ಸಿನಿವಾಣಿ

Ramayana LA Premiere​ ಶೋಗೆ ರಾಧಿಕಾ ಜೊತೆ ಯಶ್​ ಎಂಟ್ರಿ; ಕಪ್ಪು ಸೂಟ್​ಗೆ ರಾವಣನ 'ದಶಮುಖ' ಚಿನ್ನದ ಬ್ರೂಚ್​​ ಧರಿಸಿ ಕಂಡಿದ್ದು ಹೀಗೆ

  • ಸಾಗರೋತ್ತರ ಪ್ರದೇಶ ಲಾಸ್ ಏಂಜಲೀಸ್‌ನಲ್ಲಿ ರಾಮಾಯಣ ಪ್ರೀಮಿಯರ್​ ಶೋ.

  • ಪತ್ನಿ ರಾಧಿಕಾ ಪಂಡಿತ್​ ಜೊತೆಗೆ ಪ್ರೀಮಿಯರ್​ ಶೋಗೆ ಎಂಟ್ರಿ ಕೊಟ್ಟ ಯಶ್​​​​​.

  • ಕಪ್ಪು ಸೂಟ್​ಗೆ 'ದಶಮುಖ' ಚಿನ್ನದ ಬ್ರೂಚ್​​ ಧರಿಸಿ ಮಿಂಚಿದ ರಾಕಿಂಗ್​ ಸ್ಟಾರ್.

Yash  Ravana 0-headed gold brooch: ಸಾಗರೋತ್ತರ ಪ್ರದೇಶ ಲಾಸ್ ಏಂಜಲೀಸ್‌ನಲ್ಲಿ ರಾಮಾಯಣ: ರೈಸ್ ಆಫ್ ಎ ಲೆಜೆಂಡ್ ಪ್ರಿಮೀಯರ್​ ಪ್ರದರ್ಶನಕ್ಕೆ ನಟ ಯಶ್​ ಮತ್ತು ರಾಧಿಕಾ ಒಟ್ಟಾಗಿ ಕೈ ಹಿಡಿದು ಬಂದಿದ್ದು ಒಂದು ಸೆಂಟರ್​ ಆಫ್​ ಅಟ್ರ್ಯಾಕ್ಷನ್ ಆಗಿತ್ತು​. ಇದರ ಜೊತೆಗೆ ಗಮನ ಸೆಳೆದಿದ್ದು ಯಶ್ ಧರಿಸಿದ್ದ ಕಪ್ಪು ಸೂಟ್ ಮತ್ತು ಅದಕ್ಕೆ ತೊಟ್ಟಿದ್ದ ರಾವಣನ ಹತ್ತು ತಲೆಗಳನ್ನು ಹೊಂದಿರುವ ಕಸ್ಟಮ್ ಚಿನ್ನದ ಬ್ರೂಚ್. ಸದ್ಯ ಈ ಬ್ರೂಚ್ ಬಾಲಿವುಡ್‌ನ ಪ್ರಖ್ಯಾತ ಡಿಸೈನರ್‌ಗಳ ಗಮನ ಸೆಳೆದಿದ್ದು, ನಾನಾ ಚರ್ಚೆಗಳಿಗೆ ಕಾರಣವಾಗಿದೆ.

ನವೆಂಬರ್​ 5ರಂದು ನಿತೀಶ್​ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದ ಬೆಳ್ಳಿತೆರೆ ಮೇಲೆ ಅಬ್ಬರಿಸಲಿದೆ. ಸದ್ಯ ಇದು ಭಾರತೀಯ ಸಿನಿಮಾಗಳಲ್ಲಿ ನಿರೀಕ್ಷಿತ ಸಿನಿಮಾವಾಗಿ ಗುರುತಿಸಿಕೊಂಡಿದ್ದು, ಐತಿಹಾಸಿಕ ಕತೆಯನ್ನು ಕಣ್ತುಂಬಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ.

ಸಿನಿ ತಂಡ ಭಾಗಿ

ಕಾರ್ಯಕ್ರಮದಲ್ಲಿ ಚಲಚಿತ್ರದ ಪ್ರ,ಮುಖ ಕಲಾವಿದರು. ತಂತ್ರಜ್ಞರು ಹಾಗೂ ಹಾಲಿವುಡ್​ನ ಹಲವು ಗಣ್ಯವ್ಯಕ್ತಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಲಾಸ್ ಏಂಜಲೀಸ್‌ನ ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್‌ನೊಳಗಿನ ಡೇವಿಡ್ ಗೆಫೆನ್ ಥಿಯೇಟರ್‌ನಲ್ಲಿ ಪ್ರಥಮ ಪ್ರದರ್ಶನ ನಡಯಿತು.

ರಾವಣನ ಬ್ರೂಚ್ ತೊಟ್ಟಿದ್ದ ಯಶ್

ಸಂಪೂರ್ಣವಾಗಿ ತೊಟ್ಟ ಕಪ್ಪು ಸೂಟ್, ಜಾಕೆಟ್‌ಗೆ ಪಿನ್ ಮಾಡಲಾದ ರಾವಣನ ಬ್ರೂಚ್. ಗಾಢ ಬಣ್ಣದ ಸನ್ಗ್ಲಾಸ್, ಚಿನ್ನದ ಹೂಪ್ ಕಿವಿಯೋಲೆಗಳು ಮತ್ತು ಅವರ ಸಿಗ್ನೇಚರ್ ಗಡ್ಡವು ಅಂದವನ್ನು ಹೆಚ್ಚಿಸಿತ್ತು. ಜೊತೆಗೆ ನಟಿ ಮತ್ತು ಅವರ ಪತ್ನಿ ರಾಧಿಕಾ ಪಂಡಿತ್​ ಇದ್ದರು. ಹಸಿರು ಬಣ್ಣದ ರೇಷ್ಮೆ ಸೀರೆ..ಹರಿಬಿಟ್ಟ ಕೂದಲು ಹಾಗೂ ಅದಕ್ಕೆ ತಕ್ಕಂತೆ ಧರಿಸಿದ ರೇಷ್ಮೆ ಬಣ್ಣದ ಜುಮುಕಿ ಅಂದವನ್ನು ಹೆಚ್ಚಿಸಿತ್ತು.

ಯಶ್​​ ಕೇಂದ್ರಬಿಂದು

ಶಾಸ್ತ್ರೀಯ ಪುರಾಣಗಳ ಪ್ರಕಾರ..ರಾವಣನ ಹತ್ತು ತಲೆ ನಾನಾ ವಿಚಾರವನ್ನು ಪ್ರಸ್ತುತ ಪಡಿಸುತ್ತದೆ. ದಶಮುಖ'ವು ಆತನ ಪ್ರಬಲ ಬುದ್ಧಿವಂತಿಕೆಗೆ ಸಾಕ್ಷಿಯಾಗಿದೆ. ಯಶ್ ತಮ್ಮ ಸೂಟ್​ಗೆ ಚಿನ್ನದ ಲಾಂಛನವನ್ನು ಪಿನ್ ಮಾಡಿಕೊಳ್ಳುವ ಮೂಲಕ, ಲಂಕಾಧಿಪತಿಯನ್ನು ಕೇವಲ ಏಕಆಯಾಮದ ಖಳನಾಯಕನಂತೆ ಬಿಂಬಿಸದೆ, ಅದರಾಚೆಗೂ ಸೂಕ್ಷ್ಮವಾಗಿ ರೂಪಿಸಿದ್ದಾರೆ.

ಚಿತ್ರತಂಡ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ ನಟಿ ಸಾಯಿ ಪಲ್ಲವಿ, ರಣಬೀರ್​ ಕಪೂರ್​, ಯಶ್​ ಸೇರಿದಂತೆ ಹಲವರಿ ಒದ್ದಾರೆ. ರಣಬೀರ್​ ಸಿಲ್ವರ್​ ಕಲರ್​ ಬಂಧ್​ ಗಾಲಾ ಸೂಟ್​ ಧರಿಸಿದ್ದರೆ. ಸಾಯಿಪಲ್ಲವಿ ಲೈಟ್​ ಪಿಂಕ್​ ಸ್ಯಾರಿಯಲ್ಲಿ ಕಂಗೊಳಿಸಿದ್ದಾರೆ. ಇನ್ನು ಯಶ್​​ ಕಪ್ಪು ಸೂಟ್​ ರಾವಣನ ಬ್ರೂಚ್​ ತೊಟ್ಟು ವಿಶೇಷವಾಗಿ ಗಮನ ಸೆಳೆದರು.

ಯಶ್ ಸಿನಿಮಾ ಜರ್ನಿ

ಯಶ್​​​ ಉತ್ತರಾಯಣ ಎನ್ನುವ ಸೀರಿಯಲ್​ ಮೂಲಕ ಕಿರುತರೆಗೆ ಎಂಟ್ರಿ ಕೊಟ್ಟರು. ಆನಂತರ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಚಾಕ್ಲೇಟ್ ಬಾಯ್​ ಆಗಿ ಗುರುತಿಸಿಕೊಂಡರು. ರಾಜಾಹುಲಿ, ಗೂಗ್ಲಿ, ಕಿರಾತಕ, ಕೆಜಿಎಫ್​ 1, ಕೆಜಿಎಫ್​2, ರಾಮಾಚಾರಿ ಅವರಿಗೆ ಭಾರಿ ಫೇಮ್​ ತಂದುಕೊಟ್ಟ ಸಿನಿಮಾಗಳಾಗಿವೆ. ರಾಧಿಕಾ ಪಂಡಿತ್​ ಅವರೊಂದಿಗೆ ನಂದ ಗೋಕುಲ ಎನ್ನುವ ಸೀರಿಯಲ್​​​ನಲ್ಲಿ ನಟಿಸಿದ್ದರು, (ಏಜೆನ್ಸೀಸ್).