ಸಿನಿವಾಣಿ

‘ಸಾವಿತ್ರಿ’ ಚಿತ್ರಕ್ಕೆ ‘ಚಿನ್ನಾರಿ ಮುತ್ತ’ ವಿಜಯ ರಾಘವೇಂದ್ರ ನಾಯಕ

ಬೆಂಗಳೂರು: ಹಿರಿಯ ನಟಿ ತಾರಾ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿರುವ ಸಾವಿತ್ರಿ ಚಿತ್ರದ ನಾಯಕನಾಗಿ ವಿಜಯ ರಾಘವೇಂದ್ರ ಆಯ್ಕೆಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ನವೆಂಬರ್‌ 19 ರಿಂದ ಆರಂಭವಾಗಲಿದೆ. ಬೆಂಗಳೂರು ಸುತ್ತಮುತ್ತ 45 ದಿನಗಳ ಚಿತ್ರೀಕರಣ ನಡೆಯಲಿದೆ.

ಪಿ.ಎನ್.ಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಶಾಂತ್ ಕುಮಾರ್ (ಹೀಲಲ್ಲಿಗೆ) ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರಶಾಂತ್ ಕುಮಾರ್ ಮೂಲತಃ ಸಾಫ್ಟ್ ವೇರ್ ಉದ್ಯೋಗಿ. ಎಸ್ ದಿನೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ‌ ಮಾಡುತ್ತಿದ್ದಾರೆ. 'ಉಯ್ಯಾಲೆ' ನಂತರ ಇದು ನಿರ್ದೇಶಕರಿಗೆ ಎರಡನೇ ಚಿತ್ರ.

ಖ್ಯಾತ ಸಾಹಿತಿ ಹೃದಯ ಶಿವ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಗೀತರಚನೆ ಹಾಗೂ ಸಂಭಾಷಣೆ ಕೂಡ ಹೃದಯ ಶಿವ ಅವರದ್ದೇ. ಇಷ್ಟು ದಿನ ಗೀತರಚನೆಕಾರರಾಗಿದ್ದ ಹೃದಯ ಶಿವ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ತಾರಾ, ವಿಜಯ ರಾಘವೇಂದ್ರ ಜತೆಗೆ ಪ್ರಕಾಶ್ ಬೆಳವಾಡಿ, ಸಂಜು ಬಸಯ್ಯ(ಕಾಮಿಡಿ ಕಿಲಾಡಿಗಳು), ‌ಬೇಬಿ ಲೈಲಾ, ಪ್ರಮೋದ್ ಮುಂತಾದವರು ತಾರಾಬಳಗದಲ್ಲಿದ್ದಾರೆ.