ತಾಯ್ತನದ ಸಂಭ್ರಮದಲ್ಲಿ ನಟಿ ಸಮಂತಾ WEB
ಟಾಲಿವುಡ್

ತಾಯ್ತನದ ಸಂಭ್ರಮದಲ್ಲಿ ನಟಿ ಸಮಂತಾ: ಪತಿ ರಾಜ್ ನಿಡಿಮೋರು ಜತೆ ವಿಶೇಷ ಪೂಜೆ | Samantha Ruth Prabhu

ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಮತ್ತು ಜನಪ್ರಿಯ ತಾರಾ ಜೋಡಿ ಸಮಂತಾ ರುತ್ ಪ್ರಭು ಹಾಗೂ ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಇದೀಗ ತಮ್ಮ ಬದುಕಿನ ಅತ್ಯಂತ ಸುಂದರ ಅಧ್ಯಾಯಕ್ಕೆ ಕಾಲಿಡುತ್ತಿದ್ದಾರೆ. ತೆರೆಯ ಮೇಲೆ ತಮ್ಮ ಪ್ರತಿಭೆಯ ಮೂಲಕ ಮೋಡಿ ಮಾಡಿದ್ದ ಈ ಜೋಡಿ, ನಿಜಜೀವನದಲ್ಲಿ ತಮ್ಮ ಮೊದಲ ಮಗುವಿನ ಆಗಮನದ ಸಂಭ್ರಮದಲ್ಲಿದೆ. ಮನೆಯಲ್ಲೀಗ ಹಬ್ಬದ ವಾತಾವರಣ, ಕುಟುಂಬಸ್ಥರ ಪ್ರೀತಿ ಹಾಗೂ ಹಿರಿಯರ ಆಶೀರ್ವಾದದ ನಡುವೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳಲು ಈ ತಾರಾ ದಂಪತಿ ಸಜ್ಜಾಗಿದ್ದಾರೆ.Samantha Ruth Prabhu

Samantha Ruth Prabhu: ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಮತ್ತು ಜನಪ್ರಿಯ ತಾರಾ ಜೋಡಿ ಸಮಂತಾ ರುತ್ ಪ್ರಭು ಹಾಗೂ ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಇದೀಗ ತಮ್ಮ ಬದುಕಿನ ಅತ್ಯಂತ ಸುಂದರ ಅಧ್ಯಾಯಕ್ಕೆ ಕಾಲಿಡುತ್ತಿದ್ದಾರೆ. ತೆರೆಯ ಮೇಲೆ ತಮ್ಮ ಪ್ರತಿಭೆಯ ಮೂಲಕ ಮೋಡಿ ಮಾಡಿದ್ದ ಈ ಜೋಡಿ, ನಿಜಜೀವನದಲ್ಲಿ ತಮ್ಮ ಮೊದಲ ಮಗುವಿನ ಆಗಮನದ ಸಂಭ್ರಮದಲ್ಲಿದೆ. ಮನೆಯಲ್ಲೀಗ ಹಬ್ಬದ ವಾತಾವರಣ, ಕುಟುಂಬಸ್ಥರ ಪ್ರೀತಿ ಹಾಗೂ ಹಿರಿಯರ ಆಶೀರ್ವಾದದ ನಡುವೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳಲು ಈ ತಾರಾ ದಂಪತಿ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಮನೆಯಲ್ಲಿ ನೆರವೇರಿದ ವಿಶೇಷ ಪೂಜಾ ಕಾರ್ಯಕ್ರಮದ ಮನಮೋಹಕ ಕ್ಷಣಗಳನ್ನು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಕನಸಿನಂತಹ ಚಿತ್ರಗಳು ಇದೀಗ ಅಭಿಮಾನಿಗಳ ಹೃದಯ ಗೆಲ್ಲುತ್ತಿವೆ.

ಹಂಚಿಕೊಂಡ ಫೋಟೋಗಳಲ್ಲಿ ಸಮಂತಾ ಕೆಂಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡರೆ, ರಾಜ್ ಕ್ರೀಮ್ ಬಣ್ಣದ ಕುರ್ತಾ ಹಾಗೂ ಬಿಳಿ ಪೈಜಾಮ ಧರಿಸಿದ್ದಾರೆ. ಇಬ್ಬರೂ ಪರಸ್ಪರ ಪ್ರೀತಿಯಿಂದ ನೋಡುತ್ತಿರುವ ಚಿತ್ರ ಗಮನ ಸೆಳೆದಿದೆ. ಹಿರಿಯರಿಂದ ಆಶೀರ್ವಾದ ಪಡೆಯುತ್ತಿರುವ ಸಮಂತಾ, ಕುಟುಂಬದವರೊಂದಿಗೆ ತೆಗೆಸಿಕೊಂಡ ಫೋಟೋಗಳು ಹಾಗೂ ದಂಪತಿ ಪೂಜೆ ನೆರವೇರಿಸುತ್ತಿರುವ ಕ್ಷಣಗಳೂ ಚಿತ್ರಗಳಲ್ಲಿ ಕಾಣಿಸಿಕೊಂಡಿವೆ. ಆಪ್ತರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮ ಕುಟುಂಬದ ಸಂಭ್ರಮವನ್ನು ಎತ್ತಿ ತೋರಿಸಿದೆ.

ಮಾತೃತ್ವದ ವಿರಾಮ ಪಡೆಯಲಿರುವ ಸಮಂತಾ

ಜೂನ್ 2026ರಲ್ಲಿ ಸಮಂತಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂತಸದ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದರು. ತಮ್ಮ ಸಿನಿಮಾ 'ಮಾ ಇಂಟಿ ಬಂಗಾರಂ' ಯಶಸ್ಸಿನ ಸಂಭ್ರಮದ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದರು. ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿದ ಬಳಿಕ ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ಸಮಯ ನಟನೆಯಿಂದ ದೂರ ಉಳಿದು ಮಾತೃತ್ವದ ರಜೆ ಪಡೆಯುವುದಾಗಿ ಹೇಳಿದ್ದರು. ಬಳಿಕ ಮತ್ತೆ ಹೊಸ ಸಿನಿಮಾದೊಂದಿಗೆ ಅಭಿಮಾನಿಗಳ ಮುಂದೆ ಬರುವುದಾಗಿಯೂ ತಿಳಿಸಿದ್ದರು.

ಇದನ್ನೂ ಓದಿ : 12 ಗಂಟೆ ವಿಳಂಬ: ಮುಂಬೈ ಏರ್‌ಪೋರ್ಟ್‌ನಲ್ಲಿ ಸ್ಪೈಸ್‌ಜೆಟ್ ಪ್ರಯಾಣಿಕರ ಹೈಡ್ರಾಮಾ! Mumbai Airport

ಸಮಂತಾ ಮತ್ತು ರಾಜ್ ನಿಡಿಮೋರು ಡಿಸೆಂಬರ್ 1, 2025ರಂದು ಕೊಯಮತ್ತೂರಿನ ಸದ್ಗುರು ಅವರ ಇಶಾ ಫೌಂಡೇಶನ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಮದುವೆಯ ದಿನವೇ ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಇವರಿಬ್ಬರು ಮೊದಲಿಗೆ ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಬಳಿಕ'ಸಿಟಾಡೆಲ್ ಹನಿ ಬನ್ನಿ' ಹಾಗೂ 'ಮಾ ಇಂಟಿ ಬಂಗಾರಂ'ನಲ್ಲಿಯೂ ಒಂದಾಗಿದ್ದರು. ಇದೀಗ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ದಂಪತಿಯ ಪೂಜೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.