ಸಿನಿವಾಣಿ

ರಾಮನಾಗಿ ರಣಬೀರ್​, ಸೀತೆಯಾಗಿ ಸಾಯಿ ಪಲ್ಲವಿ ಆಯ್ಕೆ ಮಾಡಿದ್ದೇಕೆ? ಕೊನೆಗೂ ಉತ್ತರಿಸಿದ ಚಿತ್ರತಂಡ! Ramayana

Ramayana : ಭಾರತೀಯ ಚಲನಚಿತ್ರೋದ್ಯಮದ ಅತಿ ದೊಡ್ಡ ಬಜೆಟ್ ಚಿತ್ರ ರಾಮಾಯಣ. ಎರಡು ಭಾಗಗಳಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕಾಗಿ ನಿರ್ಮಾಪಕರು 4 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ನಿತೇಶ್ ತಿವಾರಿ ಈ ಚಿತ್ರದ ನಿರ್ದೇಶಕರು.

ಬಾಲಿವುಡ್ ನಟ ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ಮತ್ತು ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ನಿರ್ಮಾಣ ಸಂಸ್ಥೆ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಹಾಗೂ ನಮಿತ್ ಮಲ್ಹೋತ್ರಾ ಅವರ ನಿರ್ಮಾಣ ಸಂಸ್ಥೆ ಪ್ರೈಮ್ ಫೋಕಸ್ ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಇತ್ತೀಚೆಗೆ, ಸಾಯಿ ಪಲ್ಲವಿಯನ್ನು ಸೀತೆಯಾಗಿ ಈ ಸಿನಿಮಾಗೆ ಆಯ್ಕೆ ಮಾಡಿದ್ದೇಕೆ ಎಂಬ ಕಾರಣವನ್ನು ಚಿತ್ರತಂಡ ನೀಡಿದೆ.

ಸೀತಾ ದೇವಿ ಪಾತ್ರಕ್ಕೆ ನಾವು ಹಲವರನ್ನು ಪರಿಗಣಿಸಿದ್ದೆವು. ಆದರೆ, ಸಾಯಿ ಪಲ್ಲವಿಯನ್ನು ಅಂತಿಮಗೊಳಿಸಲು ಹಲವು ಕಾರಣಗಳಿವೆ. ಅದೇನೆಂದರೆ, ಸಾಯಿ ಪಲ್ಲವಿ ಅವರು ಗ್ಲಾಮರಸ್ ಪಾತ್ರಗಳಿಂದ ದೂರ ಉಳಿದಿದ್ದಾರೆ. ಅಲ್ಲದೆ, ತಮ್ಮ ಸೌಂದರ್ಯಕ್ಕಾಗಿ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಅವರ ನೈಸರ್ಗಿಕ ಸೌಂದರ್ಯ ಮತ್ತು ಸರಳತೆ ಇಷ್ಟವಾಯಿತು. ಕೃತಕ ಬ್ಯೂಟಿಗಿಂತ ನೈಸರ್ಗಿಕ ಸೌಂದರ್ಯ ಉತ್ತಮ ಎಂಬ ಸಂದೇಶ ರವಾನಿಸಲು ಅವರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ, ಸಾಯಿ ಪಲ್ಲವಿ ಕೂಡ ಒಳ್ಳೆಯ ನಟಿ. ಅವರು ಯಾವುದೇ ಪಾತ್ರವನ್ನು ಸುಲಭವಾಗಿ ಮಾಡಬಹುದು. ಸೀತೆಯ ಪಾತ್ರವು ಖಂಡಿತವಾಗಿಯೂ ಅವರಿಗೆ ಸಾಕಷ್ಟು ಖ್ಯಾತಿಯನ್ನು ತರುತ್ತದೆ ಎಂದು ಚಿತ್ರತಂಡ ಹೇಳಿದೆ.

ಇನ್ನು ರಣಬೀರ್ ಅವರನ್ನು ರಾಮನಾಗಿ ಆಯ್ಕೆ ಮಾಡಲು ಕಾರಣವೆಂದರೆ ಅವರ ಶಾಂತ ಮುಖ. ಅವರ ವ್ಯಕ್ತಿತ್ವದ ಹೊರತಾಗಿ ಅವರು ಉತ್ತಮ ನಟನಾ ಕೌಶಲ್ಯವನ್ನು ಹೊಂದಿದ್ದಾರೆ ಎಂದು ಚಿತ್ರತಂಡ ಹೇಳಿದೆ.

ಈ ಚಿತ್ರದ ಮೊದಲ ಭಾಗವು 2026ರ ದೀಪಾವಳಿಗೆ ಮತ್ತು ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ಹಾಲಿವುಡ್ ಹಿಟ್ ಚಿತ್ರ 'ಲಾರ್ಡ್ ಆಫ್ ದಿ ರಿಂಗ್ಸ್' ಗಾಗಿ ಕೆಲಸ ಮಾಡಿದ ಸ್ಟಂಟ್ ನಿರ್ದೇಶಕ ಟೆರ್ರಿ 'ರಾಮಾಯಣ' ಯೋಜನೆಯ ಭಾಗವಾಗಿದ್ದಾರೆ. ವಾನರಸೇನೆ ಮತ್ತು ಹನುಮಂತನೊಂದಿಗಿನ ದೃಶ್ಯಗಳ ಕುರಿತು ಅವರು ಸೃಷ್ಟಿಸಿದ ಪ್ರಪಂಚವನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗುತ್ತಾರೆ ಎಂದು ಚಿತ್ರತಂಡ ತಿಳಿಸಿದೆ. (ಏಜೆನ್ಸೀಸ್​)