ಜಾನ್ವಿ ಕಪೂರ್​ ಬೆಂಬಲಕ್ಕೆ ನಿಂತ ಜಗಪತಿ ಬಾಬು 
ಟಾಲಿವುಡ್

ನಿರ್ದೇಶಕರು ಹೇಳಿದ್ದನ್ನೇ ಆಕೆ ಮಾಡಿದ್ದಾಳೆ... ಅವಳನ್ನೇಕೆ ಟ್ರೋಲ್​ ಮಾಡ್ತಿರಿ; ಜಾನ್ವಿ ಕಪೂರ್​ ಬೆಂಬಲಕ್ಕೆ ನಿಂತ ಜಗಪತಿ ಬಾಬು! Jagapathi Babu on Janhvi Kapoor

ಪ್ರಮುಖ ಮುಖ್ಯಾಂಶಗಳು

  • ಪೆದ್ದಿ ಸಿನಿಮಾದಲ್ಲಿ ಜಾನ್ವಿ ದೇಹ ಪ್ರದರ್ಶನ
  • ಸೋಷಿಯಲ್​ ಮೀಡಿಯಾನಲ್ಲಿ ಜಾನ್ವಿ ಟ್ರೋಲ್​
  • ಅವಳು ನಿರ್ದೇಶಕರು ಹೇಳಿದಂತೆ ಮಾಡಿದ್ದಾಳೆ
  • ಜಾನ್ವಿ ಕಪೂರ್​ ಬೆಂಬಲಕ್ಕೆ ನಿಂತ ಜಗಪತಿ ಬಾಬು
ಟಾಲಿವುಡ್​​: ತೆಲುಗು ಇಂಡಸ್ಟ್ರಿ ಸೂಪರ್​ ಸ್ಟಾರ್​ ರಾಮ್​ ಚರಣ್​, ಜಾನ್ವಿ ಕಪೂರ್​ ನಟನೆಯ ಹಾಗೂ ಬುಚ್ಚಿ ಬಾಬು ಸನಾ ನಿರ್ದೇಶನದ ಸಿನಿಮಾ ಪೆದ್ದಿ ಬಿಡುಗಡೆಯಾದ ದಿನದಿಂದ ವಿವಾದದ ಮೂಲಕವೇ ಸಾಕಷ್ಟು ಸದ್ದು ಮಾಡುತ್ತಿದೆ.
ಸಿನಿಮಾದಲ್ಲಿ ನಾಯಕ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ಳನ್ನು ಕೇವಲ ದೈಹಿಕ ಸೌಂದರ್ಯ ಪ್ರದರ್ಶಕಿಯಂತೆ ಚಿತ್ರಿಸಲಾಗಿದೆ ಎಂದು ಸಿನಿ ವಿಮರ್ಶಕರು ಹಾಗೂ ಪ್ರೇಕ್ಷಕರು ಟ್ರೋಲ್​ ಮಾಡುತ್ತಿದ್ದಾರೆ. ಈಗ ಈ ವಿವಾದದ ಬಗ್ಗೆ ಪೆದ್ದಿ ಸಿನಿಮಾದಲ್ಲಿ ನಟಿಸಿರುವ ಜಗಪತಿ ಬಾಬು (Jagapathi Babu on Janhvi Kapoor), ನಟಿ ಜಾನ್ವಿ ಕಪೂರ್​ ಪರ ಬ್ಯಾಟಿಂಗ್ ಮಾಡಿದ್ದಾರೆ.

ನಿರ್ದೇಶಕರು ಹೇಳಿದಂತೆ ಅವಳು ಮಾಡಿದ್ದಾಳೆ!

ಸಿನಿಮಾದಲ್ಲಿ ಮಾಡುವ ಪಾತ್ರಕ್ಕಾಗಿ ಕಲಾವಿದನನ್ನು ಟ್ರೋಲ್​ ಮಾಡುವುದು ಸರಿಯಲ್ಲ. ಪೆದ್ದಿ ಸಿನಿಮಾದಲ್ಲಿ ನಿರ್ದೇಶಕರು ಏನು ಹೇಳಿದರೋ ಅದನ್ನು ಜಾನ್ವಿ ಮಾಡಿದ್ದಾಳೆ. ನಾನು ಈ ವಿಷಯದಲ್ಲಿ ಜಾನ್ವಿ ಪರ ನಿಲ್ಲುತ್ತೇನೆ, ಆಕೆಯನ್ನು ವೈಯಕ್ತಿಕವಾಗಿ ಹೀಗೆ ಟ್ರೋಲ್​ ಮಾಡುತ್ತಿರುವುದು ಸರಿಯಲ್ಲ. ಇದು ಅವಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೆಂದು ಸಹನಟ ಹೇಳಿದ್ದಾರೆ.
ಸ್ಪಷ್ಟನೆ ಕೊಟ್ಟ ನಿರ್ದೇಶಕ
ದಿನ ಕಳೆದಂತೆ ಸಿನಿಮಾ ಹಾಗೂ ನಾಯಕ ನಟಿ ಜಾನ್ವಿ ಕಪೂರ್​ನ್ನು ಟ್ರೋಲ್​ ಮಾಡುವುದು ಹೆಚ್ಚಾದಂತೆ ನಿರ್ದೇಶಕ ಬುಚ್ಚಿ ಬಾಬು ಸನಾ ಎಕ್ಸ್​(ಟ್ವಿಟರ್​) ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಾನೊಬ್ಬ ಸಿನಿಮಾ ನಿರ್ದೇಶಕನಾಗಿ, ಪ್ರೇಕ್ಷಕರನ್ನು ರಂಜಿಸಬೇಕು, ಪ್ರೇರೇಪಿಸಬೇಕು ಎನ್ನುವುದು ನನ್ನ ಉದ್ದೇಶ. ಇದನ್ನೇ ನಾನು ನಂಬುವುದು. ಆದರೆ, ನನ್ನ ಸಿನಿಮಾದಿಂದ ಅಗೌರವಿಸುವುದು, ಮುಜುಗರಕ್ಕೀಡಾಗುವಂತೆ ನಡೆದುಕೊಳ್ಳುವುದು ನನ್ನ ಉದ್ದೇವಾಗಿರಲಿಲ್ಲ. ಪೆದ್ದಿ ಸಿನಿಮಾದ ಕೆಲವು ದೃಶ್ಯಗಳ ಬಗ್ಗೆ ಕೇಳಿ ಬಂದಿರುವ ಟೀಕೆ ಹಾಗೂ ಪ್ರತಿಕ್ರಿಯೆಯನ್ನು ನಾವು ಪರಿಗಣಿಸಿದ್ದೇವೆ.
ತೆರೆಯ ಮೇಲೆ ಮತ್ತು ನಿಜ ಜೀವನದಲ್ಲೂ ನಾನು ಯಾವಾಗಲೂ ಮಹಿಳೆಯರಿಗೆ ಅಪಾರ ಗೌರವವನ್ನು ನೀಡುತ್ತಾ ಬಂದಿದ್ದೇನೆ. ಯಾವುದೇ ಮಹಿಳಾ ಪಾತ್ರವನ್ನು ವಸ್ತುಪ್ರದರ್ಶನದಂತೆ ತೋರಿಸುವ ಅಥವಾ ಗೌರವ ರಹಿತವಾಗಿ ಬಿಂಬಿಸುವ ಯಾವುದೇ ಉದ್ದೇಶ ನಮಗೆ ಇರಲಿಲ್ಲ.
ಒಂದು ವೇಳೆ ಚಿತ್ರದ ಯಾವುದೇ ಭಾಗವು ಆ ರೀತಿ ಬಿಂಬಿತವಾಗಿದೆ ಎಂದು ಜನರಿಗೆ ಅನಿಸಿದ್ದರೆ, ನಾವು ಆ ಭಾವನೆಗಳನ್ನು ಗೌರವಿಸುತ್ತೇವೆ. ಸಾರ್ವಜನಿಕರು ಎತ್ತಿರುವ ಕಳಕಳಿಯನ್ನು ನಾವು ಅರ್ಥಮಾಡಿಕೊಂಡಿದ್ದು, ಇದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇವೆ ಎಂದಿದ್ದಾರೆ, (ಏಜನ್ಸೀಸ್​).