ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಹಾಗೂ ಪ್ಯಾನ್ ಇಂಡಿಯಾ ಸುಂದರಿ ರಶ್ಮಿಕಾ ಮಂದಣ್ಣ ಮದುವೆ ( Virosh Wedding )
- ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆಗೆ ಕ್ಷಣಗಣನೆ
- ನಾಳೆ (ಫೆಬ್ರವರಿ 26) ಹಸೆಮಣೆ ಏರಲಿದ್ದಾರೆ ಸ್ಟಾರ್ ಜೋಡಿ
- ಉದಯಪುರದಲ್ಲಿರುವ ಐಷಾರಾಮಿ ಐಟಿಸಿ ಮೊಮೆಂಟೋಸ್ ಹೋಟೆಲ್‌ನಲ್ಲಿ ವಿವಾಹ ನಡೆಯಲಿದೆ
Virosh Wedding : ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಹಾಗೂ ಪ್ಯಾನ್ ಇಂಡಿಯಾ ಸುಂದರಿ ರಶ್ಮಿಕಾ ಮಂದಣ್ಣ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸ್ಟಾರ್ ಜೋಡಿ ನಾಳೆ (ಫೆ.26) ಹಸೆಮಣೆ ಏರಲಿದ್ದಾರೆ. ಅದ್ಧೂರಿ ವಿವಾಹ ಸಮಾರಂಭವು ರಾಜಸ್ಥಾನದ ಉದಯಪುರದಲ್ಲಿರುವ ಐಷಾರಾಮಿ ಐಟಿಸಿ ಮೊಮೆಂಟೋಸ್ ಹೋಟೆಲ್‌ನಲ್ಲಿ ನಡೆಯಲಿದೆ. ಈ ಹೋಟೆಲ್, ತನ್ನದೆಯಾದ ಹೆಲಿಪ್ಯಾಡ್ ಮತ್ತು ಸರೋವರವನ್ನು ಹೊಂದಿರುವ ಸುಂದರವಾದ ಗಿರಿಧಾಮವಾಗಿದೆ.
ತೀರಾ ಖಾಸಗಿಯಾಗಿ ನಡೆಯುವ ಈ ಸಮಾರಂಭಕ್ಕೆ ಕೇವಲ 100 ಜನರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಐಟಿಸಿ ಮೊಮೆಂಟೋಸ್‌ನಲ್ಲಿ ಈಗಾಗಲೇ ವಿವಾಹ ಸಂಭ್ರಮ ಆರಂಭವಾಗಿದೆ. ಈ ಮಧ್ಯೆ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ ಅವರಿಬ್ಬರ ವಯಸ್ಸು. ಹಾಗಾದರೆ, ವಿಜಯ್ ಮತ್ತು ರಶ್ಮಿಕಾ ನಡುವೆ ಎಷ್ಟು ವಯಸ್ಸಿನ ವ್ಯತ್ಯಾಸವಿದೆ ಗೊತ್ತಾ?
ಅಂದಹಾಗೆ, ರಶ್ಮಿಕಾ ಅವರು 1996, ಏಪ್ರಿಲ್ 5ರಂದು ಜನಿಸಿದರು. ನಟಿಗೆ ಈಗ 29 ವರ್ಷ ವಯಸ್ಸು. ಅದೇ ರೀತಿ ವಿಜಯ್ ಅವರು 1989, ಮೇ 9 ರಂದು ಜನಿಸಿದರು. ನಟನಿಗೆ ಪ್ರಸ್ತುತ 36 ವರ್ಷ. ಇಬ್ಬರ ನಡುವೆ ಏಳು ವರ್ಷ ವಯಸ್ಸಿನ ಅಂತರವಿದೆ. ಇನ್ನೂ ಇದೇ ಸಮಯದಲ್ಲಿ ನಟ ರಕ್ಷಿತ್ ಶೆಟ್ಟಿ ವಯಸ್ಸಿನ ಚರ್ಚೆಯು ಕೂಡ ಮುನ್ನೆಲೆಗೆ ಬಂದಿದೆ.
ರಶ್ಮಿಕಾ ಮತ್ತು ನಟ ರಕ್ಷಿತ್ ಶೆಟ್ಟಿ ಈ ಹಿಂದೆ ಪ್ರೀತಿ ಮಾಡುತ್ತಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗೆ ಮದುವೆ ಆಗಿ ಮಕ್ಕಳು ಇರುತ್ತಿದ್ದರು. ಇಬ್ಬರು 2017ರ ಜುಲೈ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಆ ಸಮಯದಲ್ಲಿ ರಶ್ಮಿಕಾಗೆ 21 ವರ್ಷ. ಇಬ್ಬರ ನಡುವೆ 13 ವರ್ಷ ವಯಸ್ಸಿನ ವ್ಯತ್ಯಾಸವಿತ್ತು. ಆದಾಗ್ಯೂ, ಅದ್ದೂರಿ ನಿಶ್ಚಿತಾರ್ಥವು ಮದುವೆಗೆ ಕಾರಣವಾಗಲಿಲ್ಲ. ಮುಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ, ಇಬ್ಬರೂ ಸಂಬಂಧದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದರು. ಅಭಿಪ್ರಾಯದಲ್ಲಿನ ವ್ಯತ್ಯಾಸಗಳು ಬೇರ್ಪಡುವಿಕೆಗೆ ಕಾರಣವೆಂದು ವರದಿ ಹೇಳಿದೆ.
ರಶ್ಮಿಕಾ ಮತ್ತು ವಿಜಯ್ 2018ರಲ್ಲಿ 'ಗೀತ ಗೋವಿಂದಂ' ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ನಟಿಸಿದರು. ಈ ಚಿತ್ರದ ಮೂಲಕವೇ ಇಬ್ಬರ ನಡುವೆ ಪ್ರೀತಿ ಚಿಗುರಿತು ಎಂಬ ಸುದ್ದಿ ಇದೆ. 2019 ರಲ್ಲಿ ಬಿಡುಗಡೆಯಾದ 'ಡಿಯರ್ ಕಾಮ್ರೇಡ್' ಚಿತ್ರದಲ್ಲೂ ಒಟ್ಟಿಗೆ ನಟಿಸಿದರು. ಆ ನಂತರ ಇಬ್ಬರ ಪ್ರೇಮ ವಿಚಾರದ ಬಗೆಗಿನ ವದಂತಿಗಳು ಮತ್ತಷ್ಟು ತೀವ್ರಗೊಂಡವು. ಮದುವೆಗೆ ಕೆಲವು ತಿಂಗಳುಗಳ ಮೊದಲು ರಶ್ಮಿಕಾ ಮತ್ತು ವಿಜಯ್ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಎಂಬ ವರದಿಗಳೂ ಇದ್ದವು. ಆದರೆ, ಯಾವುದನ್ನೂ ಈ ಜೋಡಿ ಅಧಿಕೃತವಾಗಿ ಹೇಳಲಿಲ್ಲ. ಆದರೆ, ಇತ್ತೀಚೆಗೆ ಮದುವೆ ವಿಚಾರವನ್ನು ಅಧಿಕೃತವಾಗಿ ಈ ಜೋಡಿ ಘೋಷಣೆ ಮಾಡಿತು.
ಇನ್ನು ರಾಜಸ್ಥಾನದಲ್ಲಿ ಮದುವೆ ಸಮಾರಂಭ ನಡೆದ ಬಳಿಕ ಹೈದರಾಬಾದ್‌ನಲ್ಲಿ ಆರತಕ್ಷತೆ ಎಷ್ಟು ಅದ್ಧೂರಿಯಾಗಿ ನಡೆಯಲಿದೆ. ಮಾರ್ಚ್ 4ರಂದು ಹೈದರಾಬಾದ್‌ನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಟಾಲಿವುಡ್ ಜೊತೆಗೆ, ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಸಹ ಆರತಕ್ಷತೆಗೆ ಹಾಜರಾಗಲಿದ್ದಾರೆ, (ಏಜೆನ್ಸೀಸ್).