ಸಿನಿವಾಣಿ

ಇದುವರೆಗೂ ಮಹೇಶ್​ ಬಾಬು ಒಂದೇ ಒಂದು ಪ್ಯಾನ್​ ಇಂಡಿಯಾ ಸಿನಿಮಾ ಮಾಡಿಲ್ಲ ಏಕೆ? ಇಲ್ಲಿದೆ ಅಚ್ಚರಿ ಕಾರಣ! Mahesh Babu

Mahesh Babu : ಇಡೀ ಚಿತ್ರರಂಗದಲ್ಲಿ ಇಂದು ಪ್ಯಾನ್​ ಇಂಡಿಯಾ ಕಲ್ಪನೆ ಆವರಿಸಿಕೊಂಡಿದೆ. ಅದರಲ್ಲೂ ಸ್ಟಾರ್​ ನಾಯಕರು ಮಾಡುತ್ತಿರುವ ಪ್ರತಿಯೊಂದು ಸಿನಿಮಾಗಳು ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗುತ್ತಿವೆ. ತೆಲುಗು, ಕನ್ನಡ ಹಾಗೂ ತಮಿಳಿನ ಬಹುತೇಕ ಎಲ್ಲ ಸ್ಟಾರ್​ ನಟರು ಪ್ಯಾನ್​ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ.

ಆದರೆ, ತೆಲುಗಿನ ಸೂಪರ್​ಸ್ಟಾರ್​ ಮಹೇಶ್​ ಬಾಬು, ಈವರೆಗೆ ಒಂದೇ ಒಂದು ಪ್ಯಾನ್​ ಇಂಡಿಯಾ ಸಿನಿಮಾ ಮಾಡಿಲ್ಲ. ಇದು ನಿಜಕ್ಕೂ ಅಚ್ಚರಿಯ ಸಂಗತಿಯೇ ಸರಿ. ಏಕೆಂದರೆ, ಮಹೇಶ್​ ಬಾಬು ಸಾಮಾನ್ಯ ನಟರಲ್ಲ. ಅವರೊಬ್ಬ ಸೂಪರ್​ಸ್ಟಾರ್​. ಹೀಗಾಗಿ ಪ್ಯಾನ್​ ಇಂಡಿಯಾ ಸಿನಿಮಾ ಏಕೆ ಮಾಡಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕೆ ಕಾರಣ ಏನೆಂಬುದು ಇದೀಗ ಬಹಿರಂಗವಾಗಿದೆ.

ತಮ್ಮ ಸಹನಟರು ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಸೂಪರ್ ಯಶಸ್ಸನ್ನು ಸಾಧಿಸುತ್ತಿರುವಾಗ, ಇಲ್ಲಿಯವರೆಗೆ ಮಹೇಶ್​ ಬಾಬು ಏಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ವಾಸ್ತವವಾಗಿ, ಮಹೇಶ್​ ಬಾಬು ಅವರಿಗೆ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಆಸಕ್ತಿ ಇರಲಿಲ್ಲ ಏಕೆಂದರೆ, ಅವರಿಗೆ ಬಂದ ಸ್ಕ್ರಿಪ್ಟ್‌ಗಳು ಪ್ಯಾನ್ ಇಂಡಿಯಾ ಕಥೆಗಳಾಗಿರಲಿಲ್ಲ ಎಂದು ತಿಳಿದುಬಂದಿದೆ.

ಸದ್ಯ ಮಹೇಶ್​ ಬಾಬು, ರಾಜಮೌಳಿ ಅವರೊಂದಿಗೆ ಕೆಲಸ ಮಾಡುತ್ತಿರುವ ಸಿನಿಮಾವೂ ಪ್ಯಾನ್ ಇಂಡಿಯಾ ಕತೆಯನ್ನು ಹೊಂದಿದೆ. ಅಲ್ಲದೆ, ಪ್ಯಾನ್​ ವರ್ಲ್ಡ್​ಗೂ ಲಿಂಕ್​ ಆಗಲಿದ್ದು, ಆ ಸಿನಿಮಾದ ಮೂಲಕ ಒಂದೇ ಬಾರಿ ಪ್ಯಾನ್ ವರ್ಲ್ಡ್ ಅನ್ನು ಅಲ್ಲಾಡಿಸಲು ಮಹೇಶ್​ ಬಾಬು ಅವರು ಎದುರು ನೋಡುತ್ತಿದ್ದಾರೆ. ರಾಜಮೌಳಿ ಅವರ ಸಿನಿಮಾದೊಂದಿಗೆ ಮಹೇಶ್​ ಬಾಬು ಅವರು ದೊಡ್ಡ ಯಶಸ್ಸನ್ನು ಸಾಧಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

ಏನೇ ಇರಲಿ, ಮಹೇಶ್ ಬಾಬು ಓರ್ವ ಉತ್ತಮ ನಟ ಅನ್ನೋದರಲ್ಲಿ ಯಾವುದೇ ಡೌಟ್​ ಇಲ್ಲ. ತೆಲುಗು ಚಿತ್ರರಂಗದಲ್ಲಿ ಇಲ್ಲಿಯವರೆಗೆ ಯಾರೇ ಯಶಸ್ಸು ಸಾಧಿಸಿದ್ದರೂ, ಮಹೇಶ್ ಬಾಬು ಅವರ ಸಾಧನೆ ಅವರೆಲ್ಲರಿಗಿಂಗ ಒಂದು ಹೆಜ್ಜೆ ಮುಂದಿರುತ್ತದೆ. ಮಹೇಶ್​ ಬಾಬು ಅವರು ಮಾಡಿದ ಪ್ರತಿಯೊಂದು ಚಿತ್ರವೂ ಪ್ರೇಕ್ಷಕರನ್ನು ಮೆಚ್ಚಿಸಿದೆ ಮತ್ತು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದೆ. ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ಅವರ ಮೊದಲ ಚಿತ್ರ ಇದಾಗಿದ್ದರೂ, ಅವರಿಬ್ಬರ ಕಾಂಬಿನೇಷನ್​ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ. ಈ ಚಿತ್ರ ಆ ನಿರೀಕ್ಷೆಗಳನ್ನು ಪೂರೈಸುತ್ತದೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ. (ಏಜೆನ್ಸೀಸ್​)