ಸಿನಿಮಾದಲ್ಲಿ ಮೀತಿ ಮೀರಿದ ಜಾನ್ವಿ ಕಪೂರ್ ಅಂಗ ಪ್ರದರ್ಶನ
- ರಾಮ್ ಚರಣ್ ನಟನೆಯ ‘ಪೆಡ್ಡಿ’ ಸಿನಿಮಾದಲ್ಲಿ ಜಾನ್ವಿ ಕಪೂರ್ ಪಾತ್ರದ ವಿರುದ್ಧ ಭಾರಿ ಆಕ್ರೋಶ!
- ಸಿನಿಮಾದಲ್ಲಿ ಮೀತಿ ಮೀರಿದ ಜಾನ್ವಿ ಕಪೂರ್ ಅಂಗ ಪ್ರದರ್ಶನ
- ಅವಳೊಬ್ಬ ನಟಿಯೋ? ಐಟಂ ಗರ್ಲೋ ಎಂದ ಸಿನಿ ವಿಮರ್ಶಕರು
ಸಿನಿಮಾ: ಇತ್ತೀಚೆಗೆ ನಟಿ ಜಾನ್ವಿ ಕಪೂರ್, ತೆಲಗು ನಟ ರಾಮ ಚರಣ್ ಜೊತೆಗೆ ನಟಿಸಿರುವ ಪೆದ್ದಿ/ಡ್ಡಿ (Janhvi Kapoor in Peddi) ಸಿನಿಮಾ ಜೂನ್ 4 ರಂದು ತೆರೆಕಂಡಿದೆ. ಆದರೆ ಈ ಸಿನಿಮಾದಲ್ಲಿ ನಟಿ ಜಾನ್ವಿ ಕಪೂರ್ ಅವರನ್ನು ಕೇವಲ ಲೈಂಗಿಕ ಸೌಂದರ್ಯ ಪ್ರದರ್ಶಕಿಯಾಗಿ ಚಿತ್ರಿಸಲಾಗಿದೆ ಎಂಬ ಆಕ್ರೋಶ ಜನರಲ್ಲಿ ಕಂಡು ಬರುತ್ತಿದೆ.
ಪೆದ್ದಿ/ಡ್ಡಿ ಸಿನಿಮಾದಲ್ಲಿ ಅಚ್ಚಿಯಮ್ಮಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಾನ್ವಿ ಕಪೂರ್ ಹೇಗೆ ಮತ್ತು ಏಕೆ ಈ ಪಾತ್ರವನ್ನು ನಿರ್ವಹಿಸಲು ಒಪ್ಪಿಕೊಂಡರು ಎಂದು ಸಿನಿ ಪ್ರೇಕ್ಷಕರು ಪ್ರಶ್ನಿಸುತ್ತಿದ್ದಾರೆ.
ಜಾನ್ವಿ ಬಲಿಪಶು ಆಗಿದ್ದಾಳೆ!
ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರ ಪಾತ್ರವನ್ನು ವಿರೋಧಿಸಿರುವ ಇನ್ನೋರ್ವ ನಟಿ ಗಾಯತ್ರಿ ಚಗಂಟಿ, ನಿಜವಾದ ಅರ್ಥದಲ್ಲಿ ಹೇಳಬೇಕೆಂದರೆ ಜಾನ್ವಿಯನ್ನು ಚಿತ್ರರಂಗ ಬಲಿಪಶು ಮಾಡುತ್ತಿದೆ.
ಜಾನ್ವಿಯನ್ನು ಕೇವಲ ಆಕೆಯ ದೇಹ ಸೌಂದರ್ಯವನ್ನು ಪ್ರದರ್ಶಿಸಲು ಮಾತ್ರ ಬಳಕೆ ಮಾಡಿಕೊಳ್ಳುತ್ತಿರುವುದು ಕಣ್ಣೆದುರೇ ಕಾಣಿಸುತ್ತಿದೆ. ಕೇವಲ ಈ ಸಿನಿಮಾ ಮಾತ್ರವಲ್ಲ ಜಾನ್ವಿ ನಟಿಸಿರುವ ಯಾವುದೇ ಸಿನಿಮಾ ನೋಡಿದರು ಅದರಲ್ಲಿ ಆಕೆ ಒಬ್ಬ ನಟಿ ಎನ್ನಿವುದಕ್ಕಿಂತ ಐಟಂ ಗರ್ಲ್ ರೀತಿಯಲ್ಲಿಯೇ ಕಾಣಿಸುವಂತೆ ಮಾಡಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಜಾನ್ವಿ ಎಚ್ಚೆತ್ತುಕೊಳ್ಳಲ್ಲಿ; ಚಿತ್ರರಂಗ ಸುಧಾರಿಸಲಿ!
ಜಾನ್ವಿ ಕಪೂರ್ ಅವರ ದೇಹ ಸೌಂದರ್ಯಕ್ಕಾಗಿ ಸಿನಿಮಾ ನೋಡಲು ಯಾರು ಬರುವುದಿಲ್ಲ, ಹೆಣ್ಣನ್ನು ಕೇವಲ ಭೋಗಿಸುವ ವಸ್ತು ಎಂಬ ರೀತಿ ಬಿಂಬಿಸುವುದನ್ನು ಚಿತ್ರರಂಗ ಮೊದಲು ನಿಲ್ಲಿಸಬೇಕು.
ಇತ್ತ ಜಾನ್ವಿ ಕಪೂರ್ ಸಹ ತಮ್ಮ ದೇಹ ಸೌಂದರ್ಯ ಮೂಲಕವೇ ಸಿನಿಮಾದಲ್ಲಿ ನಟಿಸುವ ಬದಲು, ಅಭಿನಯ, ನೃತ್ಯ, ಡೈಲಾಗ್ ಡೆಲವರಿ ಈ ಕ್ಷೇತ್ರದಲ್ಲಿ ಸಹ ತಮ್ಮನ್ನು ತಾವು ತೋಡಗಿಸಿ ಕೊಳ್ಳಬೇಕು. ಇಲ್ಲದ್ದಿದ್ದರೆ ಈಗ ಒಂದೆರಡು ಸಿನಿಮಾ ಮಾಡಿ ನಂತರ ಐಟಂ ಡಾನ್ಸ್ ಮಾಡುತ್ತಾ ಇರಬೇಕಾಗುತ್ತದೆ ಎಂದು ಸಿನಿಮಾ ವಿಮರ್ಶಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಪೆದ್ದಿ ಬಗ್ಗೆ
ಖ್ಯಾತ ನಟ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಪೆಡ್ಡಿ (Peddi) ಬಹುನಿರೀಕ್ಷಿತ ತೆಲುಗು ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರವನ್ನು ಸ್ಟಾರ್ ನಿರ್ದೇಶಕ ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿದ್ದು, RC16 ಎಂಬ ಹೆಸರಿನಿಂದಲೂ ಇದು ಸಿನಿರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದೊಂದು ಕ್ರೀಡಾ ಆಧಾರಿತ ಹಳ್ಳಿಯ ಕಥಾಹಂದರವನ್ನು ಹೊಂದಿರುವ ಚಿತ್ರವಾಗಿದ್ದು, ಇದರಲ್ಲಿ ರಾಮ್ ಚರಣ್ ಅವರು ಹಿಂದೆಂದೂ ಕಾಣಿಸಿಕೊಳ್ಳದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ರಾಮ್ ಚರಣ್ ಅವರಿಗೆ ಜೋಡಿಯಾಗಿ ಬಾಲಿವುಡ್‌ನ ಯುವ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು, ಕನ್ನಡದ ಖ್ಯಾತ ನಟ ಶಿವರಾಜ್‌ಕುಮಾರ್ ಕೂಡ ಈ ಚಿತ್ರದಲ್ಲಿ ಅತ್ಯಂತ ಪ್ರಮುಖ ಮತ್ತು ಪವರ್‌ಫುಲ್ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ.
ಮೈತ್ರಿ ಮೂವಿ ಮೇಕರ್ಸ್ ಮತ್ತು ವೃದ್ಧಿ ಸಿನಿಮಾಸ್ ಸಂಸ್ಥೆಗಳು ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿವೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಹಾಡುಗಳು ಮತ್ತು ಹಿನ್ನೆಲೆ ಸಂಗೀತದ ಮೇಲೆ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿಯಾಗಿದೆ, (ಏಜನ್ಸೀಸ್).