ಸಿನಿವಾಣಿ

ಮಾರಕ ಕರೊನಾ ವೈರಸ್​ನಿಂದ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್​ ಪಾರು!

ಬೆಂಗಳೂರು: ಚೀನಾದಲ್ಲಿ ಸ್ಪೋಟಗೊಂಡು ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವ ಕರೊನಾ ವೈರಸ್​ ಇಡೀ ಜಗತ್ತನ್ನು ಆವರಿಸಿ, ಭೀತಿ ಸೃಷ್ಟಿಸಿದೆ. ಇಂತಹ ಸಮಯದಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್​ ಪುತ್ರ ವಿಕ್ರಮ್​ ನಿಟ್ಟುಸಿರು ಬಿಡುತ್ತಿದ್ದಾರೆ.

ಅದಕ್ಕೆ ಕಾರಣ ಕರೋನಾ ವೈರಸ್​ನಿಂದ ವಿಕ್ರಮ್​ ಪಾರಾಗಿರುವುದು. ವೈರಸ್ ಹರಡುವ ಆರಂಭದಲ್ಲೇ ತಿವಿಕ್ರಮ ಚಿತ್ರದ ಶೂಟಿಂಗ್​ಗಾಗಿ ಚಿತ್ರತಂಡ ಬ್ಯಾಂಕಾಕ್​ಗೆ ತೆರಳಿತ್ತು. ರವಿಚಂದ್ರನ್ ಎರಡನೇ ಪುತ್ರರಾಗಿರುವ ವಿಕ್ರಮ್ ಈ​ ಚಿತ್ರದ ನಾಯಕ.

ಜನವರಿ ತಿಂಗಳಲ್ಲಿ ಚಿತ್ರೀಕರಣಕ್ಕಾಗಿ ಚಿತ್ರತಂಡ ತೆರಳಿತ್ತು. ಆ ವೇಳೆಗೆ ಚೀನಾದಲ್ಲಿ ಕರೊನಾ ವೈರಸ್ ಹರಡುತಿತ್ತು. ಆದರೆ, ಆ ವೇಳೆ ವೈರಸ್ ಬಗ್ಗೆ ಯಾವುದೇ ಆಲೋಚನೆ ಚಿತ್ರತಂಡಕ್ಕೆ ಇರಲಿಲ್ಲ. ಶೂಟಿಂಗ್​ ಮುಗಿಸಿ ಭಾರತಕ್ಕೆ ವಾಪಸ್ಸಾದ ತಂಡ ಇದೀಗ ನಿಟ್ಟುಸಿರುವ ಬಿಡುತ್ತಿದೆ.

ತ್ರಿವಿಕ್ರಮ ಚಿತ್ರವನ್ನು ಸಹನ ಮೂರ್ತಿಯವರು ನಿರ್ದೇಶನ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)