ಭಾರತೀಯ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಬಾಹುಬಲಿ, ಇಂದಿಗೂ ಮಾಸ್ಟರ್ಪೀಸ್ ಸಿನಿಮಾ. ಈಗಷ್ಟೇ ಈ ಸಿನಿಮಾ ಬಿಡುಗಡೆ ಆಗಿದೆ ಎನಿಸುತ್ತದೆ. ಅಷ್ಟೊಂದು ಫ್ರೆಶ್ ಆಗಿದೆ ಅದರ ದೃಶ್ಯಾವಳಿಗಳು. ಅಷ್ಟಕ್ಕೂ ಈಗ್ಯಾಕೆ ಬಾಹುಬಲಿ ವಿಷಯ ಬಂತು ಎಂಬುದು ನಿಮಗೆ ಕುತೂಹಲ ಇರಬಹುದು. ಅದಕ್ಕೂ ಉತ್ತರ ಇದೆ.
ಹೌದು, ಜುಲೈ 6, 2013ಕ್ಕೆ ಬಾಹುಬಲಿ ಚಿತ್ರದ ಮೊದಲ ದಿನದ ಶೂಟಿಂಗ್ಗೆ ಚಾಲನೆ ನೀಡಲಾಗಿತ್ತು. ಅಂದರೆ ಸೋಮವಾರಕ್ಕೆ ಸರಿಯಾಗಿ ಏಳು ವರ್ಷಗಳ ಹಿಂದೆ ಈ ಚಿತ್ರ ಶುರುವಾಗಿತ್ತು. ಅದನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡು ಮತ್ತೆ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ ರಾಜಮೌಳಿ.
ಇದನ್ನೂ ಓದಿ: PHOTOS| ಥ್ರಿಲ್ ನೀಡಲು ಅಪ್ಸರಾ ರೆಡಿ: ಹಾಟ್ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಆರ್ಜಿವಿ!
ಪ್ರಭಾಸ್, ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣ ಸೇರಿ ಹಲವು ಸ್ಟಾರ್ ಕಲಾವಿದರೆಲ್ಲ ಬಾಹುಬಲಿ ಸರಣಿಯ ಭಾಗವಾಗಿದ್ದರು. ಆ ಸರಣಿಯ ಸಿನಿಮಾದಿಂದ ಬಹುತೇಕ ಎಲ್ಲರ ಸಿನಿಮಾ ಗ್ರಾಫ್ ಸಹ ಏರಿಕೆ ಕಂಡಿತ್ತು. ಪ್ರಭಾಸ್ ಪ್ಯಾನ್ ಇಂಡಿಯಾ ಹೀರೋ ಆಗಿ ಬೆಳೆದರು. (ಏಜೆನ್ಸೀಸ್)