ಸಂಗ್ರಹ ಚಿತ್ರ 
ಸಿನಿವಾಣಿ

'ಹಂದಿಯಂತಿದ್ದಾನೆ, ಯೋಗಿ ಬಾಬುಗಿಂತ ಕಡೆ'; ದುನಿಯಾ ವಿಜಯ್​ ವಿರುದ್ಧ ನಾಲಿಗೆ ಹರಿಬಿಟ್ಟ ಕಾಲಿವುಡ್​ ನಟ, ಕ್ಷಮೆಯಾಚಿಸಲು ಆಗ್ರಹ..Duniya Vijay

  • ದುನಿಯಾ ವಿಜಯ್​ ವಿರುದ್ಧ ಕೀಳಾಗಿ ಮಾತನಾಡಿದ ತಮಿಳು ನಟ

  • ಬಯಿಲ್ವಾನ್ ರಂಗನಾಥನ್ ವಿರುದ್ಧ ಸಿಡಿದೆದ್ದ ಕನ್ನಡಿಗರು ಕ್ಷಮೆಯಾಚನೆಗೆ ಒತ್ತಾಯ

  • ಹಂದಿಯಂತಿದ್ದಾನೆ..ನೋಡಲು ಅಸಹ್ಯ ಎಂದು ಕಾಮೆಂಟ್ ಮಾಡಿದ ಕಾಲಿವುಡ್‌ನ ಹಾಸ್ಯ ನಟ

duniya vijay In Mookuthi amman: 'ಹಂದಿಯಂತಿದ್ದಾನೆ, ಯೋಗಿ ಬಾಬುಗಿಂತಲೂ ಕಡೆಯಾಗಿದ್ದಾನೆ' ಎಂದು ದುನಿಯಾ ವಿಜಯ್ ವಿರುದ್ಧ ಕಾಲಿವುಡ್‌ನ ಹಾಸ್ಯ ನಟ ಬಯಿಲ್ವಾನ್ ರಂಗನಾಥನ್ ನಾಲಿಗೆ ಹರಿಬಿಟ್ಟು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರು ಕ್ಷಮೆ ಕೇಳಲೇಬೇಕು ಎಂದು ಹಲವರು ಪಟ್ಟು ಹಿಡಿದು, ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಟ್ಯಾಗ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದುನಿಯಾ ವಿಜಯ್​ ನಟನಾಗಿ ಮಾತ್ರವಲ್ಲ ನಿರ್ದೇಶಕನಾಗಿಯೂ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸಿಟಿ ಲೈಟ್ಸ್, ಭೀಮ ಸಿನಿಮಾಗಳು ಉದಾಹರಣೆ. ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಮಾತ್ರವಲ್ಲ ಪರ ಭಾಷೆಯಲ್ಲಿಯೂ ಮನ್ನಣೆ ಇದೆ ಎನ್ನುವುದನ್ನು ಸಾಬೀತು ಪಡಿಸಿದ್ದು, ಮೂಕುತಿ ಅಮ್ಮನ್ 2 ಸಿನಿಮಾ.

ಸುಂದರ್​ ಸಿ ನಿರ್ದೇಶನದ ಮೂಕುತಿ ಅಮ್ಮನ್ 2ದಲ್ಲಿ ಲೇಡಿ ಸೂಪರ್​ ಸ್ಟಾರ್​ ನಯನತಾರಾ, ರೆಜಿನಾ, ದುನಿಯಾ ವಿಜಯ್​, ಸುನೀಲ್​ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಸ್ಯಾಂಡಲ್​ವುಡ್​ನ ಸೆಲ್ಫ್​ ಮೇಡ್ ಹೀರೋ ದುನಿಯಾ ವಿಜಯ್​ ಡಬಲ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಬಗ್ಗೆ ಹಿರಿಯ ನಟ ಬಯಿಲ್ವಾನ್ ರಂಗನಾಥ್ ಯೂಟ್ಯೂಬ್​ ಚಾನೆಲ್​ಗೆ ವಿಮರ್ಶೆ ಕೊಟ್ಟಿದ್ದರು. ಈ ವೇಳೆ ಮಾತನಾಡುವ ಭರದಲ್ಲಿ ಅವರು ದುನಿಯಾ ವಿಜಯ್​ ಬಗ್ಗೆ ಬಾಡಿ ಶೇಮಿಂಗ್​ ಮಾಡಿದ್ದಾರೆ.

ಏನಂದ್ರು ಬಯಿಲ್ವಾನ್ ರಂಗನಾಥ್

ದುನಿಯಾ ವಿಜಯ್​ ಅವರ ಆಕಾರ, ಮೈಬಣ್ಣ ಉಲ್ಲೇಖಿಸಿದ ಅವರು ಆತನ ದೇಹ ಹಂದಿ ಮರಿಯಂತೆ ಇದೆ. ಯೋಗಿ ಬಾಬು ಅವರೇ ಅವರಿಗಿಂತ ಚಂದವಾಗಿ ಇದ್ದಾನೆ ಎಂದಿದ್ದಾರೆ. ಇಲ್ಲ ನೀವಿಲ್ಲಿ ಬಾಡಿ ಶೇಮಿಂಗ್ ಮಾಡುವಂತಿಲ್ಲ ಇಲ್ಲ ಬೇರೆ ರೀತಿ ಮಾತನಾಡಿ..ಪಾತ್ರಕ್ಕೆ ಸೂಟ್ ಆಗಲ್ಲ ಅಂತ ಹೇಳಿ ಎಂದು ನಿರೂಪಕ ಎಚ್ಚರಿಕೆ ಕೊಟ್ಟರು ಸಹ ಕಾಲಿವುಡ್​ನವ್ರಿಗೆ ವಿಲನ್​ ಪಾತ್ರಕ್ಕೆ ಬೇರೆ ನಟರು ಸಿಕ್ಕಿಲ್ವಾ? ಯಾವ ನಟನೂ ಇಲ್ವಾ?..ಯೋಗಿ ಬಾಬುಗಿಂತ ಮೋಸವಾಗಿದ್ದಾನೆ..ನೋಡೋಕೆ ಚೆನ್ನಾಗಿಲ್ಲ ಎಂದು ಕೀಳಾಗಿ ಮಾತು ಮುಂದುವರೆಸಿರುವುದು ವಿಡಿಯೋದಲ್ಲಿ ಇದೆ.

ಕ್ಷಮೆ ಕೇಳಲೇ ಬೇಕು

ದುನಿಯಾ ವಿಜಯ್ ಅವರ ರಾಜಕೀಯ ನಿಲುವುಗಳು ಅಥವಾ ಧರ್ಮಸ್ಥಳದ ವಿಷಯದಲ್ಲಿ ನಮ್ಮ ಅಭಿಪ್ರಾಯಗಳು ಭಿನ್ನವಾಗಿರಬಹುದು, ಆದರೆ ತಮಿಳು ಚಿತ್ರರಂಗದ ಪ್ರಸ್ತುತ ನಡವಳಿಕೆ ಅಸಹ್ಯಕರವಾಗಿದೆ. 'ಮೂಕುತಿ ಅಮ್ಮನ್ ಚಿತ್ರದಲ್ಲಿ ದುನಿಯಾ ವಿಜಯ್ ಅವರಿಗೆ ಪಾತ್ರ ನೀಡಿದ ಕುರಿತು ಹಿರಿಯ ಪೋಷಕ ನಟ ಬೈಲ್ವಾನ್ ರಂಗನಾಥನ್ ಅವರು, ಅವರನ್ನು "ಹಂದಿಯಂತಿದ್ದಾರೆ" ಎಂದು ಕರೆದು, ಯೋಗಿ ಬಾಬು ಅವರಿಗಿಂತಲೂ ಕಡೆಯವರು ಎಂದು ಟೀಕಿಸಿರುವುದು, ಕೇವಲ ದುನಿಯಾ ವಿಜಯ್ ಅವರಿಗೆ ಮಾಡಿದ ಅವಮಾನವಲ್ಲ; ಇದು ಸಮಸ್ತ ಕನ್ನಡಿಗರಿಗೇ ಮಾಡಿದ ಅವಮಾನವಾಗಿದೆ. ಈ ಮೂಲಕ ಅವರು ತಮಿಳು ಹಾಸ್ಯನಟರೊಬ್ಬರಿಗೂ ಅವಮಾನಿಸಿದ್ದಾರೆ. ಅವರು ಕ್ಷಮೆ ಕೇಳಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ, (ಏಜೆನ್ಸೀಸ್).