Peddi Cinema Shooting 
ಟಾಲಿವುಡ್

`ಪೆದ್ದಿ' ಸಿನಿಮಾ ಶೂಟಿಂಗ್​ ವೇಳೆ ರಾಮ್​ ಚರಣ್​ಗೆ ಗಾಯ; ಚಿತ್ರತಂಡ ಹೇಳಿದ್ದೇನು, ನಟನ ಪರಿಸ್ಥಿತಿ ಹೇಗಿದೆ?..Peddi Cinema

ಪ್ರಮುಖ ಮುಖ್ಯಾಂಶಗಳು

  • `ಪೆದ್ದಿ ಸಿನಿಮಾ' ಶೂಟಿಂಗ್​ ವೇಳೆ ನಟ ರಾಮ್​ ಚರಣ್​ಗೆ ಗಾಯ
  • ಕಣ್ಣಿನ ಮೇಲ್ಭಾಗಕ್ಕೆ ಗಾಯ, ನಾಲ್ಕು ಹೊಲಿಗೆ ಹಾಕಿದ ವೈದ್ಯರ ತಂಡ
  • ಹೈದರಾಬಾದ್​ನಲ್ಲಿ ಆಕ್ಷನ್​ ದೃಶ್ಯ ಚಿತ್ರೀಕರಣದ ವೇಳೆ ನಡೆದ ದುರಂತ
Peddi cinema shooting; ಟಾಲಿವುಡ್​ ನಟ ರಾಮ್​ಚರಣ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪೆದ್ದಿ ರಿಲೀಸ್​​ಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಮಾ.27 ಅವರ ಹುಟುಹಬ್ಬದ ದಿನದಂದು ರಿಲೀಸ್​ ಆಗಬೇಕಿದ್ದ ಸಿನಿಮಾ ಕಾರಣಾಂತರಗಳಿಂದಾಗಿ ಮುಂದೂಡಿದ್ದು ಒಂದೆಡೆ ಬೇಸರದ ಸಂಗತಿಯೆಂದರೆ, ಮತ್ತೊಂದು ಕಡೆ ನಾಯಕ ರಾಮ್​​ಚರಣ್​ಗೆ ಶೂಟಿಂಗ್​ ವೇಳೆ ಸಣ್ಣಪುಟ್ಟ ಗಾಯವಾಗಿದೆ ಎನ್ನುವ ಸುದ್ದಿಯೂ ಫ್ಯಾನ್ಸ್​ಲ್ಲಿ ಮತ್ತಷ್ಟು ಆತಂಕವನ್ನುಂಟು ಮಾಡಿದೆ.
ಹೌದು, ಮಂಗಳವಾರ ಹೈದರಾಬಾದ್​​ನಲ್ಲಿ ಪೆದ್ದಿ ಸಿನಿಮಾಗಾಗಿ ಹೈ ಆಕ್ಷನ್​ ಮತ್ತು ಆಕ್ಶನ್​ ಸೀಕ್ವೆನ್ಸ್​​ ಸೀನ್​ ಶೂಟಿಂಗ್​​ ವೇಳೆ ರಾಮ್​ಚರಣ್​ರಿಗೆ(Ram Charan) ಸಣ್ಣ ಪುಟ್ಟ ಗಾಯಗಳಾಗಿತ್ತು. ಸೆಟ್​ನಲ್ಲಿದ್ದ ಚಿತ್ರತಂಡ ಭಯಭೀತರಾಗಿದ್ದರು. ವೈದ್ಯರು ಅವರನ್ನು ಸಲಹಿದ ನಂತರ ಚೇತರಿಸಿಕೊಂಡು ಸೆಟ್​ಗೆ ಮರಳಿದರು. ಹೊಲಿಗೆ ಹಾಕುವಷ್ಟು ಗಾಯವಾದರೂ ಸಹ ಆತಂಕ ಪಡುವಂತದ್ದೇನಾಗಿಲ್ಲ ಎಂದು ಪೆದ್ದಿ ಸಿನಿಮಾ ತಂಡದ ಮೂಲಗಳು ತಿಳಿಸಿವೆ.
ಸಿನಿಮಾ ಕತೆ ಏನು?
ಉಪ್ಪೇನ ಸಿನಿಮಾದ(Uppena cinema) ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನದ ಈ ಸಿನಿಮಾದಲ್ಲಿ ಜಾನ್ವಿ ಕಪೂರ್​, ಜಗಪತಿ ಬಾಬು, ಶಿವರಾಜ್ ಕುಮಾರ್​ ಈ ಸಿನಿಮಾದಲ್ಲಿ ನಟಿಸಿದ್ದಾರೆ. ರೆಹಮಾನ್​ ಸಂಗೀತ ಮೂಡಿದ್ದು, ಚಿಕರಿ ಚಿಕರಿ ಹಾಡು ಮತ್ತು ಅದರಲ್ಲಿನ ನೃತ್ಯದ ಸ್ಟೆಪ್​ಗಳು ರೀಲ್ಸ್​, ಶಾರ್ಟ್ಸ್​​ಗಳಲ್ಲಿ ವೈರಲ್​ ಆಗಿತ್ತು. ಈ ಸಿನಿಮಾವು 1980ರ ದಶಕದ ಕ್ರೀಡೆ ಮತ್ತು ಅದರ ಮೇಲಿದ್ದ ಅಭಿಮಾನವನ್ನು ಒಳಗೊಂಡ ಕತೆ ಇದಾಗಿದೆ.

ಹೊಲಿಗೆ ಹಾಕಿದ್ದಾರೆ ಅಷ್ಟೇ

ನಟ ರಾಮ್​ಚರಣ್​ಗೆ ಗಂಭೀರವಾಗಿ ಗಾಯವಾಗಿಲ್ಲ. ಅಭಿಮಾನಿಗಳು ಭಯ ಪಡುವ ಅಗತ್ಯವಿಲ್ಲ. ಆಕ್ಷನ್​ ದೃಶ್ಯ ಚಿತ್ರೀಕರಣದ ವೇಳೆ ಕಣ್ಣಿನ ಮೇಲ್ಭಾಗದಲ್ಲಿ ಗಾಯವಾಗಿತ್ತು. ವೈದ್ಯರು ಅವರನ್ನು ಪರಿಶೀಳಿಸಿ ನಾಲ್ಕು ಹೊಲಿಗೆ ಹಾಕಿದ್ದಾರೆ. ವಿಶ್ರಾಂತಿಯೂ ತೆಗೆದುಕೊಳ್ಳದೆ ಅವರು ಶೂಟಿಂಗ್​ಗಾಗಿ ಸೆಟ್​ಗೆ ಮರಳಿದ್ದಾರೆ .ಅಭಿಮಾನಿಗಳು ಆತಂಕಪಡಬೇಕಾಗಿಲ್ಲ ಎಂದು ಚಿತ್ರತಂಡ ದೃಢಪಡಿಸಿದೆ.

ರಂಗಸ್ಥಳಂ ಹಾಗೂ ಪೆದ್ದಿ ಸಿನಿಮಾದ್ದು ಒಂದೇ ಸ್ಟೋರಿನಾ?

ರಾಮ್​ಚರಣ್​ ಅವರು ಡಿ ಗ್ಲಾಮ್​ ಆಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ರಂಗಸ್ಥಳಂನಲ್ಲಿಯೂ ಗ್ರಾಮೀಣ ಭಾಗದ ರೈತನಾಗಿ ಕಾಣಿಸಿಕೊಂಡಿದ್ದರು. ಅವರಿಗೆ ನಾಯಕಿಯಾಗಿ ಅವರು ಅಷ್ಟೇ ಎನರ್ಜಿಯಲ್ಲಿ ಸಮಂತಾ ನಟಿಸಿದ್ದರು. ಪ್ರಕಾಶ್​ ರಾಜ್, ಆದಿ ಪಿನಿ ಶೆಟ್ಟಿ, ಜಗಪತಿ ಬಾಬು ಸೇರಿದಂತೆ ಘಟಾನುಘಟಿ ನಟ-ನಟಿಯರು ಈ ಸಿನಿಮಾದಲ್ಲಿದ್ದರು. ಸವರ್ಣೀಯರ ದಬ್ಬಾಳಿಕೆಯು ಈ ಸಿನಿಮಾದ ಕಥಾ ಹಂದರ. ಆ ಸಿನಿಮಾದ ಹಾಡುಗಳು ಇಂದಿಗೂ ಸಹ ಗುನುಗುವಂತದ್ದು. ಆದರೆ, ರಂಗಸ್ಥಳಂ ಸಿನಿಮಾದಂತೆ ಪೆದ್ದಿ ಇರೋದಿಲ್ಲ. ಇದು ಬೇರೆಯದ್ದೇ ಚಿತ್ರಣವನ್ನು ತೆರೆದಿಡುತ್ತದೆ ಎಂದು ರಾಮ್​ಚರಣ್​ ಈ ಹಿಂದೆಯೇ ಸ್ಪಷ್ಟನೆ ಕೊಟ್ಟಿದ್ದರು.