ರಾಕಾ ಪದದ ಅರ್ಥವೇನು? ಅಲ್ಲು-ಅಟ್ಲೀ ಕಾಂಬೋದ ಹೊಸ ಸಿನಿಮಾ ಟೈಟಲ್ ಹಿಂದಿದೆ ಈ ಗೂಢಾರ್ಥ! Raaka
- ತೆಲುಗು ಚಿತ್ರರಂಗದ ಸ್ಟೈಲಿಶ್ ಹಾಗೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಇಂದು 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ
- ಸ್ಟಾರ್ಗಳ ಹುಟ್ಟುಹಬ್ಬ ಅಂದರೆ ಸಹಜವಾಗಿಯೇ ಹೊಸ ಸಿನಿಮಾಗಳ ಅಪ್ಡೇಟ್ ಇದ್ದೇ ಇರುತ್ತದೆ
- ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಚಿತ್ರದ ಅಪ್ಡೇಟ್ ಹೊರಬಿದ್ದಿದ್ದು ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ
- ಬನ್ನಿ-ಅಟ್ಲೀ ಕಾಂಬಿನೇಷನ್ನ ಬಹುನಿರೀಕ್ಷಿಯ ಪ್ಯಾನ್ ಇಂಡಿಯಾ ಸಿನಿಮಾಗೆ "ರಾಕಾ" ಎಂದು ಹೆಸರಿಡಲಾಗಿದೆ
Raaka : ತೆಲುಗು ಚಿತ್ರರಂಗದ ಸ್ಟೈಲಿಶ್ ಹಾಗೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರು ಇಂದು 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸ್ಟಾರ್ಗಳ ಹುಟ್ಟುಹಬ್ಬ ಅಂದರೆ ಸಹಜವಾಗಿಯೇ ಹೊಸ ಸಿನಿಮಾಗಳ ಅಪ್ಡೇಟ್ ಇದ್ದೇ ಇರುತ್ತದೆ. ಅದರಂತೆಯೇ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಚಿತ್ರದ ಅಪ್ಡೇಟ್ ಹೊರಬಿದ್ದಿದೆ. ಹೊಸ ಸಿನಿಮಾದ ಅಪ್ಡೇಟ್ ಎಷ್ಟರಮಟ್ಟಿಗೆ ಕ್ರೇಜ್ ಹುಟ್ಟುಹಾಕಿದೆ ಅಂದರೆ, ಸಾಮಾಜಿಕ ಜಾಲತಾಣದಲ್ಲಿ ಆ ಸಿನಿಮಾದ್ದೇ ಚರ್ಚೆಯಾಗಿದೆ.
ಹೌದು, ತಮಿಳು ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಅಟ್ಲೀ ಮತ್ತು ಅಲ್ಲು ಅರ್ಜುನ್ ಕಾಂಬೋದಲ್ಲಿ ಬಿಗ್ ಬಜೆಟ್ ಸಿನಿಮಾ ಮೂಡಿಬರಲಿದೆ. ಈಗಾಗಲೇ ಶೂಟಿಂಗ್ ನಡೆಯುತ್ತಿದೆ. ಆದರೆ, ಸಿನಿಮಾದ ಟೈಟಲ್ ಮಾತ್ರ ಇನ್ನೂ ಬಹಿರಂಗವಾಗಿರಲಿಲ್ಲ. ಇದೀಗ ಅಲ್ಲು ಅರ್ಜುನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿನಿಮಾದ ಟೈಟಲ್ ಘೋಷಣೆಯಾಗಿದೆ. ಬನ್ನಿ-ಅಟ್ಲೀ ಕಾಂಬಿನೇಷನ್ನ ಬಹುನಿರೀಕ್ಷಿಯ ಸಿನಿಮಾಗೆ "ರಾಕಾ" ಎಂದು ಹೆಸರಿಡಲಾಗಿದೆ.
ಅಲ್ಲು ಅರ್ಜುನ್ ಸಿನಿಮಾಗೆ ಇಂಥದ್ದೊಂದು ಟೈಟಲ್ ಇಡುತ್ತಾರೆ ಅಂತಾ ಯಾರೂ ಕೂಡ ಊಹೆ ಮಾಡಿರಲಿಲ್ಲ. ಯಾವಾಗ ಟೈಟಲ್ ರಿವೀಲ್ ಆಯಿತೋ ಇದೀಗ ಎಲ್ಲರ ಗಮನ ರಾಕಾ ಟೈಟಲ್ ಮೇಲಿದೆ. ಇದೇನಿದು ವಿಚಿತ್ರವಾಗಿದೆಯಲ್ಲ? ರಾಕಾ ಎಂದರೆ ಏನು ಅರ್ಥ ಎಂಬ ಹುಡಕಾಟದಲ್ಲಿದ್ದಾರೆ ಅಭಿಮಾನಿಳು. ಅಷ್ಟಕ್ಕೂ ರಾಕಾ ಎಂದರೇನು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಈ ಟೈಟಲ್ ಹಿಂದಿನ ಅರ್ಥದ ವಿಶ್ಲೇಷಣೆ ಇದೀಗ ಆರಂಭವಾಗಿದೆ. ಈ 'ರಾಕಾ' 'ರಾಕ್ಷಸುಡು' ಮತ್ತು 'ರಾಕಸಿ' ಪದಗಳ ಮೂಲದಿಂದ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಹೆಸರನ್ನು ಮನುಷ್ಯನಲ್ಲಿರುವ ಮೃಗೀಯ ಸ್ವಭಾವ ಅಥವಾ ವಿನಾಶಕಾರಿ ಶಕ್ತಿಯನ್ನು ಸೂಚಿಸಲು ವಿನ್ಯಾಸಗೊಳಿಸಲಾಗಿದೆ. ಟೈಟಲ್ ಮತ್ತು ಪೋಸ್ಟರ್ ನೋಡಿದರೆ ಇದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಶೀರ್ಷಿಕೆಗೆ ಅನುಗುಣವಾಗಿರುವ ಅಲ್ಲು ಅರ್ಜುನ್ ಅವರ ಫಸ್ಟ್ ಲುಕ್ ಸಖತ್ ಕ್ರೇಜಿಯಾಗಿದೆ. ಈ ಪೋಸ್ಟರ್ ನೋಡಿದರೆ ಚಿತ್ರದ ಕತೆಯನ್ನು ಊಹಿಸಲೂ ಸಾಧ್ಯವಿಲ್ಲ. ಇನ್ನೂ ಈ ಚಿತ್ರದ ಕುರಿತ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ, ಅಲ್ಲು ಅರ್ಜುನ್ ಇದರಲ್ಲಿ ನಾಯಕ ಮತ್ತು ಖಳನಾಯಕ ಎರಡೂ ಪಾತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ ಬಿಡುಗಡೆಯಾಗಿರುವ ಪೋಸ್ಟರ್ ವಿಲ್ಲನ್ ಪಾತ್ರಕ್ಕೆ ಸಂಬಂಧಿಸಿದೆ. ಇದೊಂದು ಸೂಪರ್ ಹೀರೋ ಸಿನಿಮಾ ಎಂಬ ಸುಳಿವು ಸಿಕ್ಕಿದೆ.
ಖಳನಾಯಕನ ಪಾತ್ರವೇ ಹೀಗಿರುವಾಗ ಇನ್ನು ಹೀರೋ ಪಾತ್ರ ಹೇಗಿರಬಹುದು ಎಂದು ಅಭಿಮಾನಿಗಳು ಅಂದಾಜು ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ, ನಾಯಕನ ಪಾತ್ರವು ಅಲ್ಟ್ರಾ ಸ್ಟೈಲಿಶ್ ಆಗಿರುತ್ತದೆ. ಐಕಾನ್ ಸ್ಟಾರ್ ಸಖತ್ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ, ತನ್ನ 'ರಾಕಾ' ಲುಕ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಕುತೂಹಲ ಸೃಷ್ಟಿಸಿರುವ ಬನ್ನಿ, ತಮ್ಮ ನಾಯಕನ ಲುಕ್‌ನಿಂದ ಯಾವಾಗ ದರ್ಶನ ಕೊಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಒಟ್ಟಾರೆಯಾಗಿ, ಅಲ್ಲು ಅರ್ಜುನ್ ತಮ್ಮ 22 ನೇ ಚಿತ್ರದೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಲು ಸಿದ್ಧರಾಗಿದ್ದಾರೆ, (ಏಜೆನ್ಸೀಸ್).