ಸಿನಿವಾಣಿ

PHOTOS| ಒಂದೇ ಒಂದು ಫೋಟೋದಿಂದ ಫೇಸ್​ ಮಾಸ್ಕ್​ ಮ್ಯಾಚಿಂಗ್​ ಬಿಕಿನಿಗೆ ಬಂತು ಭಾರಿ ಬೇಡಿಕೆ !

ರೋಮ್​: ಕರೊನಾ ಲಾಕ್​ಡೌನ್​ ಸಮಯದಲ್ಲಿ ಇಟಾಲಿಯನ್​ ಡಿಸೈನರ್​ ಒಬ್ಬರು ತಮಾಷೆಗಾಗಿ ತಯಾರಿಸಿದ ಫೇಸ್​ ಮಾಸ್ಕ್​​ ಮ್ಯಾಚಿಂಗ್​ ಬಿಕಿನಿ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಡಿಸೈನರ್​ ಟಿಜಿಯಾನಾ ಸ್ಕಾರಮುಜೋ ಎಂಬುವರು ಕೇಂದ್ರ ಇಟಲಿಯ ಸೆನಿಗಲಿಯಾದ ಎಲೆಕ್ಸಾ ಬೀಚ್​ವೇರ್​ ಕಂಪನಿಯ ಮಾಲೀಕರಾಗಿದ್ದಾರೆ. ಇಟಲಿಯು ಕರೊನಾ ದಾಳಿಗೆ ಹಿಂದೆಂದೂ ಕಾಣದಂತಹ ಭೀಕರ ಹೊಡೆತಕ್ಕೆ ನಲುಗಿದ್ದು, ನಿರಂತರ ಲಾಕ್​ಡೌನ್​ ಹೇರುವುದು ಅನಿವಾರ್ಯವಾಯಿತು. ಹೀಗಾಗಿ ಈ ಸಮಯದಲ್ಲಿ ಸಾಂಕ್ರಾಮಿಕ ಪ್ರತಿರೋಧ ಬೀಚ್​ವೇರ್​ಗಳನ್ನು ತಯಾರಿಸಿ ವಿಭಿನ್ನತೆ ಸ್ಕಾರಮುಜೋ ಮೆರೆದಿದ್ದಾರೆ.​

ಕರೊನಾದಿಂದಾಗಿ ಬಿಕಿನಿ ಉಡುಗೆಗೆ ತುಂಬಾ ಬೇಡಿಕೆ ಇರುವ ಸಂದರ್ಭದಲ್ಲೇ ಅದನ್ನು ತಯಾರಿಸಲು ಸಾಧ್ಯವಾಗಲಿಲ್ಲ. ಇದು ಉದ್ಯಮದ ಮೇಲೆ ಹೊಡೆತ ಬಿದ್ದಿತು. ಈ ಎಲ್ಲ ಸವಾಲಿನ ಹೊರತಾಗಿಯೂ ಬಿಕಿನಿ ವಿನ್ಯಾಸದಲ್ಲಿ ಮಾಸ್ಕ್​ ಡಿಸೈನ್​ ಮಾಡುವುದಾಗಿ ಕುಟುಂಬದೊಂದಿಗೆ ತಮಾಷೆ ಮಾಡುತ್ತಾ ಅದನ್ನು ತಯಾರಿಸಿದ್ದಾಗಿ ಸ್ವತಃ ಸ್ಕಾರಮುಜೋ ಹೇಳಿಕೊಂಡಿದ್ದಾರೆ.

ತಯಾರಿಸಿದ ಬಳಿಕ ಅದನ್ನು ಟಿಜಿಯಾನಾ ಸ್ಕಾರಮುಜೋ ಮಗಳು ಧರಿಸಿ, ಫೋಟೋಗಳನ್ನು ಫೇಸ್​ಬುಕ್​ನಲ್ಲಿ ಹರಿಬಿಟ್ಟಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಅದು ವೈರಲ್​ ಆಗಿದ್ದು, ಅದರೊಂದಿಗೆ ಬೇಡಿಕೆಯೂ ಹೆಚ್ಚಾಗಿದೆ ಎನ್ನುತ್ತಾರೆ ಸ್ಕಾರಮುಜೋ.

ಲಾಕ್​ಡೌನ್​ ಈ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ ಎಂದು ಊಹಿಸಿರಲಿಲ್ಲ. ಸದ್ಯ ವಿಶೇಷ ಬಿಕಿನಿ ಉಡುಗೆಗಾಗಿ ಬೇಡಿಕೆ ಬರುತ್ತಿದ್ದು, ಉದ್ಯಮ ಚೇತರಿಕೆ ಆಗುವ ಭರವಸೆಯನ್ನು ಹೊಂದಿದ್ದಾರೆ. (ಏಜೆನ್ಸೀಸ್​)