ತೆಲುಗು ನಟ ವಿಕ್ಟರಿ ವೆಂಕಟೇಶ್ ಅಭಿನಯದ 75ನೇ ಚಿತ್ರ "ಸೈಂಧವ'. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ "ಹಿಟ್' ಸರಣಿಯ ಶೈಲೇಶ್ ಕೊಲನು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ವೆಂಕಟೇಶ್ಗೆ ನಾಯಕಿಯಾಗಿ "ಯೂರ್ಟನ್', "ಆಪರೇಷನ್ ಅಲಮೇಲಮ್ಮ' ಖ್ಯಾತಿಯ ಕನ್ನಡದ ನಟಿ ಸದ್ಯ ಟಾಲಿವುಡ್ನಲ್ಲಿ ಬಿಜಿಯಿರುವ ಶ್ರದ್ಧಾ ಶ್ರೀನಾಥ್ ಅಭಿನಯಿಸುತ್ತಿದ್ದಾರೆ. ಮನೋಜ್ಞಾ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚೆಗಷ್ಟೆ ದಕ್ಷಿಣ ಭಾರತದ ಹೆಸರಾಂತ ಸಾಹಸ ನಿರ್ದೇಶಕರಾದ ರಾಮ-ಲಕ್ಷ್ಮಣ ಜೋಡಿಯ ಸಾಹಸ ನಿರ್ದೇಶನದಲ್ಲಿ 18 ದಿನಗಳ ಕಾಲ ಚಿತ್ರದ ಕ್ಲೆಮ್ಯಾಕ್ಸ್ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದ ಮೂಲಕ ಬಾಲಿವುಡ್ ನಟ ನವಾಜುದ್ದಿನ್ ಸಿದ್ದಿಕಿ ಟಾಲಿವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ವೆಂಕಟೇಶ್, ಶ್ರದ್ಧಾ, ನವಾಜುದ್ದಿನ್ ಜತೆ ರುಹಾನಿ ಶರ್ಮಾ, ಆಂಡ್ರಿಯಾ ಜೆರಿಮಿಯಾ, ಸಾರಾ ಮತ್ತು ಜಯಪ್ರಕಾಶ್ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ, ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಸಂಕಲನವಿರಲಿದೆ. "ಸೈಂಧವ' ಇದೇ ಡಿ. 22ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.
-ಏಜೆನ್ಸೀಸ್