Varun Dhawan temple visit 
ಸಿನಿವಾಣಿ

ದೇವಸ್ಥಾನಕ್ಕೆ ಚಡ್ಡಿ, ಬನಿಯನ್ ಧರಿಸಿ ಬಂದ ವರುಣ್ ಧವನ್: ‘ನೀವು ಜಿಮ್​ಗೆ ಬಂದಿಲ್ಲ' ಎಂದು ನೆಟ್ಟಿಗರಿಂದ ಕ್ಲಾಸ್..Varun Dhawan

ಪ್ರಮುಖ ಮುಖ್ಯಾಂಶಗಳು

  • ಮುಂಬೈನ ದೇವಸ್ಥಾನವೊಂದಕ್ಕೆ ಚಡ್ಡಿ, ಬನಿಯನ್​ ಧರಿಸಿ ಭೇಟಿ ಕೊಟ್ಟ ವರುಣ್​ ಧವನ್
  • ನಟ ವರುಣ್​ ಧವನ್​ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟೀಕೆ
  • ಪವಿತ್ರ ಸ್ಥಳಕ್ಕೆ ಸೂಕ್ತವಲ್ಲದ ಬಟ್ಟೆ ಧರಿಸಿದ್ದಕ್ಕೆ ವರುಣ್ ಧವನ್ ವಿರುದ್ಧ ಆಕ್ರೋಶ.
Varun Dhawan temple visit: ಭಾರತೀಯ ಹಿಂದೂ ಧರ್ಮದಲ್ಲಿ ದೇವಸ್ಥಾನ ಎಂದರೆ ಅದೊಂದು ಪ್ರವಿತ್ರ ಸ್ಥಳ. ಕ್ಷೇತ್ರಗಳಿಗೆ ಭೇಟಿ ನೀಡುವಾಗ ಅದರದ್ದೇ ಆದ ಡ್ರೆಸ್​ ಕೋಡ್​ ಇರಬೇಕು ಎನ್ನುವುದು ಹಲವರ ಬೇಡಿಕೆ.  ಆದರೆ. ಇತ್ತೀಚೆಗೆ ನಟ ವರುಣ್​ ಧವನ್​ ಅವರು ಚಡ್ಡಿ ಬನಿಯನ್​ ಧರಿಸಿ,  ದೇವರ ದರ್ಶನ ಪಡೆದಿರುವ ಬಗ್ಗೆ ನೆಟ್ಟಿಗರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ. 
ವರುಣ್​ ಧವನ್​ ಅವರ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’  ಜೂನ್​5ರಂದು ತೆರೆಗೆ ಬರುತ್ತಿದೆ. ಅವರು ಈ ಸಿನಿಮಾದ ಪ್ರಚಾರದ ಬ್ಯುಸಿಯಾಗಿದ್ದಾರೆ. ಆದರೆ ಈ ಮಧ್ಯೆ ಮುಂಬೈನ ಪ್ರಸಿದ್ಧ ದೇವಸ್ಥಾನವೊಂದಕ್ಕೆ ಹಾಫ್​ ಶಾರ್ಟ್ಸ್​,  ಬನಿಯನ್​ ಧರಿಸಿ ಭೇಟಿ ನೀಡಿರುವುದು ನೆಟ್ಟಗರ ಕೆಂಗಣ್ಣಿಗೆ ಗುರಿಯಾಗಿದೆ. 
ದೇವಸ್ಥಾನದಂತಹ ಪವಿತ್ರ ಸ್ಥಳಕ್ಕೆ ಬರುವಾಗ ಇಂತಹ ಉಡುಪು ಧರಿಸಿರುವುದನ್ನು ಹಲವರು ಖಂಡಿಸಿದ್ದಾರೆ."ಯಾವುದಾದರೂ ಒಳ್ಳೆಯ ಬಟ್ಟೆ ಧರಿಸಿ ಬರಬಾರದಿತ್ತೇ? ದೇವಸ್ಥಾನಕ್ಕೆ ಬಂದಿದ್ದೀರಾ ಆದರೆ ಅದು ಜಿಮ್​ಗೆ ಬಂದಂತೆ ಕಾಣಿತ್ತಿದೆ" ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ನೆಟ್ಟಿಗರು ಏನಂದ್ರು?

ಇನ್ನೊಬ್ಬರು, "ಇದು ದೇವಸ್ಥಾನವೇ ಹೊರತು ಜಿಮ್ ಅಲ್ಲ" ಎಂದು ವ್ಯಂಗ್ಯವಾಡಿದ್ದಾರೆ. ಸೆಲೆಬ್ರಿಟಿಗಳಿಗೆ ದೇವಸ್ಥಾನಕ್ಕೆ ಹೋಗುವಾಗ ಎಂತಹ ಬಟ್ಟೆ ಧರಿಸಬೇಕು ಎಂಬ ಕನಿಷ್ಠ ಜ್ಞಾನವೂ ಇರುವುದಿಲ್ಲವೇ?ಎಂದು ಪ್ರಶ್ನೆ ಮಾಡಿದ್ದಾರೆ. 
 ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’  ಸಿನಿಮಾದ ಚುನ್ನಾರಿ ಚುನ್ನಾರಿ ಹಾಡು ಭಾರಿ ವಿವಾದಕ್ಕೆ ಕಾರಣವಾಗಿತ್ತು.  ಈ ಹಾಡು 1999ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಹಿಂದಿ ಚಲನಚಿತ್ರ 'ಬೀವಿ ನಂ. 1' ನದ್ದಾಗಿದೆ. ಈ ಜನಪ್ರಿಯ ಹಾಡಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಸುಶ್ಮಿತಾ ಸೇನ್ ಹೆಜ್ಜೆ ಹಾಕಿದ್ದಾರೆ. ಇದನ್ನು ರಿಮೇಕ್​ ಮಾಡಿ ಇದಕ್ಕೆ ಹೊಸ ಟಚ್​ ನೀಡಲಾಗಿತ್ತು. ಈ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಹಳೆಯ ಹಾಡೇ ಚಂದ ಇತ್ತು ಎಂದು ಹೇಳಿದ್ದಾರೆ, (ಏಜೆನ್ಸೀಸ್).