ಸಿನಿವಾಣಿ

ಬಿಚ್ಚಮ್ಮಳ ಮೇಕಪ್​ ಇಲ್ಲದ ಅವತಾರ ಕಂಡು ಬೆರಗಾದ ನೆಟ್ಟಿಗರು! ಪೂರ್ತಿ ಬಟ್ಟೆಯಲ್ಲಿ ಗುರುತಿಸೋದು ಕಷ್ಟವೆಂದ ನೆಟ್ಟಿಗ

ಮುಂಬೈ: ಅರ್ಧಂಬರ್ಧ ಡ್ರೆಸ್​ಗಳಿಂದಲೇ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿ ಮಾಡುತ್ತಿರುವ ನಟಿಯೆಂದರೆ ಉರ್ಫಿ ಜಾವೇದ್​. ಈಕೆಯ ಹೆಸರು ಹೇಳಿದರೆ ಕಣ್ಮುಂದೆ ಬರುವುದು ಅರೆಬರೆ ಡ್ರೆಸ್​ಗಳೇ. ಇದನ್ನು ಆಕೆ ಕೂಡ ತುಂಬಾ ಖುಷಿಯಿಂದಲೇ ಹೇಳಿಕೊಳ್ಳುತ್ತಾಳೆ. ತಾನು ಡ್ರೆಸ್​ ಹಾಕದಿದ್ದರೆ ಅಭಿಮಾನಿಗಳಿಗೆ ತುಂಬಾ ಖುಷಿ, ಅವರನ್ನು ಖುಷಿಪಡಿಸುವುದೇ ನನ್ನ ಉದ್ದೇಶ ಎಂದೂ ಸಂದರ್ಶನವೊಂದರಲ್ಲಿ ಈಕೆ ಹೇಳಿಕೊಂಡಿದ್ದಳು. ಇದಕ್ಕಾಗಿಯೇ ಈಕೆಯನ್ನು ಫ್ಯಾಷನ್​ ಲೋಕದ ದುರಂತ ಎಂದೇ ಟೀಕೆ ಮಾಡಲಾಗುತ್ತಿದೆ.

ನಟಿ ಉರ್ಫಿ ಜಾವೇದ್​ ತುಂಬಾ ಬೋಲ್ಡ್​ ಆ್ಯಂಡ್​ ಬ್ಯೂಟಿಫುಲ್​ ಆಗಿದ್ದು, ಆಕೆಯ ಸೌಂದರ್ಯಕ್ಕೆ ಅನೇಕರು ಮಾರು ಹೋಗಿದ್ದಾರೆ. ಆದರೆ, ಬಹುತೇಕರು ಆಕೆಯ ಮೇಕಪ್​ಯುಕ್ತ ಫೋಟೋವನ್ನು ನೋಡಿರುವವರೇ ಹೆಚ್ಚು. ಆದರೆ, ಮೇಕಪ್​ ಇಲ್ಲದ ಆಕೆಯ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಆಕೆಯ ಸೌಂದರ್ಯಕ್ಕೆ ಮೆರಗು ನೀಡುವುದೇ ಮೇಕಪ್​ ಎಂಬ ಸತ್ಯವನ್ನು ನೆಟ್ಟಿಗರು ಕಂಡುಕೊಂಡಿದ್ದಾರೆ.

ವೈರಲ್​ ಆಗಿರುವ ಫೋಟೋದಲ್ಲಿ ಉರ್ಫಿ ಆಸ್ಪತ್ರೆಯಲ್ಲಿ ದಾಖಲಾಗಿರುವುದನ್ನು ತೋರುತ್ತದೆ. ಆದರೆ, ಆಕೆ ಆಸ್ಪತ್ರೆಯಲ್ಲಿರಲು ಕಾರಣ ತಿಳಿದುಬಂದಿಲ್ಲ. ತನ್ನ ವಿಲಕ್ಷಣವಾದ ಫ್ಯಾಶನ್ ಸೆನ್ಸ್​ನಿಂದಾಗಿ ಆಗಾಗ ಸುದ್ದಿಯಾಗುವ ಉರ್ಫಿ, ದುಃಖದಿಂದ ಹಾಸಿಗೆಯ ಮೇಲೆ ಕುಳಿತಿರುವುದ ಫೋಟೋದಲ್ಲಿ ಕಾಣಬಹುದು

ಡಾಲಿ ಹೆಸರಿನ ಟ್ವಿಟ್ಟರ್ ಬಳಕೆದಾರರು ಮೇಕಪ್​ ಇಲ್ಲದ ಉರ್ಫಿಯ ಫೋಟೋವನ್ನು ಹಂಚಿಕೊಂಡಿದ್ದು, "ಮೇಕಪ್ ನಿಜವಾಗಿಯೂ ಅದ್ಭುತಗಳನ್ನು ಸೃಷ್ಟಿಸಬಲ್ಲದು... ಪೆಹಚಾನ್ ಕಾನ್!" ಎಂದು ಶೀರ್ಷಿಕೆ ನೀಡಿದ್ದಾರೆ. ಇದೀಗ ಉರ್ಫಿ ಫೋಟೋ ವೈರಲ್ ಆಗುತ್ತಿದ್ದು, ಟ್ರೋಲ್​ಗೆ ಗುರಿಯಾಗಿದೆ.

ಸಾಕಷ್ಟು ಕಾಮೆಂಟ್​ಗಳು ಹರಿದುಬಂದಿದ್ದು, "ಉರ್ಫಿ ಅವರು ವಿಚಿತ್ರವಾಗಿ ಕಾಣುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಸಾಮಾನ್ಯ ಬಟ್ಟೆಯಲ್ಲಿ ಅವಳನ್ನು ಗುರುತಿಸುವುದು ತುಂಬಾ ಕಠಿಣವಾಗಿದೆ ಎಂದು ಮತ್ತೊಬ್ಬ ನೆಟ್ಟಿಗ ವ್ಯಂಗ್ಯವಾಡಿದ್ದಾರೆ.

ಇನ್ನು ಬಿಗ್​ ಬಾಸ್​ ಒಟಿಟಿ ಷೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಭಾರಿ ಪ್ರಸಿದ್ಧಿ ಪಡೆದಿರುವ ಈ ಉರ್ಫಿ ಜಾವೇದ್, ಯಾವುದಕ್ಕೂ ಕೇರ್‌ ಮಾಡದೇ ತನ್ನ ಮೈಮಾಟ ಪ್ರದರ್ಶನ ಮಾಡುವಲ್ಲಿ ಎತ್ತಿದ ಕೈ. ಪ್ರತಿದಿನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪಡ್ಡೆ ಹುಡುಗರ ಮೈ ಬಿಸಿಯೇರಿಸುವಂತಹ ಫೋಟೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಅವರ ಹಾಟ್​ ಅವತಾರಕ್ಕೆ ಫಿದಾ ಆಗಿರುವ ಅಭಿಮಾನಿಗಳು ಪ್ರತಿದಿನ ಅವರ ಫೋಟೋ ಅಥವಾ ವಿಡಿಯೋಗಳಿಗೆ ಎದುರು ನೋಡುತ್ತಲೇ ಇರುತ್ತಾರೆ. (ಏಜೆನ್ಸೀಸ್​)