ಸಿನಿವಾಣಿ

ನರೇಶ್​ರನ್ನು ತುಂಬಾ ಪ್ರೀತಿಯಿಂದ ಈ ಅಡ್ಡ ಹೆಸರಿಡಿದು ಕರೆಯುತ್ತಾರಂತೆ ಪವಿತ್ರಾ ಲೋಕೇಶ್! Vijaykrishna Naresh

Vijaykrishna Naresh : ಟಾಲಿವುಡ್ ನಟ ವಿಜಯಕೃಷ್ಣ ನರೇಶ್ (ವಿ.ಕೆ.ನರೇಶ್​) ಅವರು ತಮ್ಮ ವಿಶಿಷ್ಟ ಪಾತ್ರಗಳಿಂದಲೇ ಟಾಲಿವುಡ್‌ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಇತ್ತೀಚೆಗೆ 'ಬ್ಯೂಟಿ' ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಈ ಸುಂದರ ಪ್ರೇಮಕಥೆಯಲ್ಲಿ ನರೇಶ್​ ಅವರು ನಾಯಕಿಯ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅಂಕಿತ್ ಕೊಯ್ಯ ಮತ್ತು ನೀಲಖಿ ನಟಿಸಿರುವ ಈ ಚಿತ್ರ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ಪ್ರಚಾರದಲ್ಲಿ ಭಾಗವಹಿಸಿದ್ದ ನರೇಶ್ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ನರೇಶ್​ ಅವರ ಅಡ್ಡ ಹೆಸರುಗಳ ಬಗ್ಗೆ ಪ್ರಶ್ನೆ ಮಾಡಿದಾಗ, ನನ್ನ ತಾಯಿ ನನ್ನನ್ನು ನರಿ ಎಂದು ಕರೆಯುತ್ತಿದ್ದರು ಅಂತ ನರೇಶ್​ ಹೇಳಿದರು. ನರಿ ಎಂದರೆ ಇಂಗ್ಲಿಷ್​ನಲ್ಲಿ ಫಾಕ್ಸ್​. ತಮಿಳು ಹಾಗೂ ಕನ್ನಡ ಭಾಷೆಯಲ್ಲಿ ನರಿ ಎಂದರ್ಥ. ಶಾಲೆಯಲ್ಲಿ ನನ್ನ ಸ್ನೇಹಿತರು ಕೂಡ ನರಿ ಎಂದೇ ಕರೆಯುತ್ತಿದ್ದರು. ನಾನು ನನ್ನ ತಾಯಿಗೆ ಮುತ್ತಿಟ್ಟಾಗಲೆಲ್ಲ ನರಿ ಎಂದು ಕರೆಯುತ್ತಿದ್ದರು ಎಂದು ನರೇಶ್​ ಹೇಳಿದರು.

ಅಂದಹಾಗೆ, ನರೇಶ್ ಅವರು ಕೆಲವು ಸಮಯದಿಂದ ಹಿರಿಯ ನಟಿ ಪವಿತ್ರಾ ಲೋಕೇಶ್ ಅವರೊಂದಿಗೆ ಡೇಟಿಂಗ್ ಮಾಡಿದ್ದು ಗೊತ್ತೇ ಇದೆ. ಈ ವಿಚಾರ ಹಿಂದೊಮ್ಮೆ ಭಾರಿ ಸುದ್ದಿಯಾಯಿತು. ಇಬ್ಬರೂ ತಮ್ಮ ಮದುವೆಯನ್ನು ಅಧಿಕೃತವಾಗಿ ಘೋಷಿಸದಿದ್ದರೂ, ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದಾರೆ ಮತ್ತು ಮದುವೆಯಾಗಿರುವುದಾಗಿ ಎಲ್ಲರಿಗೂ ತಿಳಿಸಿದ್ದಾರೆ.

ಪವಿತ್ರಾ ಲೋಕೇಶ್ ತಮ್ಮನ್ನು ಹೇಗೆ ಕರೆಯುತ್ತಾರೆ ಎಂದು ಪ್ರಶ್ನೆ ಮಾಡಿದಾಗ ಉತ್ತರಿಸಿದ ನರೇಶ್, ಅವರು ನನ್ನನ್ನು ತುಂಬಾ ಗೌರವದಿಂದ ಕರೆಯುತ್ತಾರೆ ಎಂದು ಹೇಳಿದರು. ಅವರು ನನ್ನನ್ನು ರಾಯ ಎಂದು ಕರೆಯುತ್ತಾರೆ. ಆದರೆ, ಅದು ಅಡ್ಡಹೆಸರಿನ ವರ್ಗಕ್ಕೆ ಬರುವುದಿಲ್ಲ ಎಂದರು.

ಸಿನಿಮಾ ವಿಚಾರಕ್ಕೆ ಬಂದರೆ, ಅಂಕಿತ್ ಕೊಯ್ಯ ಮತ್ತು ನೀಲಖಿ, ಬ್ಯೂಟಿ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಜೀ ಸ್ಟುಡಿಯೋಸ್, ಮಾರುತಿ ಟೀಮ್ ಪ್ರಾಡಕ್ಟ್ಸ್ ಮತ್ತು ವಾನರ ಸೆಲ್ಯುಲಾಯ್ಡ್ ಬ್ಯಾನರ್‌ಗಳ ಅಡಿಯಲ್ಲಿ ವಿಜಯ್ ಪಾಲ್ ರೆಡ್ಡಿ ಅಡಿಡಾಲ ಮತ್ತು ಉಮೇಶ್ ಕುಮಾರ್ ಭನ್ಸಾಲ್ ನಿರ್ಮಿಸಿದ್ದಾರೆ. ಈ ಚಿತ್ರವನ್ನು ಗೀತಾ ಸುಬ್ರಮಣ್ಯಂ, ಹಲೋ ವರ್ಲ್ಡ್ ಮತ್ತು ಭಲೇ ಉನ್ನಾಡೆ ಖ್ಯಾತಿಯ ಜೆ.ಎಸ್.ಎಸ್. ವರ್ಧನ್ ನಿರ್ದೇಶಿಸಿದ್ದಾರೆ. (ಏಜೆನ್ಸೀಸ್​)