ನಟಿ ತ್ರಿಷಾ ಕೃಷ್ಣನ್​, ದಳಪತಿ ವಿಜಯ್​ 
ಟಾಲಿವುಡ್

ವಿಜಯ್ ವಿಚ್ಛೇದನ ಬಗ್ಗೆ ಮೌನ ಮುರಿಯದ ತ್ರಿಷಾ: ಏರ್‌ಪೋರ್ಟ್‌ನಲ್ಲಿ ಮುಖ ತಿರುಗಿಸಿಕೊಂಡು ಹೋಗಿದ್ದೇಕೆ? Trisha Reaction to Vijay Divorce

ಪ್ರಮುಖ ಮುಖ್ಯಾಂಶಗಳು

  • ನಟ ವಿಜಯ್​ ವಿಚ್ಛೇದನ ವಿಚಾರ
  • ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸದೇ ಹೋದ ನಟಿ
  • ವಿಜಯ್​ ಪತ್ನಿ ಸಂಗೀತಾ ಡಿವೋರ್ಸ್​ ಅರ್ಜಿ ಸಲ್ಲಿಕೆ ನಂತರ ಬೆಳವಣಿಗೆ
ಚೆನ್ನೈ: ತಮಿಳು ನಟ ದಳಪತಿ ವಿಜಯ್​ ಜೊತೆ ಮದುವೆ ಸಮಾರಂಭಕ್ಕೆ ಭೇಟಿ ನೀಡಿದ ನಂತರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ತ್ರಿಷಾ ಕೃಷ್ಣನ್​​, ವಿಜಯ್​ ಅವರ ವಿಚ್ಛೇದನದ (Trisha Reaction to Vijay Divorce) ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸದ ಘಟನೆ ಜರುಗಿದೆ.
ವಿಡಿಯೋನಲ್ಲಿ ತ್ರಿಷಾ ಚೆನ್ನೈ ವಿಮಾನ ನಿಲ್ದಾಣಕ್ಕೆ ಹ್ಯಾಂಡ್‌ಬ್ಯಾಗ್ ಹಿಡಿದುಕೊಂಡು ಬರುತ್ತಿರುವುದನ್ನು ನೋಡಬಹುದಾಗಿದ್ದು, ಕಪ್ಪು ಪ್ಯಾಂಟ್ ಮತ್ತು ಡೆನಿಮ್ ಜಾಕೆಟ್‌ನೊಂದಿಗೆ ಬಿಳಿ ಟಿ-ಶರ್ಟ್ ಧರಿಸಿ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡರು. ಸನ್ ಗ್ಲಾಸ್ ಧರಿಸಿ, ನಟಿ ಪ್ರವೇಶ ದ್ವಾರದ ಕಡೆಗೆ ನಡೆದು ಹೋಗಿದ್ದಾರೆ.
ತ್ರಿಷಾ ಟರ್ಮಿನಲ್ ಸಮೀಪಿಸುತ್ತಿದ್ದಂತೆ, ಸ್ಥಳದಲ್ಲಿದ್ದ ವರದಿಗಾರರು ವಿಜಯ್ ಮತ್ತು ವಿವಾಹ ಸಮಾರಂಭದಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದರ ಬಗ್ಗೆ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರು. ಮಾಧ್ಯಮಗಳು ಪ್ರತಿಕ್ರಿಯೆಯನ್ನು ಪಡೆಯಲು ಪದೇ ಪದೇ ಪ್ರಯತ್ನಿಸಿದರೂ, ತ್ರಿಷಾ ಮೌನವಾಗಿಯೇ ವಿಮಾನ ನಿಲ್ದಾಣವನ್ನು ಪ್ರವೇಶಿಸಿದ್ದಾರೆ.

ಡಿವೋರ್ಸ್​ ಅರ್ಜಿ ನಂತರದ ಬೆಳವಣಿಗೆ

ನಟ-ರಾಜಕಾರಣಿ ವಿಜಯ್ ಅವರಿಗೆ ಪತ್ನಿ ಸಂಗೀತಾ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ತರುವಾಯ ನಾನಾ ರೀತಿಯ ಘಟನೆಗಳು ನಡೆಯಲಾರಂಭಿಸಿವೆ. ವಿಜಯ್​ಗೆ ಪತ್ನಿ ಸಂಗೀತಾ ಡಿವೋರ್ಸ್​ ನೀಡಲು, ತ್ರಿಷಾ ಜೊತೆಗೆ ವಿಜಯ್​ ಹೊಂದಿರುವ ಸಂಬಂಧವೇ ಕಾರಣ ಎಂಬ ವದಂತಿವೊಂದು ಕೇಳಿ ಬಂದಿದ್ದು, ತ್ರಿಷಾ ಮತ್ತು ವಿಜಯ್ ನಡುವೆ ಬಹುಕಾಲದ ಸ್ನೇಹವಿರುವುದಂತೂ ಹೌದಾಗಿದ್ದು, ಇದು ಯಾವ ರೀತಿಯ ಸಂಬಂಧ ಎಂದು ಇಬ್ಬರು ಇಲ್ಲಿವರೆಗೆ ಸ್ಪಷ್ಟಣೆ ನೀಡಿಲ್ಲ.
ಸಂಗೀತಾ ವಿಚ್ಛೇದನ ಅರ್ಜಿ ಸಲ್ಲಿಸಿದ ಕೆಲ ದಿನಗಳ ನಂತರ, ವಿಜಯ್​ ಮತ್ತು ತ್ರಿಷಾ ಸಿನಿಮಾ ನಿರ್ಮಾಪಕರೊಬ್ಬರ ಮದುವೆಗೆ ಒಂದೇ ಕಾರಿನಲ್ಲಿ ಪ್ರವೇಶಿಸಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ತಮ್ಮ ಸಿನಿಮಾ ಬದುಕಿಗೆ ಬಹುತೇಕ ಪೂರ್ಣವಿರಾಮ ಇಟ್ಟು ತಮಿಳು ರಾಜಕೀಯದಲ್ಲಿ ಮಿಂಚ ಬೇಕೆಂಬ ಆಸೆ ಹೊತ್ತಿದ್ದ ವಿಜಯ್​ಗೆ ಈ ವಿಚ್ಛೇದನದ ವಿಚಾರ ಬಿಸಿ ತುಪ್ಪವಾಗಿದೆ ಎಂದರೆ ಸುಳ್ಳಲ್ಲ.

25 ವರ್ಷಗಳ ದಾಂಪತ್ಯದಲ್ಲಿ ಬಿರುಕು

ವಿಜಯ್ ಮತ್ತು ಸಂಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಮಾರು 25 ವರ್ಷ ಕಳೆದಿದೆ. ಜುಲೈ 1998ರಲ್ಲಿ ರಿಜಿಸ್ಟರ್ ಆಗಿ, 1999ರಲ್ಲಿ ಚೆನ್ನೈನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದ ಈ ಜೋಡಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಆದರೆ, ಈಗ ಸಂಗೀತಾ ಅವರು ಸಲ್ಲಿಸಿರುವ ವಿಚ್ಛೇದನ ಅರ್ಜಿಯಲ್ಲಿ ಗಂಭೀರ ಆರೋಪಗಳಿವೆ. 2021 ರಿಂದ ವಿಜಯ್ ಭಾವನಾತ್ಮಕವಾಗಿ ದೂರವಾಗಿದ್ದಾರೆ ಮತ್ತು ವೈವಾಹಿಕ ಜೀವನದಲ್ಲಿ ಅಗೌರವ ತೋರಿಸುತ್ತಿದ್ದಾರೆ ಎಂಬುದು ಸಂಗೀತಾ ಅವರ ಆರೋಪ. ಏಪ್ರಿಲ್ 20, 2026 ಕ್ಕೆ ಈ ಪ್ರಕರಣದ ವಿಚಾರಣೆ ನಡೆಯಲಿದೆ.

ಕಾರಿನಲ್ಲಿ ಒಟ್ಟಿಗೆ ಬಂದಿದ್ದೇ ವಿವಾದ

ಇತ್ತೀಚೆಗೆ ನಿರ್ಮಾಪಕ ಕಲ್ಪತಿ ಸುರೇಶ್ ಅವರ ಮಗನ ವಿವಾಹ ಆರತಕ್ಷತೆಯಲ್ಲಿ ವಿಜಯ್ ಮತ್ತು ತ್ರಿಷಾ ಒಂದೇ ಕಾರಿನಲ್ಲಿ ಬಂದು, ವೇದಿಕೆಯ ಮೇಲೆ ಒಟ್ಟಿಗೆ ಪೋಸ್ ನೀಡಿದ್ದು, ಇವರಿಬ್ಬರ ಸಂಬಂಧಕ್ಕೆ ಪುಷ್ಟಿ ನೀಡಿದಂತಾಗಿದೆ. ಇದು ಸಂಗೀತಾ ಅವರ ಕೋಪಕ್ಕೆ ಕಾರಣವಾಗಿದ್ದು, ಈ ಸಂಬಂಧ ತಮ್ಮ ಮಕ್ಕಳಿಗೆ ಮುಜುಗರ ತರುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಒಟ್ಟಿನಲ್ಲಿ, ವಿಜಯ್ ಅವರ ವೈಯಕ್ತಿಕ ಜೀವನ ಇದೀಗ ಕವಲು ದಾರಿಯಲ್ಲಿದೆ. ಕೋರ್ಟ್ ವಿಚಾರಣೆ ಏಪ್ರಿಲ್‌ಗೆ ಮುಂದೂಡಲ್ಪಟ್ಟಿದ್ದರೂ, ಸಾರ್ವಜನಿಕವಾಗಿ ಈ ಚರ್ಚೆ ಮಾತ್ರ ತಣ್ಣಗಾಗುವ ಲಕ್ಷಣಗಳೇ ಇಲ್ಲ. ತಾರಾ ಜೋಡಿಯ ಈ ವೈಯಕ್ತಿಕ ಸಂಘರ್ಷ ಅಂತಿಮವಾಗಿ ಎಲ್ಲಿಗೆ ಬಂದು ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜನ್ಸೀಸ್).