ಅಂಡಮಾನ್: ಬಾಲಿವುಡ್ನ ಜನಪ್ರಿಯ ಹಿರಿಯ ನಟಿಯರಾದ ವಹೀದಾ ರೆಹಮಾನ್, ಆಶಾ ಪರೇಖ್ ಮತ್ತು ಹೆಲನ್ ಇದೀಗ ಅಂಡಮಾನ್ನಲ್ಲಿ ಹಾಲಿಡೇ ಮೂಡ್ನಲ್ಲಿದ್ದಾರೆ. ಹಲವು ದಿನಗಳಿಂದ ಅಲ್ಲೇ ಬೀಡುಬಿಟ್ಟಿರುವ ಅವರ ಫೋಟೋಗಳನ್ನು ತನುಜ್ ಗಾರ್ಗ್ ಎಂಬ ನಿರ್ದೇಶಕರು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
50 ಮತ್ತು 60ರ ದಶಕದ ಜನಪ್ರಿಯ ನಟಿಯರಾದ ಆಶಾ ಪರೇಖ್, ವಹೀದಾ ರೆಹಮಾನ್ ಮತ್ತು ಹೆಲನ್ ಅವರದ್ದು ಐದು ದಶಕಗಳ ಸ್ನೇಹ. ಇತ್ತೀಚಿನ ವರ್ಷಗಳಲ್ಲಿ ನಟನೆಯಿಂದ ದೂರವಾದರೂ, ಸ್ನೇಹವನ್ನು ಕಾಪಾಡಿಕೊಂಡಿರುವ ಈ ನಟಿಯರು, ಬಿಡುವಿದ್ದಾಗ ಆಗಾಗ ಭೇಟಿಯಾಗುತ್ತಿರುತ್ತಾರೆ. ಇತ್ತೀಚೆಗೆ, ಈ ಮೂವರೂ ತಮ್ಮ ಕುಟುಂಬದವರ ಸಮೇತ ಅಂಡಮಾನ್ ದ್ವೀಪಗಳಿಗೆ ಸಮಯ ಕಳೆಯುವುದಕ್ಕೆ ಹೋಗಿದ್ದಾರೆ.
ಈ ಸಂದರ್ಭದಲ್ಲಿ ಅವರು ದೂರದ ದ್ವೀಪಗಳಿಗೆ ಹಡಗಿನ ಮೂಲಕ ಹೋಗುವುದರ ಜೊತೆಗೆ, ಅಲ್ಲಿ ಸ್ನೋರ್ಕೆಲ್ಲಿಂಗ್ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಆ ಫೋಟೋಗಳನ್ನು ಹಂಚಿಕೊಂಡಿರುವ ತನುಜ್, ಒಂದು ಪಕ್ಷ ದಿಲ್ ಚಾಹ್ತಾ ಹೈ ಚಿತ್ರವನ್ನೇನಾದರೂ ಮರುಸೃಷ್ಟಿ ಮಾಡಿದರೆ, ಬಾಲಿವುಡ್ನ ಈ ಜನಪ್ರಿಯ ಹಿರಿಯ ನಟಿಯರ ಜೊತೆಗೆ ಮಾಡಬೇಕು. ತಮ್ಮ ನಿವೃತ್ತಿಯ ದಿನಗಳನ್ನು ಮಜವಾಗಿ ಕಳೆಯುತ್ತಿರುವ ಆಶಾ ಪರೇಖ್, ವಹೀದಾ ರೆಹಮಾನ್ ಮತ್ತು ಹೆಲನ್ ಇದೀಗ ಅಂಡಮಾನ್ನಲ್ಲಿ ಮಜವಾದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಈ ಫೋಟೋಗಳನ್ನು ನೋಡಿ ನನ್ನ ಮುಖದಲ್ಲೊಂದು ಸ್ಮೈಲ್ ಬಂತು … ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.