯ ಉದ್ಯಾನದಲ್ಲಿ ಒಂದಷ್ಟು ಸಮಯವನ್ನು ಆಲಿಯಾ ಕಳೆದಿದ್ದರು. ಇದೀಗ ಅವರ ಜನ್ಮದಿನದ ನಿಮಿತ್ತ ಶುಭಾಶಯ ಕೋರಿದ್ದಾರೆ. ಇತ್ತ ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್​, ಸೋನಾಕ್ಷಿ ಸಿನ್ಹಾ ಸೇರಿ ಬಹುತೇಕ ನಟಿಯರು ದೀಪಿಕಾಗೆ ಶುಭಾಶಯ ತಿಳಿಸಿದ್ದಾರೆ. (ಏಜೆನ್ಸೀಸ್​)