ರಾಕಿಂಗ್ ಸ್ಟಾರ್ ಯಶ್ ಸದ್ಯ ಇಬ್ಬರು ಮುದ್ದು ಮಕ್ಕಳೊಂದಿಗೆ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಮಕ್ಕಳಿಗಾಗಿಯೇ ಇಡೀ ಸಮಯ ಮೀಸಲಿಟ್ಟಿದ್ದಾರೆ. ಆಗಾಗ ಮುದ್ದು ಮಕ್ಕಳ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡು ಅಭಿಮಾನಿಗಳಿಗೂ ಆಗಾಗ ಸಪ್ರೈಸ್ ಕೊಡುತ್ತಿರುತ್ತಾರೆ. ಇದೀಗ ಕಾರ್ ಒಳಗೆ ನಿಂತುಕೊಂಡು ಡಾನ್ಸ್ ಮಾಡುತ್ತಿರುವ ಮಗನ ವಿಡಿಯೋವೊಂದನ್ನು ಯಶ್ ಪೋಸ್ಟ್ ಮಾಡಿದ್ದಾರೆ.
‘ಮಗನಿಗೆ ಮ್ಯೂಸಿಕ್ ಅಂದ್ರೆ ಎಲ್ಲಿಲ್ಲದ ಪ್ರೀತಿ ಅಂತ ಕಾಣುತ್ತೆ. ಒಂದು ಪಾರ್ಟಿ ಮೂಡ್ಗೆ ಬದಲಾಗಿ ಬಿಡುತ್ತಾನೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಸದ್ಯ ಈ ಪೋಸ್ಟ್ ಹಾಕಿದ ಕೇವಲ ಮೂರೇ ಗಂಟೆಗೆ 7 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ನೋಡಿದ್ದಾರೆ. ಆ ವಿಡಿಯೋ ತುಣುಕು ಇಲ್ಲಿದೆ ನೋಡಿ.