ಸಿನಿವಾಣಿ

ನಟಿ ಅರ್ಚನಾ ಗೌತಮ್​ಗೆ ಕಾಂಗ್ರೆಸ್ ಎಂಎಲ್ಎ ಟಿಕೆಟ್, ಬಿಕಿನಿ ಫೋಟೋ ವೈರಲ್...

ಉತ್ತರ ಪ್ರದೇಶ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಹಸ್ತಿನಾಪುರ ಕ್ಷೇತ್ರದಿಂದ ಕಾಂಗ್ರೆಸ್ ತನ್ನನ್ನು ಕಣಕ್ಕಿಳಿಸಿದೆ ಎಂದು ನಟಿ-ರೂಪದರ್ಶಿ ಅರ್ಚನಾ ಗೌತಮ್ ತಿಳಿಸಿದ್ದಾರೆ. ಜೊತೆಗೆ, ಅವರ ರಾಜಕೀಯ ವೃತ್ತಿಜೀವನದೊಂದಿಗೆ, ಸಿನಿಮಾರಂಗದ ಜೀವನವನ್ನು ವಿಲೀನಗೊಳಿಸದಂತೆ ಎಲ್ಲರನ್ನು ವಿನಂತಿಸಿದರು. ಅಂದಹಾಗೆ, ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ 125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತು. ಆ ಪಟ್ಟಿಯಲ್ಲಿ 50 ಮಹಿಳಾ ಅಭ್ಯರ್ಥಿಗಳ ಹೆಸರುಗಳಿವೆ.
ಈ ಪ್ರಕಟಣೆಯ ನಂತರ, ಸೌಂದರ್ಯ ಸ್ಪರ್ಧೆಯ ವಿಜೇತ ಅರ್ಚನಾ ಗೌತಮ್ ಅವರ ಬಿಕಿನಿ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. 'ನಾನು ಮಿಸ್ ಬಿಕಿನಿ 2018ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. ಜೊತೆಗೆ, ನಾನು ಮಿಸ್ ಉತ್ತರ ಪ್ರದೇಶ 2014 ಮತ್ತು ಮಿಸ್ ಕಾಸ್ಮೋ ವರ್ಲ್ಡ್ 2018ರಲ್ಲಿಯೂ ಭಾಗವಹಿಸಿದ್ದೇನೆ. ನಾನು ನನ್ನ ಸಿನಿರಂಗ ಮತ್ತು ಮಾಡೆಲಿಂಗ್ ವೃತ್ತಿಯನ್ನು, ನನ್ನ ರಾಜಕೀಯ ವೃತ್ತಿಯೊಂದಿಗೆ ವಿಲೀನಗೊಳಿಸದಂತೆ ಜನರನ್ನು ವಿನಂತಿಸುತ್ತೇನೆ', ಎಂದು ಗೌತಮ್ ಹೇಳಿಕೊಂಡಿದ್ದಾರೆ.
ಯುಪಿ ಚುನಾವಣೆಗೆ ಕಾಂಗ್ರೆಸ್ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್, ಗೌರವಧನ ಹೆಚ್ಚಳಕ್ಕಾಗಿ ಆಂದೋಲನದ ನೇತೃತ್ವ ವಹಿಸಿದ್ದ ಆಶಾ ಕಾರ್ಯಕರ್ತೆ ಪೂನಂ ಪಾಂಡೆ ಅವರನ್ನು ಕೂಡ ಕಣಕ್ಕಿಳಿಸಿದೆ. ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಲೂಯಿಸ್ ಖುರ್ಷಿದ್ ಅವರಿಗೂ ಚುನಾಚಣೆಗೆ ಟಿಕೆಟ್ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ, ಏಳು ಹಂತದ ಚುನಾವಣೆ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.