ಸಿನಿವಾಣಿ

ಹೌದು ನಾನು ರಿಲೇಶನ್​ಶಿಪ್​ನಲ್ಲಿದ್ದೇನೆ! ಹುಡುಗ ಯಾರೆಂದು ಕೇಳಿದ್ದಕ್ಕೆ ಕೃತಿ ಶೆಟ್ಟಿ ಕೊಟ್ರು ಶಾಕಿಂಗ್​ ಉತ್ತರ

ಹೈದರಾಬಾದ್​: ಉಪ್ಪೇನಾ ಚಿತ್ರದ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟ ಹಾಟ್​ ಬ್ಯೂಟಿ ಕೃತಿಶೆಟ್ಟಿ, ತಮ್ಮ ಬೋಲ್ಡ್​ ನಟನೆಯಿಂದಲೇ ಎಲ್ಲರ ಕಣ್ಣಗಳನ್ನು ತಮ್ಮತ್ತ ತಿರುಗಿಸಿದರು. ತನ್ನ ಸೌಂದರ್ಯ ಹಾಗೂ ಮುಗ್ಧ ನೋಟದಿಂದ ಎಲ್ಲರ ಮನಗೆದ್ದಿರುವ ಕೃತಿ ಶೆಟ್ಟಿ, ಉಪ್ಪೇನಾ ಸಕ್ಸಸ್​ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಟ್‌, ಫ್ಲಾಪ್‌ಗಳನ್ನು ಲೆಕ್ಕಿಸದೆ ಸತತ ಚಿತ್ರಗಳನ್ನು ಮಾಡುತ್ತಾ ಸಿನಿ ವೃತ್ತಿ ಜೀವನದಲ್ಲಿ ಮುನ್ನಡೆಯುತ್ತಿದ್ದಾರೆ.

ಸದ್ಯ ಕೃತಿ ಶೆಟ್ಟಿ ಅವರು ನಟ ಶರ್ವಾನಂದ್ ಜತೆ ಮನಮೆ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸದ್ಯ ಈ ಸಿನಿಮಾದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಕೃತಿ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಸಕ್ತಿದಾಯಕ ಕಾಮೆಂಟ್​ಗಳನ್ನು ಮಾಡಿದ್ದಾರೆ. ತಾನು ರಿಲೇಶನ್​ಶಿಫ್​ನಲ್ಲಿದ್ದೇನೆ ಎಂದು ಹೇಳಿ ಹೊಸ ಬಾಂಬ್​ ಸಿಡಿಸಿದ್ದಾರೆ.

ಮನಮೆ ಸಿನಿಮಾ, ನಾಯಕ ಶರ್ವಾನಂದ್ ಅವರ ವೃತ್ತಿ ಜೀವನದಲ್ಲಿ 35ನೇ ಚಿತ್ರವಾಗಿದೆ. ಚಿತ್ರವನ್ನು ಶ್ರೀರಾಮ್ ಆದಿತ್ಯ ನಿರ್ದೇಶಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು, ಟೀಸರ್‌ಗಳು ಮತ್ತು ಟ್ರೇಲರ್‌ಗಳು ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿವೆ. ಈ ಚಿತ್ರ ಜೂನ್ 7 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕೃತಿ ಶೆಟ್ಟಿ ಪ್ರಸ್ತುತ ಮನಮೆ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಬಿಜಿಯಾಗಿದ್ದಾರೆ. ಟಿವಿ ಚಾನೆಲ್‌ಗಳಿಗೆ ಸತತವಾಗಿ ಸಂದರ್ಶನ ನೀಡುವುದರಲ್ಲಿ ನಿರತರಾಗಿದ್ದಾರೆ. ಸಿನಿಮಾ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಬದುಕಿನ ಬಗ್ಗೆಯೂ ಈ ಸುಂದರಿ ಜಾಣ ಉತ್ತರ ನೀಡಿದ್ದಾರೆ.

ಸಂದರ್ಶನದಲ್ಲಿ ಕೃತಿ ಅವರಿಗೆ ಅಚ್ಚರಿಯ ಪ್ರಶ್ನೆಯೊಂದು ಎದುರಾಯಿತು. ನೀವು ಸಿಂಗಲ್ ಆಗಿದ್ದೀರಾ? ಅಥವಾ ನೀವು ರಿಲೇಶನ್​ಶಿಪ್​ನಲ್ಲಿದ್ದೀರಾ? ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಕೃತಿ, ಸಿಂಗಲ್​ ಅಲ್ಲ, ರಿಲೇಶನ್​ಶಿಪ್​ನಲ್ಲಿದ್ದೇನೆ ಎಂದಿದ್ದಾರೆ. ಈ ಉತ್ತರ ಕೇಳಿ ಒಂದು ಕ್ಷಣ ಅಭಿಮಾನಿಗಳು ಕೂಡ ದಂಗಾದರು. ಬಳಿಕ ನೀವು ಯಾರೊಂದಿಗೆ ರಿಲೇಶನ್​ಶಿಪ್​ನಲ್ಲಿದ್ದೀರಾ? ಎಂದು ಪ್ರಶ್ನಿಸಿದಾಗ, ಕೃತಿಶೆಟ್ಟಿ ನಗುತ್ತಾ, ನಾನು ನನ್ನ ಕೆಲಸದ ಜತೆ ರಿಲೇಶನ್​ಶಿಪ್​​ನಲ್ಲಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಭಾವಿ ಪತಿ ಹೇಗಿರಬೇಕು ಎಂದು ಪ್ರಶ್ನಿಸಿದಾಗ ಒಳ್ಳೆಯವನಾಗಿರಬೇಕು ಮತ್ತು ಪ್ರಾಮಾಣಿಕವಾಗಿರಬೇಕು ಎಂದು ಹೇಳಿದರು. ನನಗೆ ನೃತ್ಯ ಮಾಡುವುದು ಇಷ್ಟ. ನನಗೆ ಆಕ್ಷನ್ ಸಿನಿಮಾಗಳು ಇಷ್ಟ. ನಾಯಕರಲ್ಲಿ ರಾಮ್ ಚರಣ್ ನನ್ನ ಫೇವರಿಟ್. ಒಟ್ಟಿಗೆ ನಟಿಸುವ ಅವಕಾಶ ಸಿಕ್ಕರೆ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ಕೃತಿ ಶೆಟ್ಟಿ ಹೇಳಿದರು.

ಇದೇ ವೇಳೆ ಮನಮೆ ಸಿನಿಮಾದ ಬಗ್ಗೆ ಮಾತನಾಡಿದ ಕೃತಿ ಶೆಟ್ಟಿ, ನನ್ನ ಪಾತ್ರದ ಹೆಸರು ಸುಭದ್ರಾ. ಇದುವರೆಗೆ ನಾನು ಮಾಡಿರುವ ಪಾತ್ರಗಳಿಗಿಂತ ಭಿನ್ನವಾಗಿದೆ. ಈ ಪಾತ್ರ ನನಗೆ ತುಂಬಾ ಹೊಸದು. ಇಲ್ಲಿಯವರೆಗೆ ನಾನು ಮುದ್ದಾದ, ಮೃದುವಾದ ಮತ್ತು ಬಬ್ಲಿ ಪಾತ್ರಗಳನ್ನು ಮಾಡಿದ್ದೇನೆ. ಆದರೆ, ಮನಮೆ ಚಿತ್ರದಲ್ಲಿ ಸುಭದ್ರಾ ಪಾತ್ರ ತುಂಬಾ ಕಟ್ಟುನಿಟ್ಟಾಗಿದೆ ಎಂದರು. (ಏಜೆನ್ಸೀಸ್​)