ಸಿನಿವಾಣಿ

ಇಲ್ಲಿ ಏನಾಗ್ತಿದೆ ಹೇಳಿ? ತಲೆಗೆ ಹುಳ ಬಿಟ್ಟ ಪ್ರಶಾಂತ್​ ನೀಲ್​

chetannadiger

ಲಾಕ್​ಡೌನ್​ ಮುಗಿದು ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳೆಲ್ಲಾ ಶುರುವಾದ ಮೇಲೆ, 'ಕೆಜಿಎಫ್​ 2' ಚಿತ್ರದ ಪೋಸ್ಟ್​-ಪ್ರೊಡಕ್ಷನ್​ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ನಿರ್ದೇಶಕ ಪ್ರಶಾಂತ್​ ನೀಲ್​, ಇದೀಗ ನೆಟ್ಟಿಗರ ತಲೆಗೆ ಹುಳ ಬಿಟ್ಟಿದ್ದಾರೆ.

ಇಂದು ಅವರೊಂದು ಪೋಸ್ಟ್​ ಹಾಕಿದ್ದಾರೆ. ಯಶ್​ ಮತ್ತು ಅವರ ಸಂದರ್ಶನದ ಫೋಟೊಗಳನ್ನು ಶೇರ್​ ಮಾಡುವುದರ ಜತೆಗೆ, 'ಇಲ್ಲಿ ಏನಾಗ್ತಿದೆ ಅಂತ ಗೆಸ್​ ಮಾಡಿ' ಎಂದು ಹೇಳುವ ಮೂಲಕ ನೆಟ್ಟಿಗರ ತಲೆಗೆ ಹುಳ ಬಿಟ್ಟಿದ್ದಾರೆ. ಇಷ್ಟಕ್ಕೂ ಯಶ್​ ಮತ್ತು ಪ್ರಶಾಂತ್​ ಸಂದರ್ಶನ ನೀಡುತ್ತಿರುವುದಾದರೂ ಏಕೆ? ಏನಾದರೂ ದೊಡ್ಡ ಅನೌನ್ಸ್​ಮೆಂಟ್​ ಕಾದಿದೆಯಾ? ಎಂಬುದನ್ನು ಪ್ರಶಾಂತ್​ ಹೇಳಿಲ್ಲ. ಎಲ್ಲವನ್ನೂ ನೆಟ್ಟಿಗರಿಗೇ ಬಿಟ್ಟಿದ್ದಾರೆ.

ಇನ್ನು ಪ್ರಶಾಂತ್​ ಎಸೆದ ಸವಾಲನ್ನು ಸ್ವೀಕರಿಸಿರುವ ಹಲವರು, ತಮಗೆ ತೋಚಿದ್ದನ್ನು ಉತ್ತರಿಸಿದ್ದಾರೆ. ಪ್ರಮುಖವಾಗಿ 'ಕೆಜಿಎಫ್​' ಚಿತ್ರವು ತೆಲುಗು ಚಾನಲ್​ವೊಂದರಲ್ಲಿ ಸದ್ಯದಲ್ಲೇ ಪ್ರೀಮಿಯರ್​ ಆಗಲಿದ್ದು, ಆ ಕುರಿತು ಅವರು ಸಂದರ್ಶನ ನೀಡಿದ್ದಾರೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ಕೆಲವರು 'ಕೆಜಿಎಫ್​ 2' ಚಿತ್ರದ ಬಗ್ಗೆ ಏನಾದರೂ ಅಪಡೇಟ್​ ಕೊಡುತ್ತಿರಬಹುದು ಎಂದು ಹೇಳಿದ್ದಾರೆ. ಹಲವು ಅಭಿಪ್ರಾಯಗಳು ಕೇಳಿ ಬರುತ್ತಿದ್ದರೂ, ಪ್ರಶಾಂತ್ ನೀಲ್​ ಮಾತ್ರ ಸಂದರ್ಶನ ನೀಡುತ್ತಿರುವ ಬಗ್ಗೆ ರಹಸ್ಯ ಕಾಪಾಡಿಕೊಂಡಿದ್ದಾರೆ.

‘ಕೆಜಿಎಫ್​ 2’ ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿದಿದ್ದು, ಇನ್ನೂ ಕೆಲವು ದಿನಗಳ ಚಿತ್ರೀಕರಣ ಬಾಕಿ ಇದೆ. ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್ ಮುಂತಾದವರು ನಟಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲಂಸ್‌ನಡಿ ವಿಜಯಕುಮಾರ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ.