ಮದುವೆಗೆ ನನ್ನ​ ಕರ್ದಿಲ್ಲ ಎಂದ ಪುಟಾಣಿಗೆ ಬಿಗ್​ ಸರ್ಪ್ರೈಸ್​ ಕೊಟ್ಟ ವಿರೋಶ್​ ದಂಪತಿ! ಭಕ್ಷ್ಯ ಭೋಜನದಲ್ಲಿ ಏನೆಲ್ಲ ಇತ್ತು ನೋಡಿ... Virosh Wedding 
ಟಾಲಿವುಡ್

ಮದುವೆಗೆ ನನ್ನ​ ಕರ್ದಿಲ್ಲ ಎಂದ ಪುಟಾಣಿಗೆ ಬಿಗ್​ ಸರ್ಪ್ರೈಸ್​ ಕೊಟ್ಟ ವಿರೋಶ್​ ದಂಪತಿ! ಭಕ್ಷ್ಯ ಭೋಜನದಲ್ಲಿ ಏನೆಲ್ಲ ಇತ್ತು ನೋಡಿ... Virosh Wedding

ಪ್ರಮುಖ ಮುಖ್ಯಾಂಶಗಳು

  • ಕೊನೆಗೂ ವಿರೋಶ್​ ದಂಪತಿ ಬೇಟಿ ಮಾಡಿದ ವೈರಲ್​ ಹುಡುಗಿ ಯುವರ್ಸ್ ಲಕ್ಕಿ ತಲ್ಲಿ
  • ಮದುವೆಗೆ ಕರ್ದಿಲ್ಲ ಎಂದು ಮುನಿಸಿಕೊಂಡಾಕೆಗೆ ಪ್ರೀತಿಯ ಮದ್ದು ಕೊಟ್ಟ ವಿಜಯ್-ರಶ್ಮಿಕಾ
  • ಕೊಟ್ಟ ಮಾತಿನಂತೆ ಮನೆಗೆ ಕರೆದು ಆಕೆಗಿಷ್ಟವಾಗುವ ಆಹಾರ ಬಡಿಸಿದ ದಂಪತಿ
ಹೈದರಾಬಾದ್​: `ನಾನು ನಿಮ್ಮ ಪುಟ್ಟ ಅಭಿಮಾನಿ ನನ್ನನ್ನು ನಿಮ್ಮ ಮದುವೆಗೆ ಯಾಕೆ ಕರ್ದಿಲ್ಲ' ಎಂದು ವಿರೋಶ್​ ದಂಪತಿ ( Virosh Wedding ) ಯನ್ನು ಮುದ್ದು ಮುದ್ದಾಗಿ ದಬಾಯಿಸಿದ್ದ ಪುಟ್ಟ ಹುಡುಗಿ, ಇದೀಗ ವಿರೋಶ್​ ಮನೆಗೆ ಅದ್ದೂರಿಯಾಗಿ ಎಂಟ್ರಿ ಕೊಟ್ಟು ತನಗಿಷ್ಟವಾದ ಭಕ್ಷ್ಯಗಳನ್ನು ಸೇವಿಸಿದ್ದಾಳೆ. ಅಭಿಮಾನಿಗೆ ಕೊಟ್ಟ ಭರವಸೆಯನ್ನು ವಿರೋಶ್​ ದಂಪತಿ ಈಡೇರಿಸಿದ್ದಾರೆ.
ಹಲವು ಗಾಸಿಪ್ಸ್​ ನಂತರ 2026 ಫೆಬ್ರವರಿ 26ರಂದು ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ರಾಜಸ್ಥಾನದ ಉದಯಪುರದಲ್ಲಿ ಮದುವೆಯಾಗಿದರು. ಇದು ಸೀತಾರಾಮ ಕಲ್ಯಾಣದಂತೆ ಇತ್ತು. ತೆಲುಗು ಮತ್ತು ಕೊಡವ ಸಂಪ್ರದಾಯದ ಮಾದರಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಾರ್ಚ್​ 5ರಂದು ಅವರ ಆರಕ್ಷತೆ ಹೈದರಾಬಾದ್​ನಲ್ಲಿ ನಡೆಯಿತು.

ಯಾರೀ ಪುಟ್ಟ ಪೋರಿ?

ವಿರೋಶ್​ ಜೋಡಿಯ ಮದುವೆಯ ನಂತರ ಯುವರ್ಸ್​ ಲಕ್ಕಿ ತಲ್ಲಿ ಎಂಬ ಹೆಸರಿನ ಪುಟ್ಟ ಹುಡುಗಿಯೊಬ್ಬಳು ಆನ್​ಲೈನ್​ನಲ್ಲಿ ವೈರಲ್​ ಆಗಿದ್ದಳು. ನಾನು ನಿಮ್ಮ ಪುಟ್ಟ ಅಭಿಮಾನಿ. ನಿಮ್ಮ ಮದುವೆಗೆ ಬರಬೇಕಿತ್ತು. ನನ್ನನ್ನು ನೀವು ಯಾಕೆ ಕರೆದಿಲ್ಲ? ನಿಮ್ಮ ಮದುವೆಗೆ ನನ್ನನ್ನು ಆಹ್ವಾನಿಸಿದ್ದರೆ ಏನಾಗುತ್ತಿತ್ತು? ಎಂದು ಮುದ್ದು ಮುದ್ದಾಗಿ ಸಿಟ್ಟು ಮಾಡಿಕೊಂಡಿದ್ದಳು. ಆ ವಿಡಿಯೋದ ಅಡಿಯಲ್ಲಿ ವಿರೋಶ್​ ದಂಪತಿಯನ್ನು ಟ್ಯಾಗ್​ ಮಾಡಿ, ಪುಟ್ಟ ಕಂದನ ಬೇಡಿಕೆ ಈಡೇರಿಸುವಿರಾ? ಎಂದು ಪೋಸ್ಟ್ ಮಾಡಲಾಗಿತ್ತು.
ಇದು ಸೋಶಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್​ ಆಗಿತ್ತು. ಎಲ್ಲರು ಕಂದನ ಪರ ನಿಂತಿದ್ದರು. ಅದು ಹೇಗೋ ವಿರೋಶ್​ ದಂಪತಿಯ ಕಣ್ಣಿಗೆ ಈ ವಿಡಿಯೋ ಬಿದ್ದಿದೆ. ಇದಕ್ಕೆ ವಿರೋಶ್​ ದಂಪತಿ ಉತ್ತರ ಸಹ ನೀಡಿದ್ದರು. `ಬುಜ್ಜಿ ತಲ್ಲಿ ನಾವು ನಿನ್ನನ್ನು ನಮ್ಮ ಮನೆಗೆ ಲಂಚ್​ಗೆ ಆಹ್ವಾನಿಸುತ್ತೇವೆ. ನಿನಗೆ ಯಾವ ಆಹಾರ ಇಷ್ಟ ಹೇಳು ಅದನ್ನೆಲ್ಲ ಮಾಡಿಸುತ್ತೇವೆ. ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡೋಣ' ಎಂದು ಹೇಳಿದ್ದರು. ಈಗ ಆಕೆಯ ಕನಸು ಈಡೇರಿದೆ. ವಿರೋಶ್​ ದಂಪತಿ ಕೊಟ್ಟ ಮಾತಿನಂತೆ ತಮ್ಮ ಅಭಿಮಾನಿಯ ಅಭಿಲಾಷೆಯನ್ನು ಸಂಪನ್ನ ಮಾಡಿದ್ದಾರೆ.

ಹೇಗಿತ್ತು ಅತಿಥಿ ಸತ್ಕಾರ?

ಹೈದರಾಬಾದ್​ನಲ್ಲಿರುವ ವಿರೋಶ್​ ದಂಪತಿಯ ಮನೆಗೆ ಪುಟ್ಟ ಹುಡುಗಿ ಹಾಗೂ ಆಕೆಯ ಫ್ಯಾಮಿಲಿಯನ್ನು ಆಹ್ವಾನಿಸಲಾಗಿತ್ತು. ವಿಡಿಯೋದಲ್ಲಿರುವಂತೆ ರಶ್ಮಿಕಾ ಮಂದಣ್ಣ ಅವರು, ಮುತ್ತಿನೊಂದಿಗೆ ಆಕೆಗೆ ಲಡ್ಡು ಸಿಹಿಯನ್ನು ಕೊಟ್ಟರೆ, ಮತ್ತೊಂದು ಕಡೆಯಿಂದ ವಿಜಯ್ ಅವರು ಅನ್ನ ಬಡಿಸಿ, ಆಕೆಯನ್ನು ಸತ್ಕರಿಸಿದರು. ಊಟವಾದ ಬಳಿಕೆ ಅವಳನ್ನು ಸೊಂಟದ ಮೇಲೆ ಕೂರಿಸಿಕೊಂಡು ಸ್ವಂತ ಮಗಳಂತೆ ಮಾತನಾಡಿಸಿದರು. ಕೊನೆಗೆ ಎಲ್ಲರನ್ನು ಬೀಳ್ಕೊಟ್ಟರು. ಯುವರ್ಸ್​ ಲಕ್ಕಿ ತಲ್ಲಿ ಕುಟಂಬವು ವಿಜಯ್​ ಮತ್ತು ರಶ್ಮಿಕಾರಿಗೆ ಧನ್ಯವಾದ ತಿಳಿಸಿದೆ, (ಏಜೆನ್ಸೀಸ್).