ನಟಿ ಕಾಮಾಕ್ಷಿ ಭಾಸ್ಕರ್ಲಾ ( Kamakshi Bhaskarla )
- ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವ ಚಾಳಿ ಸಾಮಾನ್ಯವಾಗಿದೆ
- ನಟಿಯರ ಮನಸ್ಸು ಕದಡುವಂತಹ ಕಾಮೆಂಟ್ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ
- ಇತ್ತೀಚೆಗೆ ನೆಟ್ಟಿಗನೊಬ್ಬ ಕೇಳಿದ ವಿಚಿತ್ರ ಪ್ರಶ್ನೆಗೆ ನಟಿ ಕಾಮಾಕ್ಷಿ ಭಾಸ್ಕರ್ಲಾ ಖಡಕ್ ಉತ್ತರ ನೀಡಿದ್ದಾರೆ
Kamakshi Bhaskarla : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್ಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ. ಇದೀಗ ಅದೇ ರೀತಿಯ ಕಾಮೆಂಟ್ಗೆ ನಟಿ ಕಾಮಾಕ್ಷಿ ಭಾಸ್ಕರ್ಲಾ ಅವರು ಖಡಕ್ ಉತ್ತರ ನೀಡಿದ್ದಾರೆ.
ಕಾಮಾಕ್ಷಿ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಫಾಲೋವರ್ಸ್ ಜತೆ ಪ್ರಶ್ನೋತ್ತರ ಚಟುವಟಿಕೆ ನಡೆಸಿದ್ದರು. ಫಾಲೋವರ್ಸ್ ಕೇಳುವ ಪ್ರಶ್ನೆಗೆ ಉತ್ತರಿಸುವುದು ಕಾಮಾಕ್ಷಿ ಅವರ ಕೆಲಸವಾಗಿತ್ತು. ಈ ವೇಳೆ ನೆಟ್ಟಿಗನೊಬ್ಬ ಕೇಳಿದ ತುಂಬಾ ವಿಚಿತ್ರ ಪ್ರಶ್ನೆಗೆ ಕಾಮಾಕ್ಷಿ ಅವರು ಹಾಸ್ಯಮಯ ಉತ್ತರವನ್ನು ನೀಡಿದ್ದಾರೆ.
ಅಷ್ಟಕ್ಕೂ ನೆಟ್ಟಿಗ ಕೇಳಿದ ಪ್ರಶ್ನೆ ಏನೆಂದರೆ, ಸುಂದರವಾದ ಹುಡುಗಿಯರು ಮಲ ವಿಸರ್ಜನೆ ಮಾಡುತ್ತಾರೆಯೇ? ಅನ್ನೋದು. ಇದಕ್ಕೆ ಬಹಳ ವ್ಯಂಗ್ಯವಾಗಿ ಕಾಮಾಕ್ಷಿ ಉತ್ತರ ನೀಡಿದ್ದಾರೆ.
ಕಾಮಾಕ್ಷಿ ಹೇಳಿದ್ದೇನು?
ಈ ಪ್ರಶ್ನೆಗೆ ಉತ್ತರಿಸಲು ಓರ್ವ ವೈದ್ಯೆ ಮತ್ತು ನಟಿಯಾಗಿ ನಾನೇ ಸರಿಯಾದ ವ್ಯಕ್ತಿ ಎಂದ ಕಾಮಾಕ್ಷಿ, ಸುಂದರವಾದ ಹುಡುಗಿಯರು ಶೌಚಕ್ಕೆ ಹೋಗುವುದಿಲ್ಲ ಅಂತಾ ಹೇಳಿದರು. ಅದಕ್ಕೆ ಬಹಳ ವಿಚಿತ್ರವಾದ ಕಾರಣವೊಂದನ್ನು ಸಹ ನೀಡಿದರು. ಆ ಕಾರಣ ಏನೆಂದರೆ, ನಮ್ಮ ಹೊಟ್ಟೆಗಳು ಸಿಮೆಂಟ್ ಮತ್ತು ಕಾಂಕ್ರೀಟ್‌ನಿಂದ ಮಾಡಲ್ಪಟ್ಟಿವೆ ಹಾಗಾಗಿ, ನಾವು ತಿಂದ ಆಹಾರವೆಲ್ಲವೂ ಅಲ್ಲಿಯೇ ಮಾಯವಾಗಿ ಬಿಡುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಅಷ್ಟೇ ಅಲ್ಲದೆ, ಉಳಿದದ್ದನ್ನು ನಾವು ಸಾವಯವ ಕೃಷಿಗಾಗಿ ಬಳಸುತ್ತೇವೆ ಎಂದು ಹೇಳುವ ಮೂಲಕ ಪ್ರಶ್ನೆ ಕೇಳಿದವರಿಗೆ ಚಾಣಾಕ್ಷತನದಿಂದ ಟಾಂಗ್ ನೀಡಿದರು.
ಅಂದಹಾಗೆ, ನೆಟ್ಟಿಗ ಕೇಳಿದ ಇಂತಹ ಬಾಲಿಶ ಪ್ರಶ್ನೆಗಳಿಗೆ ಬಹಳ ಲಘುವಾಗಿ ಮತ್ತು ಹಾಸ್ಯದ ಮೂಲಕವೇ ಕಾಮಾಕ್ಷಿ ಉತ್ತರಿಸಿದ್ದಾರೆ. ಒಂದು ದಿನದ ಹಿಂದಷ್ಟೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ 1.3 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೋವನ್ನು ಸುಮಾರು 11 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಇಂತಹ ಬಾಲಿಶ ಪ್ರಶ್ನೆಗೆ ನೀವು ಕೊಟ್ಟಿರುವ ಉತ್ತರ ಸರಿಯಾಗಿದೆ ಎಂದು ಅಭಿಮಾನಿಗಳು ಕಾಮಾಕ್ಷಿ ಅವರ ಬೆನ್ನು ತಟ್ಟುತ್ತಿದ್ದಾರೆ.
ಅಂದಹಾಗೆ, ಕನ್ನಡಿಗರಿಗೆ ಕಾಮಾಕ್ಷಿ ಪರಿಚಯ ಇಲ್ಲದಿರಬಹುದು ಆದರೆ, ಅವರು ನಟಿಸಿದ ಸಿನಿಮಾಗಳಂತೂ ನೆನಪಿನಲ್ಲಿರುತ್ತವೆ. ಅಂತಹ ಚಿತ್ರಗಳಲ್ಲಿ ಪೋಲಿಮೆರಾ ಹಾಗೂ ದೂತಾ ಕೂಡ ಸೇರಿವೆ. ಈ ಚಿತ್ರಗಳನ್ನು ನೋಡಿದವರು ಯಾರೂ ಕಾಮಾಕ್ಷಿ ಅವರನ್ನು ಮರೆಯುವುದಿಲ್ಲ. ಈ ಸುಂದರಿ ತನ್ನ ಅಭಿನಯದಿಂದಲೇ ಪ್ರೇಕ್ಷಕರನ್ನು ತಮ್ಮತ್ತ ಸೆಳೆದಿದ್ದಾರೆ. ಕಾಮಾಕ್ಷಿ ಅವರು ತುಂಬಾ ಗ್ಲಾಮರಸ್ ಬೆಡಗಿ. ಅವರ ಇನ್ಸ್ಟಾಗ್ರಾಂ ಪೇಜ್ ತೆಗೆದು ನೋಡಿದರೆ ಬಿಕಿನಿ ಮತ್ತು ಅರೆಬೆತ್ತಲೆ ಫೋಟೋಗಳೇ ತುಂಬಿವೆ. ಆದರೆ, ಪೋಲಿಮೆರಾ ಚಿತ್ರದಲ್ಲಿ ಕಾಮಾಕ್ಷಿ ಡಿಗ್ಲಾಮರಸ್ ಆಗಿ ಕಾಣಿಸಿಕೊಂಡರು. ಇನ್ಸ್ಟಾದಲ್ಲಿ ಅವರ ಫೋಟೋಗಳನ್ನು ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.
ಕೊನೆಯದಾಗಿ ಈ ಬೆಡಗಿ '12A ರೈಲ್ವೆ ಕಾಲನಿ' ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲರಿ ನರೇಶ್ ನಾಯಕನಾಗಿ ನಟಿಸಿರುವ ಈ ಚಿತ್ರವೂ ಒಂದು ಥ್ರಿಲ್ಲರ್ ಸಿನಿಮಾ. ಆದರೆ, ಬಾಕ್ಸ್ಆಫೀಸ್ನಲ್ಲಿ ಯಶಸ್ಸು ಸಾಧಿಸಲಿಲ್ಲ. ಕಾಮಾಕ್ಷಿ ನಟಿಯಷ್ಟೇ ಅಲ್ಲದೆ ಅವರು ವೃತ್ತಿಯಲ್ಲಿ ವೈದ್ಯೆಯೂ ಹೌದು. (ಏಜೆನ್ಸೀಸ್).