ಬೆಂಗಳೂರು: ಸಿನಿಮಾ ನಟ ನಟಿಯರಿಗೆ ಅಭಿಮಾನಿಗಳು ಸಾಕಷ್ಟು ಹೆಸರುಗಳಿಂದ ಕರೆಯುತ್ತಾರೆ. ಅದೇ ಕಲಾವಿದರಿಗೆ ಚಿಕ್ಕಂದಿನಿಂದಲೇ ಮನೆಯವರೇ ಒಂದು ಪೆಟ್ ನೇಮ್ ಇಟ್ಟಿರುತ್ತಾರೆ. ಅದ್ಯಾವ ಹೆಸರೂ ಸಾರ್ವಜನಿಕವಾಗಿ ಅಷ್ಟಾಗಿ ಬಳಕೆಯಲ್ಲಿರುವುದಿಲ್ಲ ಎಂಬುದಕ್ಕಿಂತ ಆಪ್ತರು ಮತ್ತು ಕುಟುಂಬದವರ ಪಾಲಿಗಷ್ಟೇ ಅದು ಸೀಮಿತವಾಗಿರುತ್ತದೆ. ಹೀಗಿರುವಾಗ ಸದ್ಯ ಸೌತ್ ಸಿನಿಮಾಕ್ಷೇತ್ರದಲ್ಲಿ ಸೆನ್ಸೆಷನ್ ಸೃಷ್ಟಿಸಿರುವ ರಶ್ಮಿಕಾಗೂ ಒಂದು ಪೆಟ್ ನೇಮ್ ಇದೆ.
ಹೌದು, ಜಾಲತಾಣದಲ್ಲಿ ಫೋಟೋ ಶೇರ್ ಮಾಡಿಕೊಂಡ ರಶ್ಮಿಕಾ ಆ ಹೆಸರನ್ನು ಬಹಿರಂಗಪಡಿಸಿದ್ದಾರೆ. ಮನೆಯಲ್ಲಿ ಎಲ್ಲರೂ ಅವರನ್ನು ಮೋನಿ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಾರೆ. ಸದ್ಯ ಈ ವಿಚಾರ ಅಭಿಮಾನಿವಲಯಕ್ಕೂ ಗೊತ್ತಾಗಿದ್ದು, ಮೋನಿ ಎಂದೇ ಸಂಬೋಧಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಾಗೇ ಕಮೆಂಟ್ ಮಾಡುತ್ತಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಕನ್ನಡದ ‘ಪೊಗರು’, ತೆಲುಗಿನಲ್ಲಿ ‘ಪುಷ್ಪ’, ತಮಿಳಿನ ‘ಸುಲ್ತಾನ್’ ಸೇರಿ ಹಲವು ಪ್ರಾಜೆಕ್ಟ್‌ಗಳಲ್ಲಿ ರಶ್ಮಿಕಾ ಬಿಜಿಯಾಗಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಶೂಟಿಂಗ್ ಸ್ಥಗಿತಗೊಂಡಿದ್ದರಿಂದ ಕುಟುಂಬದೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ.