ಬೆಂಗಳುರು: ‘ಚೂರಿಕಟ್ಟೆ’, ‘ಪೆಂಟಗನ್’ ಖ್ಯಾತಿಯ ನಿರ್ದೇಶಕ ರಾಘು ಶಿವಮೊಗ್ಗ ಹೊಸ ಪ್ರಾಜೆಕ್ಟ್ ಆರಂಭಿಸಿದ್ದಾರೆ. ವರಮಹಾಲಕ್ಷ್ಮೀ ಹಬ್ಬದಂದು ದುನಿಯಾ ವಿಜಯ್ ಚಿತ್ರದ ಶಿರ್ಷಿಕೆ ರಿವೀಲ್ ಮಾಡಿದ್ದಾರೆ.
ಚಿತ್ರಕ್ಕೆ ‘‘ತುಕ್ರ ತನಿಯ’ ಎಂದು ನಾಮಕರಣ ಮಾಡಲಾಗಿದೆ. ‘‘ತುಕ್ರ’ ಎಂದರೆ ಶುಕ್ರವಾರ ಹುಟ್ಟಿದವನು, ‘ತನಿಯ’ ಎಂದರೆ ಶನಿವಾರ ಹುಟ್ಟಿದವನು’ ಎನ್ನುತ್ತಾರೆ ರಾಘು. ಪ್ರವೀಣ್ ತೇಜ್, ಅಚ್ಯುತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಮಲೆನಾಡಿನಲ್ಲಿ ಡಿಸೆಂಬರ್‌ನಿಂದ ಚಿತ್ರೀಕರಣ ಪ್ರಾರಂಭಿಸುವ ಆಲೋಚನೆ ಚಿತ್ರತಂಡದ್ದು.
ಚಿತ್ರಕ್ಕೆ ಶಾಂತಿ ಸಾಗರ್ ಛಾಯಾಗ್ರಹಣ, ಕದ್ರಿ ಮಣಿಕಾಂತ್ ಸಂಗೀತ, ಪ್ರಕಾಶ್ ಕಾರಿಂಜ ಸಂಕಲನವಿರಲಿದೆ.