ಬೆಂಗಳೂರು: ಕಳೆದ ವಾರವಷ್ಟೇ ಶಿವರಾಜಕುಮಾರ್ ಅಭಿನಯದ 124ನೇ ಚಿತ್ರವಾದ ‘ನೀ ಸಿಗೋವರೆಗೂ’ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿತ್ತು. ಈಗ ‘ವೇದ’ ಚಿತ್ರದ ಹಾಡುಗಳ ಸಂಯೋಜನೆ ಕೆಲಸ ಇತ್ತೀಚೆಗೆ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಪ್ರಾರಂಭವಾಗಿದೆ.
‘ವೇದ’, ಶಿವರಾಜಕುಮಾರ್ ಅವರ 125ನೇ ಚಿತ್ರವಾಗಿದ್ದು, ಗೀತಾ ಪಿಕ್ಚರ್ಸ್ ಅಡಿ ಗೀತಾ ಶಿವರಾಜಕುಮಾರ್ ಮೊದಲ ಬಾರಿಗೆ ನಿರ್ಮಾಪಕರಾಗಿದ್ದಾರೆ. 60ರ ದಶಕದ ಕಾಲಘಟ್ಟದ ಕಥೆ ಈ ಚಿತ್ರದಲ್ಲಿದ್ದು, ಎ. ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಸ್ವಾಮಿ ಗೌಡ ಅವರ ಛಾಯಾ ಗ್ರಹಣ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಈ ಚಿತ್ರಕ್ಕಿದೆ.