ತಾರಾದಂಪತಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ 
ಟಾಲಿವುಡ್

ಲವ್​ ಮಾಡ್ತಿದ್ರೂ ಮದುವೆವರೆಗೂ ಅದನ್ನು ಗುಟ್ಟಾಗಿ ಇಟ್ಟಿದ್ದೇಕೆ? ಕೊನೆಗೂ ಕಾರಣ ಬಿಚ್ಚಿಟ್ಟ ವಿಜಯ್​-ರಶ್ಮಿಕಾ..! Rashmika Mandanna and Vijay Deverakonda

ವರ್ಷಗಳ ಕಾಲ ಡೇಟಿಂಗ್‌ನಲ್ಲಿದ್ದ ಈ ತಾರಾ ದಂಪತಿ ಕಳೆದ ಫೆಬ್ರವರಿಯಲ್ಲಿ ಹಸೆಮಣೆ ಏರುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದೆ. ತಮ್ಮ ಪ್ರೀತಿಯ ವಿಚಾರವನ್ನು ದೀರ್ಘಕಾಲದವರೆಗೆ ಗುಟ್ಟಾಗಿಟ್ಟಿದ್ದ ಈ ಜೋಡಿ, ಈಗ ತಮ್ಮ ಹೊಸ ಸಿನಿಮಾದ ಪ್ರಚಾರದ ವೇಳೆ ಅದಕ್ಕೆ ಕಾರಣ ಏನೆಂಬುದನ್ನು ಮುಕ್ತವಾಗಿ ಹಂಚಿಕೊಂಡಿದೆ.

ಹೈದರಾಬಾದ್​: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ತಾರಾದಂಪತಿಯಾಗಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ( Rashmika Mandanna and Vijay Deverakonda ) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಜತೆಯಾಗಿ ನಟಿಸಿರುವ ರಣಬಾಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ದಂಪತಿ, ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದ ಅನೇಕ ವಿಚಾರಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳುತ್ತಿದೆ.

ವರ್ಷಗಳ ಕಾಲ ಡೇಟಿಂಗ್‌ನಲ್ಲಿದ್ದ ಈ ತಾರಾ ದಂಪತಿ ಕಳೆದ ಫೆಬ್ರವರಿಯಲ್ಲಿ ಹಸೆಮಣೆ ಏರುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದೆ. ತಮ್ಮ ಪ್ರೀತಿಯ ವಿಚಾರವನ್ನು ದೀರ್ಘಕಾಲದವರೆಗೆ ಗುಟ್ಟಾಗಿಟ್ಟಿದ್ದ ಈ ಜೋಡಿ, ಈಗ ತಮ್ಮ ಹೊಸ ಸಿನಿಮಾದ ಪ್ರಚಾರದ ವೇಳೆ ಅದಕ್ಕೆ ಕಾರಣ ಏನೆಂಬುದನ್ನು ಮುಕ್ತವಾಗಿ ಹಂಚಿಕೊಂಡಿದೆ.

ತಮ್ಮ ರಣಬಾಲಿ ಸಿನಿಮಾ ಪ್ರಚಾರಕ್ಕಾಗಿ ಪ್ರಖರ್ ಗುಪ್ತಾ ಅವರ ಪಾಡ್‌ಕಾಸ್ಟ್​ಗೆ ನೀಡಿದ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ತಮ್ಮಿಬ್ಬರ ಬಾಂಧವ್ಯದ ಹಾದಿಯನ್ನು ವಿವರಿಸಿದ್ದಾರೆ. ತಮಗೆ ರಶ್ಮಿಕಾ ಪರಿಚಯವಾಗಿ ಬರೋಬ್ಬರಿ ಎಂಟು ವರ್ಷಗಳಾಗಿವೆ ಎಂದು ವಿಜಯ್ ತಿಳಿಸಿದ್ದಾರೆ. ಮೊದಲಿಗೆ ಇಬ್ಬರೂ ಸಹನಟರಾಗಿ ಪ್ರಯಾಣ ಆರಂಭಿಸಿದರು, ನಂತರ ಉತ್ತಮ ಸ್ನೇಹಿತರಾದರು, ಕಾಲಕ್ರಮೇಣ ಆ ಸ್ನೇಹ ಪ್ರೀತಿಯಾಗಿ ಬದಲಾಯಿತು. ಕೊನೆಗೆ ದೀರ್ಘಕಾಲದ ಒಡನಾಟದ ಬಳಿಕ ರಶ್ಮಿಕಾ ಈಗ ತಮ್ಮ ಜೀವನ ಸಂಗಾತಿಯಾಗಿದ್ದಾರೆ (ಹೆಂಡತಿಯಾಗಿದ್ದಾರೆ) ಎಂದು ವಿಜಯ್ ಖುಷಿಯಿಂದ ಹಂಚಿಕೊಂಡಿದ್ದಾರೆ.

ಪ್ರೀತಿ ಮುಚ್ಚಿಡಲು ಕಾರಣವೇನು?

ತಮ್ಮ ಪ್ರೀತಿಯನ್ನು ಬಹಿರಂಗಪಡಿಸದೆ ದೀರ್ಘಕಾಲ ಮುಚ್ಚಿಟ್ಟಿದ್ದೇಕೆ ಎಂಬ ಪ್ರಶ್ನೆಗೆ ವಿಜಯ್ ಸ್ಪಷ್ಟನೆ ನೀಡಿದ್ದಾರೆ. ಯಾರ ಕಣ್ಣಿಗೂ ಸಿಕ್ಕಿಹಾಕಿಕೊಳ್ಳಬಾರದು ಎಂಬ ಕಾರಣಕ್ಕೆ ನಮ್ಮ ಪ್ರೀತಿಯನ್ನು ಮುಚ್ಚಿಡಲಿಲ್ಲ ಎಂದಿರುವ ವಿಜಯ್​, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಲ್ಲರಿಗೂ ಪ್ರತ್ಯೇಕವಾಗಿ ಹೇಳಿಕೊಳ್ಳುವ ಅಗತ್ಯ ಇದೆ ಎಂದು ನನಗೆ ಅನಿಸಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅನಾವಶ್ಯಕ ಗಾಸಿಪ್‌ಗಳು ಮತ್ತು ಗದ್ದಲದಿಂದ ದೂರ ಉಳಿದು ತಮ್ಮ ಬಾಂಧವ್ಯವನ್ನು ಖಾಸಗಿಯಾಗಿಡಲು ಇಷ್ಟಪಟ್ಟಿರುವುದಾಗಿ ವಿಜಯ್​ ಅವರು ತಿಳಿಸಿದ್ದಾರೆ.

ಪ್ರೀತಿಯು ಮನರಂಜನೆಯಲ್ಲ

ನಟಿ ರಶ್ಮಿಕಾ ಮಂದಣ್ಣ ಮಾತನಾಡಿ, ತಮ್ಮಿಬ್ಬರ ಬಾಂಧವ್ಯ ಅಥವಾ ಪ್ರೀತಿ ಎನ್ನುವುದು ಸಾರ್ವಜನಿಕರಿಗೆ ಮನರಂಜನೆ ನೀಡುವುದಕ್ಕಲ್ಲ ಎಂದು ಖಡಕ್ ಆಗಿ ನುಡಿದಿದ್ದಾರೆ. ಆ ಸಂಬಂಧ ಕೇವಲ ಅವರಿಬ್ಬರಿಗೆ ಮಾತ್ರ ಸೇರಿದ್ದು. ತಮ್ಮ ಖಾಸಗಿ ವಿಚಾರಗಳನ್ನು ಹೊರಗಿನವರಿಗೆ ಹೇಳಲೇಬೇಕು ಎಂದೇನಿಲ್ಲ, ಯಾವುದನ್ನು ಮುಚ್ಚಿಡಬೇಕು ಅಥವಾ ಗುಟ್ಟಾಗಿಡಬೇಕು ಎಂಬುದು ತಮಗೆ ಬಿಟ್ಟದ್ದು ಎಂದು ರಶ್ಮಿಕಾ ದಿಟ್ಟವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಅಂತಿಮವಾಗಿ ರಶ್ಮಿಕಾ ಮತ್ತು ವಿಜಯ್​ ವರ್ಷಗಳ ಕಾಲ ತಮ್ಮ ಪ್ರೀತಿಯನ್ನು ಗುಟ್ಟಾಗಿ ಇಡಲು ಕಾರಣ ಏನೆಂಬುದನ್ನುಕೊನೆಗೂ ಬಹಿರಂಗಪಡಿಸಿದ್ದಾರೆ.

ಇನ್ನೂ ರಣಬಾಲಿ ಸಿನಿಮಾ ವಿಚಾರಕ್ಕೆ ಬರುವುದಾದರೆ, ಈ ಸಿನಿಮಾ ಅಕ್ಟೋಬರ್ 16ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಾಹುಲ್ ಸಾಂಕೃತ್ಯನ್ ನಿರ್ದೇಶನದಲ್ಲಿ ಮೂಡಿಬಂದಿರುವ 'ರಣಬಾಲಿ' ಚಿತ್ರವು 19ನೇ ಶತಮಾನದ (1854-1878ರ ಕಾಲಘಟ್ಟ) ಬ್ರಿಟಿಷರ ಆಳ್ವಿಕೆಯ ಹಿನ್ನೆಲೆಯನ್ನು ಹೊಂದಿರುವ ಭರ್ಜರಿ ಪಿರಿಯಡ್ ಆಕ್ಷನ್-ಡ್ರಾಮಾ ಚಿತ್ರವಾಗಿದೆ.

ಮೈತ್ರಿ ಮೂವಿ ಮೇಕರ್ಸ್ ಮತ್ತು ಟಿ-ಸೀರಿಸ್ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ರಗಡ್ ವಾರಿಯರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ರಶ್ಮಿಕಾ ಮಂದಣ್ಣ 'ಜಮ್ಮಾ' ಎಂಬ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಜಯ್-ಅತುಲ್ ಅವರ ಸಂಗೀತ ಸಂಯೋಜನೆ ಹಾಗೂ ಬ್ರಿಟಿಷ್ ಆಳ್ವಿಕೆಯ ದಬ್ಬಾಳಿಕೆಯೆ ವಿರೋಧದ ಕಥಾಹಂದರವನ್ನು ಹೊಂದಿರುವ ಈ ಪ್ಯಾನ್-ಇಂಡಿಯಾ ಚಿತ್ರದ ಮೇಲಿನ ನಿರೀಕ್ಷೆ ಸಿನಿಪ್ರಿಯರಲ್ಲಿ ಗಗನಕ್ಕೇರಿದೆ, (ಏಜೆನ್ಸೀಸ್​).