Gautami Kapoor : ತನ್ನ ಮಗಳ ಹುಟ್ಟುಹಬ್ಬದಂದು ಸೆಕ್ಸ್ ಟಾಯ್ (ಲೈಂಗಿಕ ಆಟಿಕೆ) ಉಡುಗೊರೆಯಾಗಿ ನೀಡಲು ಬಯಸಿದ್ದೆ ಎಂಬ ನಟಿಯ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಾರಣ ಅದಕ್ಕೆ ಸಂಬಂಧಿಸಿದ ವಿಡಿಯೋ ಮತ್ತೊಮ್ಮೆ ವೈರಲ್ ಆಗುತ್ತಿದೆ.
ಗೌತಮಿ ಕಪೂರ್ ಓರ್ವ ಖ್ಯಾತ ಕಿರುತೆರೆ ನಟಿ. ತನ್ನ ಮಗಳು ಸಿಯಾಗೆ ಆಕೆಯ 16 ನೇ ಹುಟ್ಟುಹಬ್ಬದಂದು ಸೆಕ್ಸ್ ಟಾಯ್ ಉಡುಗೊರೆಯಾಗಿ ನೀಡಲು ಬಯಸಿದ್ದಾಗಿ ಬಹಿರಂಗಪಡಿಸಿದ್ದರು. ಹಿಂದೊಮ್ಮೆ ಸಂದರ್ಶನದಲ್ಲಿ ಈ ಮಾತನ್ನು ಹೇಳಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದ್ದು, ಮತ್ತೆ ಚರ್ಚೆ ಭುಗಿಲೆದ್ದಿದೆ.
ಮೇ ತಿಂಗಳಲ್ಲಿ ಹೌಟರ್‌ಫ್ಲೈಗೆ ನೀಡಿದ ಸಂದರ್ಶನದಲ್ಲಿ, ಗೌತಮಿ ಕಪೂರ್ ತನ್ನ ಮಗಳಿಗೆ ಲೈಂಗಿಕ ಆಟಿಕೆಯನ್ನು ಉಡುಗೊರೆಯಾಗಿ ನೀಡಲು ಬಯಸಿದ್ದಾಗಿ ಬಹಿರಂಗಪಡಿಸಿದರು. ಭಾರತದ ಪಾಲಕರು ತಮ್ಮ ಹದಿಹರೆಯದ ಮಕ್ಕಳೊಂದಿಗೆ ಲೈಂಗಿಕತೆಯ ಬಗ್ಗೆ ಮಾತನಾಡಲು ಎರಡೆರಡು ಬಾರಿ ಯೋಚಿಸುವ ಸಂದರ್ಭದಲ್ಲಿ ಗೌತಮಿ ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ದಾರಿ ಮಾಡಿಕೊಟ್ಟಿತು. ಆದರೆ, ಬಹುತೇಕ ಮಂದಿ ಗೌತಮಿ ಪರವಾಗಿ ಬ್ಯಾಟ್ ಬೀಸಿದರು. ಏಕೆಂದರೆ, ಅವರು ಕೊಟ್ಟ ಕಾರಣವನ್ನು ಬಹುತೇಕ ಮಂದಿ ಒಪ್ಪಿಕೊಂಡರು.
ನನ್ನ ಮಗಳಿಗೆ ಹದಿನಾರು ವರ್ಷ ತುಂಬಿದಾಗ ಸೆಕ್ಸ್ ಟಾಯ್ ಅಥವಾ ವೈಬ್ರೇಟರ್ ಉಡುಗೊರೆಯಾಗಿ ನೀಡುವ ಬಗ್ಗೆ ಯೋಚಿಸುತ್ತಿದ್ದೆ. ನಾನು ಅವಳೊಂದಿಗೆ ಅದರ ಬಗ್ಗೆ ಚರ್ಚಿಸಿದಾಗ, ಅಮ್ಮನಿಗೆ ಹುಚ್ಚು ಹಿಡಿದಿದೆಯೇ? ಎಂದು ಕೇಳಿದಳು. ಎಷ್ಟು ತಾಯಂದಿರು ತಾನೇ ತಮ್ಮ ಹೆಣ್ಣುಮಕ್ಕಳ ಬಳಿ ಹೋಗಿ ನಾನೇಕೆ ಇಂತಹ ವಸ್ತುಗಳನ್ನು ಉಡುಗೊರೆ ಕೊಡಬಾರದು ಎಂದು ಕೇಳುತ್ತಾರೆ ಒಮ್ಮೆ ಯೋಚಿಸು ನೋಡು ಎಂದೆ. ಏಕೆ ಪ್ರಯೋಗಿಸಬಾರದು? ಎಂದು ಸಂದರ್ಶನದಲ್ಲಿ ಹೇಳಿದ್ದರು.
ಮಾತು ಮುಂದುವರಿಸಿದ್ದ ಗೌತಮಿ ಕಪೂರ್, ನನ್ನ ತಾಯಿ ನನಗಾಗಿ ಮಾಡಿದ್ದನ್ನು ನಾನು ನನ್ನ ಮಗಳಿಗಾಗಿ ಮಾಡಿದ್ದೇನೆ. ಅವಳು ಎಲ್ಲ ಸುಖಗಳನ್ನು ಅನುಭವಿಸಬೇಕೆಂದು ನಾನು ಬಯಸಿದ್ದೆ. ಅನೇಕ ಮಹಿಳೆಯರು ಅಂತಹ ಸುಖಗಳನ್ನು ಅನುಭವಿಸದೆ ಜೀವನವನ್ನು ನಡೆಸುತ್ತಾರೆ. ಯಾಕೆ ಹೀಗೆ? ಇಂದು ನನ್ನ ಮಗಳಿಗೆ 19 ವರ್ಷ. ಅಂತಹ ಅನುಭವ ನೀಡಿದ್ದಕ್ಕಾಗಿ ನನ್ನ ಮಗಳು ನನ್ನನ್ನು ಗೌರವಿಸುತ್ತಾಳೆ ಎಂದು ಗೌತಮಿ ಸಂದರ್ಶನದಲ್ಲಿ ಹೇಳಿದರು.
ಅಂದಹಾಗೆ, ಗೌತಮಿ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬಂದರೆ, ರಾಮ್ ಕಪೂರ್ ಅವರನ್ನು ಘರ್ ಏಕ್ ಮಂದಿರ್ ಎಂಬ ದೂರದರ್ಶನ ಕಾರ್ಯಕ್ರಮದ ಸೆಟ್‌ಗಳಲ್ಲಿ ಭೇಟಿಯಾದರು. ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ದಂಪತಿ 2003 ರಲ್ಲಿ ವಿವಾಹವಾದರು. ಅವರು ಸಿಯಾ ಮತ್ತು ಅಕ್ಸ್ ಕಪೂರ್ ಎಂಬ ಇಬ್ಬರು ಮಕ್ಕಳ ಪಾಲಕರಾಗಿದ್ದಾರೆ. ಗೌತಮಿ ಆಗಾಗ್ಗೆ ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್‌ಗಳಲ್ಲಿ ಫ್ಯಾಮ್‌ಜಾಮ್ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ.
ಗೌತಮಿ ಅವರು ಕೊನೆಯ ಬಾರಿಗೆ 2024ರಲ್ಲಿ ಬಿಡುಗಡೆಯಾದ ಗ್ಯಾರಾ ಗ್ಯಾರಾ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. ಕೃತಿಕಾ ಕಮ್ರಾ, ರಾಘವ್ ಜುಯಾಲ್, ಧೈರ್ಯ ಕರ್ವಾ ಮತ್ತು ಆಕಾಶ್ ದೀಕ್ಷಿತ್ ಅವರನ್ನೂ ಒಳಗೊಂಡ ಈ ಫ್ಯಾಂಟಸಿ ಥ್ರಿಲ್ಲರ್, ಜನಪ್ರಿಯ ಕೊರಿಯನ್ ನಾಟಕ ಸಿಗ್ನಲ್‌ನ ರಿಮೇಕ್ ಆಗಿದೆ. (ಏಜೆನ್ಸೀಸ್)