ಹೈದರಾಬಾದ್: ಕಣ್ಸನ್ನೇ ಮೂಲಕವೇ ರಾತ್ರೋ ರಾತ್ರಿ ನ್ಯಾಷನಲ್ ಸ್ಟಾರ್ ಆದ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದಾದ ಮೇಲೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಸಿನಿಮಾ ನಟನೆಯ ಜತೆಗೆ ಗಾಯಕಿಯಾಗಿಯೂ ಪ್ರಿಯಾ ಗುರುತಿಸಿಕೊಳ್ಳುತ್ತಿದ್ದಾರೆ.
ಹೌದು, ಹಾಗಂತ ಮಲಯಾಳಂನಲ್ಲಿ ಅವರೇನು ಹಾಡಿಗೆ ಧ್ವನಿ ನೀಡುತ್ತಿಲ್ಲ. ಬದಲಿಗೆ ತೆಲುಗು ಹಾಡೊಂದಕ್ಕೆ ಈಗಾಗಲೇ ಧ್ವನಿ ನೀಡಿದ್ದು, ಇನ್ನೇನು ಶೀಘ್ರದಲ್ಲಿ ಬಿಡುಗಡೆ ಆಗಲಿರುವ ಹಾಡಿಗೆ ಶ್ರೀ ಚರಣ್ ಪಕಾಲ ಸಂಗೀತ ನೀಡಿದ್ದಾರೆ.
ಚಿಕ್ಕಂದಿನಿಂದ ಕರ್ನಾಟಿಕ್ ಸಂಗೀತ ಕಲಿಯುತ್ತಿರುವ ಪ್ರಿಯಾ, ಮಲಯಾಳಂನಲ್ಲಿ ಒಂದಷ್ಟು ಹಾಡುಗಳಿಗೆ ಈಗಾಗಲೇ ಧ್ವನಿ ನೀಡಿದ್ದಾರೆ. ಇದೀಗ ಮೊದಲ ಬಾರಿ ತೆಲುಗು ಹಾಡಿಗೆ ಧ್ವನಿಯಾಗಿದ್ದಾರೆ. ಇತ್ತ ತೆಲುಗಿನಲ್ಲಿ ನಿತಿನ್ ಜತೆಗೆ ಚೆಕ್ ಸಿನಿಮಾದಲ್ಲಿ ಪ್ರಿಯಾ ನಟಿಸಿದ್ದು, ಇತ್ತೀಚೆಗಷ್ಟೇ ಆ ಚಿತ್ರದ ಟೀಸರ್ ಬಿಡುಗಡೆ ಆಗಿದೆ. (ಏಜೆನ್ಸೀಸ್)