ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್​ ದೇವರಕೊಂಡ 
ಸಿನಿವಾಣಿ

ಕರಣ್​ ಜೋಹರ್​ ಟಾಕ್​ ಶೋ ನಂತ್ರ ಟ್ರೋಲ್‌ಗಳ ಕಾಟ; ಕಾನೂನು ಸಮರಕ್ಕಿಳಿದ ವಿಜಯ್​-ರಶ್ಮಿಕಾ ದಂಪತಿ

  • ಕಾಫಿ ವಿತ್​​ ಕರಣ್​ ಜೋಹರ್​ ಟಾಕ್​ ಶೋ ನಂತರ ಹೆಚ್ಚಾದ ಟ್ರೋಲ್, ಸುಳ್ಳು ಸುದ್ದಿ.

  • ಟ್ರೋಲರ್ಸ್​​ ವಿರುದ್ಧ ಹೈದರಾಬಾದ್​ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ ವಿರೋಶ್ ತಂಡ.

  • ಪೋಸ್ಟ್​​, ಟ್ರೋಲ್ ಪೇಜ್​ಗಳ ಹೆಸರು ಉಲ್ಲೇಖಿಸಿ ದೂರು ಕೊಟ್ಟ ದಂಪತಿಯ ಕಾನೂನು ಪ್ರತಿನಿಧಿ.

Vijay Deverakonda-Rashmika Mandanna: ಕಾಫಿ ವಿತ್​ ಕರಣ್​ ಜೋಹರ್​ ಟಾಕ್​ ಶೋದಲ್ಲಿ ಭಾಗಿಯಾಗಿದ್ದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ ಅವರ ವಿಡಿಯೋಗಳು ವೈರಲ್ ಆಗಿ, ಟ್ರೋಲ್​ ಆಗಿದ್ದವು. ತಾರ ದಂಪತಿಯ ಬಗ್ಗೆ ಮಿತಿ ಮೀರಿ ಟೀಕೆ ಮಾಡಲಾಗುತ್ತಿದೆ. ಈ ಹಿನ್ನೆಲೆ ವಿಜಯ್​​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಹೌದು, ದಿನದಿಂದ ದಿನಕ್ಕೆ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಸಂಬಂಧದ ಬಗ್ಗೆ ಕಪೋಲಕಲ್ಪಿತ ಮಾತುಗಳು, ಟ್ರೋಲ್​ ಹೆಚ್ಚಾಗುತ್ತಿದೆ. ಹೀಗಾಗಿ ದಂಪತಿಗೆ ಸಂಬಂಧಿಸಿದ ಲೀಗಲ್​ ಟೀಂ ವೊಂದು, ಸದ್ಯ ಹೈದರಾಬಾದ್​ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದೆ.

ಟ್ರೋಲರ್ಸ್ ವಿರುದ್ಧ ದೂರು

ರಶ್ಮಿಕಾ ಮತ್ತು ವಿಜಯ್​ ದೇವರಕೊಂಡ ಅವರ ಕಾನೂನು ತಂಡದ ಪ್ರತಿನಿಧಿಯೊಬ್ಬರು, ಹೈದರಾಬಾದ್​ನ ಸೈಬರ್​ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ-ವಿಜಯ್​ ವಿರುದ್ಧ ಪೋಸ್ಟರ್​ಗಳು, ಸುಳ್ಳು ನಿರೂಪಣೆ, ನಕಲಿ ವಿಷಯ, ತಿರುಚಿದ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು ಸುಳ್ಳು ಮಾಹಿತಿ ಕೊಟ್ಟು ಜನರ ದಾರಿ ತಪ್ಪಿಸಲಾಗಿದೆ. ಅವರ ವೈಯಕ್ತಿ ಜೀವನವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಈ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ವೈಯಕ್ತಿಕ ಜೀವನದ ಮೇಲೆ ದಾಳಿ ಸರಿಯಲ್ಲ

'ನಾವು ವಾಕ್‌ಸ್ವಾತಂತ್ರ್ಯ, ವೈಯಕ್ತಿಕ ಅಭಿಪ್ರಾಯಗಳು ಮತ್ತು ಟೀಕೆಗಳನ್ನು ಗೌರವಿಸುತ್ತೇವೆ. ಆದರೆ, ಸದ್ಯ ಆಗುತ್ತಿರುವ ಟ್ರೋಲ್​ಗಳು ದಾರಿತಪ್ಪಿಸುವ ವಿಚಾರವಾಗಿದೆ. ವಿಮರ್ಶೆಯ ನೆಪದಲ್ಲಿ ದಂಪತಿಯ ವೈಯಕ್ತಿಕ ವಿಚಾರದ ಮೇಲೆ ದಾಳಿ ಮಾಡಲಾಗುತ್ತಿದೆ. ತಪ್ಪು ಸಾಬೀತಾದರೆ ಉದ್ದೇಶಪೂರ್ವಕವಾಗಿ ದಾರಿತಪ್ಪಿಸುವ ನಿರೂಪಣೆಗಳನ್ನು ಸೃಷ್ಟಿಸಿ, ವೈರಲ್​ ಮಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಕಾನೂನಿನ ಪ್ರಕಾರ ಈ ವಿಷಯದ ತನಿಖೆ ನಡೆಯಲಿದೆ ಎಂದು ನಾವು ಭಾವಿಸುತ್ತೇವೆ. ಕಾನೂನು ಮಾರ್ಗಗಳ ಮೂಲಕ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಗೌರವ ಮತ್ತು ಖ್ಯಾತಿಯನ್ನು ರಕ್ಷಿಸುವಂತೆ ಕೋರಿ ವಿರೂಷ್ ತಂಡವು ಹೈದರಾಬಾದ್​​ ಪೊಲೀಸರಿಗೆ ದೂರನ್ನು ಕೊಟ್ಟಿದೆ. ಜೊತೆಗೆ ಸಾಕ್ಷ್ಯಗಳು, ಸೋಶಿಯಲ್​ ಮೀಡಿಯಾ ಪೇಜ್​ಗಳ ಪಟ್ಟಿ, ಟ್ರೋಲರ್ಸ್​ ಖಾತೆಯ ಹೆಸರನ್ನು ಉಲ್ಲೇಖಿಸಲಾಗಿದೆ' ಎಂದು ವಿರೋಶ್​ ತಂಡವು ತಮ್ಮ ಪತ್ರಿಕಾ ಪ್ರಕಟಣೆಯನ್ನು ಹಂಚಿಕೊಂಡಿದೆ.

'ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಟ್ರೋಲ್ ಮಾಡುತ್ತಿರುವ ಹಿಂದೆ ಯಾರಾದರೂ ಶತ್ರುಗಳ ಸಂಚಿದೆಯೇ ಅಥವಾ ಪೇಡ್​ ಕ್ಯಾಂಪೇನ್ ನಡೆಸಲಾಗುತ್ತಿದೆಯೇ ಎನ್ನುವ ಪ್ರಕಾರದಲ್ಲೂ ತನಿಖೆ ನಡೆಸುವಂತೆ ತಿಳಿಸಿದೆ. ಸುಳ್ಳು ಸುದ್ದಿ ಹಬ್ಬಿಸುವವರು ಹಾಗೂ ಅವರ ಪೇಜ್​ ರೀಶೇರ್​​ ಮಾಡುವವರ ವಿರುದ್ಧವೂ ಕ್ರಮ ಕೈಹೊಳ್ಳಲಾಗುತ್ತದೆ. ಈ ದೂರು ಜನರ ವಿಮರ್ಶೆ ತಡೆಯಲು ಅಲ್ಲ. ವಿಮರ್ಶೆಯನ್ನು ಮುಂದಿಟ್ಟುಕೊಂಡು ನೇರವಾಗಿ ಅವರ ವೈಯಕ್ತಿಕ ವಿಚಾರದ ಮೇಲೆ ದಾಳಿ ಮಾಡಿ..ಸತ್ಯಕ್ಕೆ ದೂರವಾದ ವಿಚಾರವನ್ನು ಹರಡುವುದರ ವಿರುದ್ಧ ತೆಗೆದುಕೊಳ್ಳುತ್ತಿರುವ ಕ್ರಮವಷ್ಟೇ. ಅಭಿಮಾನಿಗಳು ಯಾವುದೇ ಆಧಾರವಿಲ್ಲದ ಮಾಹಿತಿಗಳನ್ನು ನಂಬಬೇಡಿ. ಊಹಾಪೋಹ, ನಕಲಿ ಪೋಸ್ಟರ್​ ಅನ್ನು ನಿಮ್ಮ ಖಾತೆಗಳಲ್ಲಿ ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದೆ' ವಿರೋಶ್ ತಂಡ.

ವಿಜಯ್ ದೇವರಕೊಂಡ ಅವರ ಪೋಸ್ಟ್

'ಕಾಫಿ ವಿತ್ ಕರಣ್ ಸೀಸನ್ 9' ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಂತರ ತಮ್ಮ ಮತ್ತು ಪತ್ನಿ ರಶ್ಮಿಕಾ ಮಂದಣ್ಣ ಅವರ ಸಂಬಂಧವನ್ನು ಟ್ರೋಲ್ ಮಾಡುತ್ತಿರುವವರಿಗೆ ವಿಜಯ್ ದೇವರಕೊಂಡ ತಕ್ಕ ತಿರುಗೇಟು ನೀಡಿದ್ದಾರೆ. ನನ್ನ ಅತ್ಯುತ್ತಮ ಸ್ನೇಹಿತೆ, ನನ್ನ ಹೆಂಡತಿ,ನನ್ನ ಜೀವನದ ಅತ್ಯಂತ ಸುಂದರವಾದ ಗಳಿಗೆಯಲ್ಲಿ ಮದುವೆ..ಸಂಬಂಧವೂ ಒಂದು. ನನಗೆ ಸರಿಯಾದ ಸಂಗಾತಿ ಸಿಕ್ಕಿದ್ದಾರೆ. ನಾವಿಬ್ಬರೂ ಖುಷಿಯಾಗಿದ್ದೇವೆ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು, (ಏಜೆನ್ಸೀಸ್).