ಬೆಂಗಳೂರು: ಚಂದ್ರಕಾಂತ್ ನಿರ್ದೇಶನದ "ತ್ರಿಕೋನ' ಚಿತ್ರವು ಏ.1ರಂದು ಬಿಡುಗಡೆಯಾಗುತ್ತಿರುವುದು ಗೊತ್ತಿರಬಹುದು. ಈ ಚಿತ್ರವು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಚಿತ್ರದಲ್ಲಿ ಸುರೇಶ್ ಹೆಬ್ಳೀಕರ್, ಲಕ್ಷ್ಮೀ, ಅಚ್ಯುತ್ ಕುಮಾರ್, ಸುಧಾರಾಣಿ, ರಾಜವೀರ್, ಮಾರುತೇಶ್, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ. ಸಾಧು ಕೋಕಿಲ ಒಂದು ವಿಶೇಷ ಪಾತ್ರದಲ್ಲಿ ನಗಿಸಲಿದ್ದಾರೆ. ಇದಕ್ಕೂ ಮುನ್ನ 'ಪೆರೋಲ್', 'ಬರ್ಫಿ' ಮತ್ತು 'ಅಮೃತವಾಣಿ' ಚಿತ್ರಗಳನ್ನು ನಿರ್ಮಿಸಿದ್ದ ರಾಜಶೇಖರ್ ಈ ಚಿತ್ರಕ್ಕೆ ಕಥೆ ಬರೆಯುವುದರ ಜತೆಗೆ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: ‘ಗಾಡ್ ಫಾದರ್’ಗೆ ನೋ ಎಂದ ಸಲ್ಮಾನ್ ಖಾನ್!
ಈಗಾಗಲೇ 'ತಗ್ಗಿ ನಡಿ ಸುಮ್ಮನೆ …', 'ಗುಡಿಯಲ್ಲಿರೋ ದೇವ …' ಮುಂತಾದ ಲಿರಿಕಲ್ ವಿಡಿಯೋಗಳ ಜತೆಗೆ, ಟೀಸರ್ ಸಹ ಬಿಡುಗಡೆಯಾಗಿದೆ. ಚಿತ್ರಕ್ಕೆ ಸುರೇಂದ್ರನಾಥ್ ಸಂಗೀತ ಮತ್ತು ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಹಣವಿದೆ.