ಚೆನ್ನೈ: ಕಾಲಿವುಡ್ ನಟ ವಿಜಯ್ ಅವರ ಹುಟ್ಟುಹಬ್ಬಕ್ಕೆ, ಅವರ ಹೊಸ ಚಿತ್ರದ ತಂಡದಿಂದ ಒಂದು ಸರ್ಪ್ರೈಸ್ ಎಂಬ ಸುದ್ದಿ ಮೂರ್ನಾಲ್ಕು ದಿನಗಳಿಂದ ಕೇಳಿಬರುತ್ತಲೇ ಇತ್ತು. ಅದರಂತೆ ನಾಳೆ (ಜೂನ್ 22) ವಿಜಯ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಏನು ಸರ್ಪ್ರೈಸ್ ಕೊಡಬಹುದು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರೂ. ಆದರೆ, ವಿಜಯ್ ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚೆಯೇ, ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಯೋಗಪುರುಷ … ಭಾರತೀಯ ಚಿತ್ರರಂಗದ ಮೊದಲ ಯೋಗ ಐಕಾನ್
ವಿಜಯ್ ಅಭಿನಯದ ಹೊಸ ಚಿತ್ರಕ್ಕೆ 'ಬೀಸ್ಟ್' ಎಂದು ಹೆಸರಿಡಲಾಗಿದೆ. ಬೀಸ್ಟ್ ಎಂದರೆ ಪ್ರಾಣಿ ಎಂದರ್ಥ. ಈ ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದರೆ, ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಿಸುತ್ತಿದೆ. ಇದು ವಿಜಯ್ ಅವರ 65ನೇ ಚಿತ್ರವಾಗಲಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
'ಬೀಸ್ಟ್' ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಏಪ್ರಿಲ್ನಲ್ಲಿ ಒಂದು ಹಂತದ ಚಿತ್ರೀಕರಣ ಜಾರ್ಜಿಯಾದಲ್ಲಿ ಮುಗಿದಿದೆ. ಎರಡನೆಯ ಹಂತದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಮುಂದಿನ ವರ್ಷದ ಸಂಕ್ರಾಂತಿಗೆ ಚಿತ್ರದ ಬಿಡುಗಡೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ, ಈ ಚಿತ್ರದಲ್ಲಿ ವಿಜಯ್ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಅಭಿನಯಿಸುತ್ತಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು, ಮನೋಜ್ ಪರಮಹಂಸ, 'ಬೀಸ್ಟ್' ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ.