Atlee: ರಾಜ-ರಾಣಿ, ಜವಾನ್(jawan) ಸಿನಿಮಾ ಖ್ಯಾತಿಯ ನಿರ್ದೇಶಕ ಅಟ್ಲೀ ಕುಮಾರ್ ಅವರ ಪತ್ನಿ ಪ್ರಿಯಾ ಅಟ್ಲೀ ಅವರು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಇಬ್ಬರು ಎರಡನೇ ಮಗುವಿಗೆ ಪೋಷಕರಾಗಿ ಬಡ್ತಿ ಪಡೆದುಕೊಂಡಿದ್ದು, ಹೆಣ್ಣು ಮಗು ಜನಿಸಿದೆ ಫೀಲಿಂಗ್ ಬ್ಲೆಸ್ಡ್ ಎಂದು ಸೋಮವಾರ(ಏಪ್ರಿಲ್.20) ಇನ್ಸ್ಟಾಗ್ರಾಂನಲ್ಲಿ ಪೋಸ್ಟರ್ ಹಂಚಿಕೊಂಡು ಸಂಭ್ರಮಿಸಿದ್ದಾರೆ.
'ಹೇ ನನಗೆ ಮುದ್ದಾದ ತಂಗಿ ಸಿಕ್ಕಿದ್ದಾಳೆ' ಎಂದು ಅವರ ಮೊದಲ ಮಗ ಮೀರ್ ಹೇಳುತ್ತಿರುವಂತೆ ಪೋಸ್ಟರ್ ಹಂಚಿಕೊಂಡಿದ್ದಾರೆ. ಇದು ಗುಲಾಬಿ ಬಣ್ಣದಲ್ಲಿದ್ದು, ಹುಟ್ಟಿರುವುದು ಹೆಣ್ಣು ಮಗು ಎನ್ನುವುದನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ. ಜೊತೆಗೆ ನಮ್ಮ ಮನೆಗೆ ಮಹಾಲಕ್ಷ್ಮಿಯ ಎಂಟ್ರಿಯಾಗಿದೆ. ಅವಳನ್ನು ಪಡೆದ ನಾವೇ ಧನ್ಯರು ಎಂದು ಬರೆದುಕೊಂಡಿದ್ದಾರೆ.
ಸಿನಿತಾರೆಯರಿಂದ ಶುಭ ಹಾರೈಕೆ
ನಮ್ಮ ಕುಟುಂಬಕ್ಕೆ ಪುಟ್ಟ ದೇವತೆಯ ಆಗಮನವಾಗಿದೆ, ನಾವು ತುಂಬಾ ಧನ್ಯರಾಗಿದ್ದೇವೆ ಎನ್ನುವ ಅಟ್ಲೀ ಕುಮಾರ್ರ ಪೋಸ್ಟ್ ಹಂಚಿಕೊಂಡಿದ್ದಾರೆ. ದಂಪತಿಗೆ ಈಗಾಗಲೇ 'ಮೀರ್' ಎಂಬ ಗಂಡು ಮಗುವಿದ್ದು, ಈಗ ಹೆಣ್ಣು ಮಗುವಿನ ಆಗಮನದಿಂದ ಅವರ ಮನೆ ಪೂರ್ಣಗೊಂಡಂತಾಗಿದೆ.
ಈ ಸುದ್ದಿಯನ್ನು ತಿಳಿಯುತ್ತಿದ್ದಂತೆಯೇ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ದಂಪತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ, ಮಲಯಾಳಂ ನಟಿ ನಜ್ರಿಯಾ ಫಹಾದ್, ಜ್ಯೋತಿಕಾ ಪಾಂಡಿಯನ್, ನಟಿ ಸಮಂತಾ ರುತ್ ಪ್ರಭು ಹಾಗೂ ಮಿನ್ನಾಲ್ ಮುರುಳಿ ನಟಿ ಫೆಮಿನಾ ಜಾರ್ಜ್, ನಟಿ ಕೀರ್ತಿ ಸುರೇಶ್ ಶುಭಕೋರಿದ್ದಾರೆ. ಕುಟುಂಬಕ್ಕೆ ಒಳ್ಳೆಯದಾಗಲಿ, ಕಂಗ್ರಾಟ್ಸ್ ಬಡ್ಡೀ ಎಂದು ಪೋಸ್ಟ್ಗೆ ಕಾಮೆಂಟ್ ಮಾಡಿದ್ದಾರೆ.
ಅಟ್ಲೀ ದಾಂಪತ್ಯ ಜೀವನ
ಅಟ್ಲೀ ಮತ್ತು ಪ್ರಿಯಾ ಅವರು ಎಂಟು ವರ್ಷಗಳ ಕಾಲ ಪ್ರೀತಿಸಿ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2023ರಲ್ಲಿ ಇವರಿಗೆ ಮೊದಲ ಮಗು ಮೀರ್ ಜನಿಸಿದನು. ಈಗ ಹೆಣ್ಣು ಮಗುವಿನ ಜನನದೊಂದಿಗೆ ಅಟ್ಲೀ ಕುಟುಂಬದಲ್ಲಿ ಸಂತೋಷ ಇಮ್ಮಡಿಯಾಗಿದೆ.
ಅಟ್ಲೀ ಕುಮಾರ್ ಹಿಟ್ ಸಿನಿಮಾಗಳಿವು
ರಾಜ-ರಾಣಿ ಅಟ್ಲೀ ಕುಮಾರ್ ಅವರ ಮೊದಲ ನಿರ್ದೇಶನದಚಿತ್ರ. ಇಂದಿಗೂ ಈ ಸಿನಿಮಾಗೆ ಅದರದ್ದೇ ಆದ ಫ್ಯಾನ್ ಬೇಸ್ ಉಂಟು. ಇನ್ನು ವಿಜಯ್ ಅವರು ಅಭಿನಯಿಸಿರುವ ಬಿಗಿಲ್, ತೆರಿ, ಮೆರ್ಸಲ್ ಸಿನಿಮಾಗಳು ಸಖತ್ ಹಿಟ್ ಕಂಡಿದ್ದವು. ಶಾರುಖ್ ಖಾನ್ ಅಭಿನಯದ ಜವಾನ್ ಹಿಂದಿಯಲ್ಲಿ ತೆರೆ ಕಂಡಿತ್ತು. ಇದಯ 1100 ಕೋಟಿಗೂ ಹೆಚ್ಚು ಕಲೆಕ್ಷನ್ ಗಿಟ್ಟಿಸಿಕೊಂಡಿತ್ತು. ಸದ್ಯ ರಾಕಾ ಟಾಲಿವುಡ್ನಲ್ಲಿ ರಾಕಾ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ ಸೇರಿದಂತೆ ಪ್ರತಿಭಾನ್ವಿತ ತಾರಾಬಣವೇ ಈ ಸಿನಿಮಾದಲ್ಲಿದೆ, (ಏಜೆನ್ಸೀಸ್).