ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಇಡೀ ಬಾಲಿವುಡ್ ಚಿತ್ರರಂಗವನ್ನು ತಲ್ಲಣಗೊಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆರೋಪ-ಪ್ರತ್ಯಾರೋಪ ಕುರಿತು ಭಾರಿ ಚರ್ಚೆಯಾಗುತ್ತಿದೆ. ಇದರ ನಡುವೆ ಕೆಲವರ ವಿರುದ್ಧ ದೂರು ದಾಖಲಾಗಿದ್ದು, ಕಾರ್ಯಕ್ರಮವೊಂದರಲ್ಲಿ ಸುಶಾಂತ್ ಸಿಂಗ್ ವಿರುದ್ಧ ಮಾತನಾಡಿದ್ದ ಆಲಿಯಾ ಭಟ್ ವಿರುದ್ಧವೂ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಬೆಳವಣಿಗೆಯ ನಡುವೆ ಸುಶಾಂತ್ ಹಾಗೂ ಆಲಿಯಾ ಭಟ್ ಕುರಿತು ಕುತೂಹಲಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಸುಶಾಂತ್ ಅಭಿನಯದ ರಾಬ್ತಾ ಚಿತ್ರಕ್ಕೆ ಕೃತಿ ಸೆನನ್ ಬದಲು ಮೊದಲು ಆಲಿಯಾ ಭಟ್ ಆಯ್ಕೆಯಾಗಿದ್ದರಂತೆ? ಆದರೆ, ಈ ಚಿತ್ರವನ್ನು ಡೇಟ್ ಹೊಂದಾಣಿಗೆ ಕಾರಣದಿಂದ ತೊರೆದಿದ್ದಕ್ಕೆ 2015ರಲ್ಲಿ ಆಲಿಯಾ ಭಾರಿ ಸುದ್ದಿಯಾಗಿದ್ದರು. ಇದನ್ನೂ ಓದಿ: ಮಹೇಶ್ ಎದುರು ಕನ್ನಡ ಸ್ಟಾರ್: ಪ್ರಿನ್ಸ್ ಜತೆ ನಟಿಸಲಿರುವ ನಟ ಯಾರು?
ಆದರೆ ಮೂಲಗಳ ಪ್ರಕಾರ ಆಗ ತಾನೇ ರಾಬ್ತಾ ಚಿತ್ರ 4 ತಿಂಗಳ ಪ್ರೀ ಪ್ರೊಡಕ್ಸನ್ ಹಂತದಲ್ಲಿ ಇತ್ತು. ನಿರ್ದೇಶಕ ಹೋಮಿ ಆದ್ಜಾನಿಯಾ ನಿರಂತರವಾಗಿ ಸ್ಕ್ರಿಪ್ಟ್ ಬರೆಯುತ್ತಿದ್ದರು. ಎಲ್ಲ ಕೆಲಸವು ಮಾರ್ಚ್ನಲ್ಲಿ ಮುಗಿಯಿತು. ಮೇ ತಿಂಗಳಲ್ಲಿ ಸಿನಿಮಾ ಆರಂಭವಾಗಬೇಕು ಎನ್ನುವಷ್ಟರಲ್ಲಿ ಆಲಿಯಾ ಚಿತ್ರತಂಡದಿಂದ ಆಚೆ ಬಂದಿದ್ದರು. ಆ ವೇಳೆ ಆಲಿಯಾಗೆ ಯಾವುದೇ ಡೇಟ್ ಇರಲಿಲ್ಲ. ತಮ್ಮ ಮಾರ್ಗದರ್ಶಕರ ನಿರ್ಮಾಣದ ಶುದ್ಧಿ ಚಿತ್ರದಲ್ಲಿ ತೊಡಗಿಸಿಕೊಂಡರು. ಸ್ಟುಡೆಂಟ್ ಆಫ್ ದಿ ಇಯರ್ ಮತ್ತು ಹಂಪ್ಟಿ ಕಿ ದುಲೇನಿಯಾ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದ ವರುಣ್ ಧವನ್ ಜತೆ ಆಲಿಯಾ ಅಭಿನಯಿಸಲು ಮುಂದಾದರು.
ಇತ್ತ ರಾಬ್ತಾ ಚಿತ್ರದಿಂದ ಆಲಿಯಾ ಹೊರಬರುತ್ತಿದ್ದಂತೆ ಸುಶಾಂತ್ ಸಿಂಗ್ ರಜಪೂತ್ ಆಲಿಯಾ ವಿರುದ್ಧ ಕೋಪಗೊಂಡಿದ್ದರು. ಅಲ್ಲದೇ ಟ್ವೀಟ್ ಮೂಲಕವು ಆಕ್ರೋಶ ವ್ಯಕ್ತಪಡಿಸಿದ್ದರು. 2015, ಜೂನ್ 2ರಂದು ಟ್ವೀಟ್ ಮಾಡಿದ್ದ ಸುಶಾಂತ್, ವೈಯಕ್ತಿಕ ಲಾಭಕ್ಕಾಗಿ ಕೆಲ ಜನರು ಇತರರ ಪ್ರಾಜೆಕ್ಟ್ ಅನ್ನು ಹೇಗೆ ನಾಶಮಾಡಿಬಿಡುತ್ತಾರೆ ಎಂಬುದು ತಮಾಷೆಯಾಗಿದೆ ಎಂದು ಜರಿದಿದ್ದರು. ಇದನ್ನೂ ಓದಿ: ಆಪ್ತ ಸಮಾಲೋಚನೆ: ಹದಿಹರೆಯದ ಮಕ್ಕಳು ಮಾತು ಕೇಳುತ್ತಿಲ್ಲ, ಪರಿಹಾರವೇನು?
ಇನ್ನು ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸುಶಾಂತ್ ಸಿಂಗ್ ರಜಪೂತ್ ಯಾರು ಎಂದು ಕೇಳಿದ್ದ ಆಲಿಯಾ ಭಟ್ ವಿರುದ್ಧ ಹಾಗೂ ಕಾರ್ಯಕ್ರಮ ನಿರೂಪಕ ಕರಣ್ ಜೋಹರ್ ವಿರುದ್ಧ ಈಗಾಗಲೇ ಭಾರಿ ಆಕ್ರೋಶ ವ್ಯಕ್ತವಾಗಿದೆ. (ಏಜೆನ್ಸೀಸ್)