ಸಿನಿವಾಣಿ

ಪ್ರಿಯಾಂಕಾ ಚೋಪ್ರಾ ಅಮೆರಿಕ ಬಿಟ್ಟುಬಂದಿದ್ದೇಕೆ?

ಪ್ರಿಯಾಂಕಾ ತಮ್ಮ ಗಂಡ ನಿಕ್ ಜೋನಸ್ ಜತೆಗೆ ಅಮೆರಿಕದಲ್ಲಿ ನೆಲೆಗೊಂಡಿರುವುದು ಮತ್ತು ಹಾಲಿವುಡ್​ನಲ್ಲಿ ಸಖತ್ ಬಿಜಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಬಹಳ ವರ್ಷಗಳ ಹಿಂದೆಯೇ ಪ್ರಿಯಾಂಕಾ, ಅಮೆರಿಕದ ಸಹವಾಸವೇ ಬೇಡ ಎಂದು ಭಾರತಕ್ಕೆ ವಾಪಸ್ಸು ಬಂದ ವಿಷಯ ಹಲವರಿಗೆ ಗೊತ್ತಿರಲಿಕ್ಕಿಲ್ಲ. ಹೌದು, ಪ್ರಿಯಾಂಕಾ ಹಿಂದೊಮ್ಮೆ ಅಮೆರಿಕದಿಂದ ಬೇಸರಗೊಂಡು ಭಾರತಕ್ಕೆ ಮರಳಿದ್ದರಂತೆ.

ತಮ್ಮ 12ನೇ ವಯಸ್ಸಿಗೆ ಅಮೇರಿಕಗೆ ಓದುವುದಕ್ಕೆ ಹೋಗಿದ್ದ ಪ್ರಿಯಾಂಕಾ, ತಮ್ಮ ಸಹಪಾಠಿಗಳ ರ್ಯಾಗಿಂಗ್​ನಿಂದ ಬೇಸತ್ತು ಹೋಗಿದ್ದರಂತೆ. ತಮ್ಮ ಜತೆಗೆ ಓದುವ ಹುಡುಗಿಯರು, ‘ಬ್ರೌನಿ ಬ್ರೌನಿ’ ಎಂದು ಹೀಯಾಳಿಸುವ ಬಗ್ಗೆ ಅಕ್ಷರಶಃ ಸಹ ನೊಂದಿದ್ದ ಪ್ರಿಯಾಂಕಾ, ಡಿಪ್ರೆಶನ್​ಗೆ ಒಳಗಾಗಿದ್ದರಂತೆ. ಕೊನೆಗೆ ಅಮೇರಿಕದ ಸಹವಾಸವೇ ಬೇಡ ಎಂದು ಅವರು ಭಾರತಕ್ಕೆ ವಾಪಸ್ಸು ಬಂದಿದ್ದರಂತೆ. ಅಮೆರಿಕದಲ್ಲಿದ್ದಾಗ ಸಾಕಷ್ಟು ಕಾಲೆಳೆತ್ತಕ್ಕೆ ತುತ್ತಾಗಿದ್ದ ಪ್ರಿಯಾಂಕಾ, ಇಲ್ಲಿ ಜನರಿಂದ ಪ್ರೀತಿ ಕಂಡು ಖುಷಿಯಾಗಿದ್ದಾರೆ. ಇಲ್ಲಿನ ಜನರ ಪ್ರೀತಿಯಿಂದ ಕ್ರಮೇಣ ಅಮೆರಿಕದ ಕೆಟ್ಟ ನೆನಪುಗಳೆಲ್ಲ ಮಾಸಿಹೋದವು ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ. -ಏಜೆನ್ಸೀಸ್