ಸಿನಿವಾಣಿ

ಧೂಮ್ 3​ ನಿರ್ದೇಶಕರ ಬಿಗ್​ ಬಜೆಟ್​ ಆ್ಯಕ್ಷನ್​ ಚಿತ್ರದಲ್ಲಿ ವಿಕ್ಕಿ ಕೌಶಾಲ್​

ಉರಿ ಸಿನಿಮಾ ಹಿಟ್​ ಆದ ಬಳಿಕ ನಟ ವಿಕ್ಕಿ ಕೌಶಾಲ್ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದು ಗೊತ್ತೇ ಇದೆ. ಅದಾದ ಬಳಿಕ ಹಲವು ಬಿಗ್​ ಪ್ರಾಜೆಕ್ಟ್​ಗಳಲ್ಲಿ ಅವರ ಹೆಸರು ಕೇಳಿ ಬಂದಿತ್ತಾದರೂ ಯಾವುದೂ ಅಧಿಕೃತವಾಗಿರಲಿಲ್ಲ. ಇದೀಗ ಲಾಕ್​ಡೌನ್​ ಹೊತ್ತಲ್ಲೇ ದೊಡ್ಡ ಸುದ್ದಿಯೊಂದಿಗೆ ಬಂದಿದ್ದಾರೆ ವಿಕ್ಕಿ ಕೌಶಾಲ್​.

ಅಂದರೆ, ಬಾಲಿವುಡ್​ನ ಖ್ಯಾತ ಚಿತ್ರನಿರ್ಮಾಣ ಸಂಸ್ಥೆ ಯಶ್​ ರಾಜ್​ ಬ್ಯಾನರ್ ಅಡಿಯಲ್ಲಿ ಸಿದ್ಧವಾಗಲಿರುವ ಬಿಗ್​ ಬಜೆಟ್​ನ ಚಿತ್ರದಲ್ಲಿ ವಿಕ್ಕಿ ನಾಯಕನಾಗಿ ನಟಿಸಲಿರುವುದು ಅಧಿಕೃತವಾಗಿದ್ದು, ಧೂಮ್​ 3, ಥಗ್ಸ್ ಆಫ್​ ಹಿಂದೂಸ್ತಾನ್​ ಚಿತ್ರ ಖ್ಯಾತಿನ ನಿರ್ದೇಶಕ ವಿಜಯ್​ ಕೃಷ್ಣ ಆಚಾರ್ಯ ಈ ಬಿಗ್​ ಪ್ರಾಜೆಕ್ಟ್​ನ ಜವಾಬ್ದಾರಿ ಹೊತ್ತಿದ್ದಾರೆ.

ಈಗಾಗಲೇ ಸಿನಿಮಾದ ಕಥೆ ಲಾಕ್​ ಆಗಿದ್ದು, ಆ್ಯಕ್ಷನ್​ ಓರಿಯೆಂಟೆಡ್ ಆಗಿರಲಿದ್ದು, ಈ ಹಿಂದೆಂದೂ ಕಾಣಿಸದ ರೀತಿಯಲ್ಲಿ ವಿಕ್ಕಿ ಕಾಣಿಸಿಕೊಳ್ಳಲಿದ್ದು, ಲಾಕ್​ಡೌನ್​ ಮುಗಿಯುತ್ತಿದ್ದಂತೆ ಅಕ್ಟೋಬರ್​ ವೇಳೆಗೆ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯ ಶೂಜಿತ್​ ಸಿರ್ಕಾರ್​, ಮೇಘನಾ ಗುಲ್ಜಾರ್ ಸೇರಿ ಹಲವರು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್​)​