ಇವರಿಬ್ಬರು ತಮಿಳು ಸಿನಿಮಾದ ದಂತಕಥೆಗಳು: ರಜನಿ ಪತ್ನಿ ಲತಾ
- ಐದು ದಶಕಗಳ ಬಳಿಕ ಒಂದಾಗುತ್ತಿರುವ ರಜನಿಕಾಂತ್ ಮತ್ತು ಕಮಲ್ ಹಾಸನ್
- KH x RK ಮೂಲಕ ತಮಿಳು ಸಿನಿಮಾದಲ್ಲಿ ನೂತನ ಇತಿಹಾಸ
- ಇವರಿಬ್ಬರು ತಮಿಳು ಸಿನಿಮಾದ ದಂತಕಥೆಗಳು: ರಜನಿ ಪತ್ನಿ ಲತಾ
ಸಿನಿಮಾ: ದಕ್ಷಿಣ ಭಾರತದ ಹಲರು ಸಿನಿಮಾ ದಿಗ್ಗಜರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಮಲ್ಹಾಸನ್ ತಮ್ಮ ಮನೋಜ್ಞ ಅಭಿನಯದ ಮೂಲಕ ತಮಿಳು ಸಿನಿರಂಗದಲ್ಲಿ ಮೇಲ್ಪಂತಿ ನಾಯಕ ನಟರಾಗಿ ಗುರುತಿಸಿಕೊಂಡವರು.
ಈಗ ಐದು ದಶಕಗಳ ತರುವಾಯ ಈ ಇಬ್ಬರು ಮಹಾನ್ ಕಲಾವಿದರು ಒಟ್ಟಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನಿಮಾ ಇತಿಹಾಸದಲ್ಲಿಯೇ ಅವಿಸ್ಮರಣಿಯ ಘಟನೆಯಾಗಲಿದೆ ಎಂದು ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ (Latha Rajinikanth on KHxRK) ಅಭಿಪ್ರಾಯಪಟ್ಟಿದ್ದಾರೆ.
ಇವರಿಬ್ಬರು ತಮಿಳು ಸಿನಿಮಾದ ದಂತಕಥೆಗಳು
ತಮ್ಮ ಪತಿ ಮತ್ತು ಕಮಲ್ ಹಾಸನ್ ಬಗ್ಗೆ ಮಾತನಾಡಿರುವ ಲತಾ ರಜನಿಕಾಂತ್, ರಜನಿ ಮತ್ತು ಕಮಲ್ ಇಬ್ಬರು ಆತ್ಮೀಯ ಸ್ನೇಹಿತರಷ್ಟೇ ಅಲ್ಲ, ಬದಲಿಗೆ ಇವರಿಬ್ಬರು ತಮಿಳು ಸಿನಿಮಾ ಮೂಲಕ ತಲಮಾರುಗಳನ್ನೇ ಬದಲಿಸಿದ ದಂತಕಥೆಗಳೆಂದು ಕರೆದಿದ್ದಾರೆ.
ರಜನಿಕಾಂತ್ ಈಗ 70 ವರ್ಷ ದಾಟಿದರೂ ಸಹ ಅವರಿಗೆ ಒಂಚೂರು ಬಿಡುಗಡೆ ಇಲ್ಲದಂತಾಗಿದೆ. ಒಂದಾದ ಮೇಲೆ ಮತ್ತೊಂದು ಎಂದು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಈಗ ತಮಿಳು ಚಿತ್ರರಂಗದ ಈ ಇಬ್ಬರು ನಟರು ಒಂದಾಗಿ ನಟಿಸಲಿರುವ ಸಿನಿಮಾ ತೆರೆಕಂಡರೆ ಅದು ಅಭಿಮಾನಿಗಳಿಗೆ ರಸದೌತಣವನ್ನೇ ಬಡಿಸಲಿದೆ ಎಂದು ಹೇಳಿದ್ದಾರೆ.
ಇಬ್ಬರು ಬಾಲಚಂದರ್ ಶಿಷ್ಯರು!
ನಟ ಕಮಲ್ ಹಾಸನ್ ಮತ್ತು ರಜನಿಕಾಂತ್ ಇಬ್ಬರು ಕೂಡ ತಮ್ಮ ಸಿನಿಮಾ ಪ್ರವೇಶವನ್ನು ಲೆಂಜಡರಿ ನಿರ್ದೇಶಕ ದಿವಂಗತ. ಕೆ. ಬಾಲಚಂದರ್ ಅವರ ಸಿನಿಮಾ ಮೂಲಕವೇ ಮಾಡಿದ್ದರು. ಇವರಿಬ್ಬರು ಅವರ ನೆಚ್ಚಿನ ಶಿಷ್ಯರಾಗಿದ್ದರು. ಈಗ ಬಾಲು ಸರ್ ಬದುಕಿದ್ದರೆ ಇವರಿಬ್ಬರು ನಟಿಸಲಿರುವ ಸಿನಿಮಾ ನೋಡಿ ಸಂತೋಷ ಪಡುತ್ತಿದ್ದರೆಂದು ಲತಾ ಅವರು ಹೇಳಿದ್ದಾರೆ.
ನಾನು ಅವರಿಗೆ ಈಗ ಯಾವುದೇ ಸಲಹೆ ಕೊಟ್ಟಿಲ್ಲ, ನಾನು ಅವರ ಬದುಕಿನಲ್ಲಿ ಬರುವ ಮುನ್ನವೇ ರಜನಿ ತಮಿಳು ಸಿನಿಮಾದ ಸೂಪರ್ಸ್ಟಾರ್ ಆಗಿದ್ದರು. ನಾನು ಅವರ ಸಿನಿಮಾವನ್ನು ಒಬ್ಬ ಪ್ರೇಕ್ಷಕಿಯಂತೆ ನೋಡಲು ಇಷ್ಟ ಪಡುತ್ತೆನೆಂದು ಹೇಳಿದ್ದಾರೆ.
KHxRK
ಕಮಲ್ ಹಾಸನ್ ಹಾಗೂ ರಜನಿಕಾಂತ್ ಒಂದೇ ಪರದೆ ಮೇಲೆ ಕಾಣಿಸಿಕೊಳ್ಳಲಿರುವ ಸಿನಿಮಾದ ಅಧಿಕೃತ ಹೆಸರು ಇನ್ನು ರೀವಿಲ್ ಆಗಿಲ್ಲ. ಆದರೆ ಇದನ್ನು ಅವರಿಬ್ಬರ ಹೆಸರಿನ ಅಕ್ಷರಗಳಾದ ಕಮಲ್ ಹಾಸನ್ (KH) ಮತ್ತು ರಜನಿಕಾಂತ್ (RK) ಕೂಡಿಸಿ KHxRK ಎಂದು ಕರೆಯಲಾಗುತ್ತಿದೆ.
ಸದ್ಯ ಈ ಸಿನಿಮಾದಲ್ಲಿ ಇಬ್ಬರು ನಟರು ಒಟ್ಟಿಗೆ ನಟಿಸಲಿರುವ ಚಿಕ್ಕ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನಿ ಜೈಲರ್ ಸಿನಿಮಾದ ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನ ಮಾಡಲಿದ್ದಾರೆ ಎಂದ ಮಾಹಿತಿಯಷ್ಟೇ ಲಭ್ಯವಿದೆ, (ಏಜನ್ಸೀಸ್).