44ನೇ ವಯಸ್ಸಿನಲ್ಲಿ ಬೆಂಗಳೂರು ಮೂಲದ ಉದ್ಯಮಿ ಜತೆ ಮದುವೆ...ಕೊನೆಗೂ ಮೌನ ಮುರಿದ ಅನುಷ್ಕಾ ಶೆಟ್ಟಿ! Anushka Shetty  
ಟಾಲಿವುಡ್

44ನೇ ವಯಸ್ಸಿನಲ್ಲಿ ಬೆಂಗಳೂರು ಮೂಲದ ಉದ್ಯಮಿ ಜತೆ ಮದುವೆ...ಕೊನೆಗೂ ಮೌನ ಮುರಿದ ಅನುಷ್ಕಾ ಶೆಟ್ಟಿ! Anushka Shetty

ಪ್ರಮುಖ ಮುಖ್ಯಾಂಶಗಳು

  • ಅನುಷ್ಕಾ ಶೆಟ್ಟಿ ವಿವಾಹದ ಬಗ್ಗೆ ಆಗಾಗ ಮಾತುಗಳು ಕೇಳಿಬರುತ್ತಲೇ ಇರುತ್ತವೆ
  • ಇದೀಗ ಮತ್ತೊಮ್ಮೆ ಅನುಷ್ಕಾ, ಮದುವೆ ಸುದ್ದಿ ಹೊರಬಿದ್ದಿದೆ
  • ಬೆಂಗಳೂರು ಮೂಲದ ಉದ್ಯಮಿಯೊಬ್ಬರನ್ನು ವರಿಸಲಿದ್ದಾರೆ ಎಂಬ ವದಂತಿ ಇದೆ
  • ಕೊನೆಗೂ ತಮ್ಮ ಮದುವೆ ವಿಚಾರವಾಗಿ ಬಾಹುಬಲಿ ಬ್ಯೂಟಿ ಮೌನ ಮುರಿದಿದ್ದಾರೆ
Anushka Shetty : ನಟಿ ಅನುಷ್ಕಾ ಶೆಟ್ಟಿ. ಈ ಹೆಸರು ಕೇಳಿದಾಗ ತಕ್ಷಣ ನೆನಪಿಗೆ ಬರುವುದು ಅರುಂಧತಿ ಮತ್ತು ಬಾಹುಬಲಿ ಚಿತ್ರಗಳು. ಈ ಮಂಗಳೂರಿನ ಬ್ಯೂಟಿ ಈ ಹಿಂದೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಹೆಚ್ಚಿನ ಸಿನಿಮಾಗಳಲ್ಲಿ ಗ್ಲಾಮರಸ್ ಪಾತ್ರಗಳನ್ನು ನಿರ್ವಹಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅದರಲ್ಲೂ ವಿಶೇಷವಾಗಿ 'ಬಿಲ್ಲಾ' ಸಿನಿಮಾದಲ್ಲಿನ ಸ್ವಿಮ್ಮಿಂಗ್​ಪೂಲ್​ ದೃಶ್ಯದಲ್ಲಿ, ತಮ್ಮ ಸೌಂದರ್ಯದಿಂದಲೇ ಅನುಷ್ಕಾ ಜನಪ್ರಿಯರಾದರು. 
ಆದಾಗ್ಯೂ, ಪರದೆಯ ಮೇಲೆ ಅನುಷ್ಕಾ ಅವರ ನಟನಾ ಕೌಶಲ್ಯವನ್ನು ಬಹಿರಂಗಪಡಿಸಿದ ಮೊದಲ ಚಿತ್ರವೆಂದರೆ ಅದು ಅರುಂಧತಿ. ಅದರ ನಂತರ, ಅನುಷ್ಕಾ ಅವರ ಸಿನಿಮಾ ಪ್ರಯಾಣವೇ ತುಂಬಾ ಬದಲಾಯಿತು. ಅವರೀಗ ಎಷ್ಟು ಎತ್ತರಕ್ಕೆ ತಲುಪಿದ್ದಾರೆಂದರೆ, ನೀವು ಯಾವುದೇ ಚಿತ್ರದಲ್ಲಿ ನಾಯಕಿ ಪಾತ್ರವನ್ನು ನೋಡಿದರೆ, ಅನುಷ್ಕಾ ಅವರು ಆ ಪಾತ್ರದಲ್ಲಿ ಇದ್ದರೆ ಇನ್ನೂ ಉತ್ತಮವಾಗಿ ನಟಿಸುತ್ತಿದ್ದರು ಎಂದು ನೀವು ಭಾವಿಸುತ್ತೀರಿ. ಅಷ್ಟರ ಮಟ್ಟಿಗೆ ಅನುಷ್ಕಾ ನಟನೆ ವೀಕ್ಷಕರಲ್ಲಿ ಬೇರೂರಿದೆ. ಒಂದು ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡ ನಟಿ ಇದ್ದರೆ ಅದು ಅನುಷ್ಕಾ. ಅಂತಹ ಅದ್ಭುತ ನಟಿಗೆ ಈಗ 44 ವರ್ಷ. ಆದಾಗ್ಯೂ, ಅವರು ಅವಿವಾಹಿತರಾಗಿಯೇ ಉಳಿದಿದ್ದಾರೆ.
ಅನುಷ್ಕಾ ಶೆಟ್ಟಿ ವಿವಾಹದ ಬಗ್ಗೆ ಆಗಾಗ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಇದೀಗ ಮತ್ತೊಮ್ಮೆ ಅನುಷ್ಕಾ, ಮದುವೆ ಸುದ್ದಿ ಹೊರಬಿದ್ದಿದೆ. ಬೆಂಗಳೂರು ಮೂಲದ ಉದ್ಯಮಿಯೊಬ್ಬರನ್ನು ವರಿಸಲಿದ್ದಾರೆ ಎಂಬ ವದಂತಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಈ ಬಗ್ಗೆ ಅನುಷ್ಕಾ ಆಗಲಿ ಅಥವಾ ಅವರ ಕುಟುಂಬವಾಗಲಿ ಎಲ್ಲೂ ಹೇಳಿಕೆ ನೀಡಿಲ್ಲ. ಆದರೆ, ಅನುಷ್ಕಾ ಮದುವೆಗೆ ಸಿದ್ಧತೆಗಳು ನಡೆಯುತ್ತಿವೆ ಎಂಬ ವರದಿ ಇದೆ. ಸಾಮಾಜಿಕ ಜಾಲತಾಣದಲ್ಲೂ ಈ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದರು ಅನುಷ್ಕಾ ಅವರ ಗಮನಕ್ಕೂ ಬಂದಿದ್ದು, ಕೊನೆಗೂ ತಮ್ಮ ಮದುವೆ ವಿಚಾರವಾಗಿ ಬಾಹುಬಲಿ ಬ್ಯೂಟಿ ಮೌನ ಮುರಿದಿದ್ದಾರೆ.
ಪ್ರಸ್ತುತ ನನ್ನ ಮದುವೆ ವಿಚಾರವಾಗಿ ಹರಿದಾಡುತ್ತಿರುವ ಸುದ್ದಿಗಳೆಲ್ಲ ಆಧಾರರಹಿತ ಎಂದು ಹೇಳಿದ್ದಾರೆ. ಇಂತಹ ಸುಳ್ಳು ಮಾಹಿತಿಯನ್ನು ನಂಬಬಾರದು ಮತ್ತು ದೃಢೀಕರಿಸದ ಸುದ್ದಿಗಳನ್ನು ಹರಡಬಾರದು ಎಂದು ಅನುಷ್ಕಾ ಶೆಟ್ಟಿ ಅವರ ಟೀಮ್​ ಮನವಿ ಮಾಡಿದೆ. 
ಆಧಾರರಹಿತ ಸುದ್ದಿಗಳನ್ನು ಹರಡುವುದು ಪತ್ರಿಕೋದ್ಯಮದ ಗಡಿಗಳನ್ನು ಉಲ್ಲಂಘಿಸುತ್ತದೆ. ಅಧಿಕೃತ ಮಾಹಿತಿಗಾಗಿ ಕಾಯದೆ, ಯಾರೊಬ್ಬರ ಖಾಸಗಿ ಜೀವನದ ಬಗ್ಗೆ ಸುದ್ದಿ ಮಾಡುವುದು ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಆಕ್ರಮಣವಾಗಿದೆ. ಮಾಧ್ಯಮಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು ಮತ್ತು ವ್ಯಕ್ತಿಯ ಗೌಪ್ಯತೆಗೆ ಸಂಬಂಧಿಸಿದ ವಿಷಯಗಳನ್ನು ದೈನಂದಿನ ಸುದ್ದಿಗಳನ್ನಾಗಿ ಮಾಡಬಾರದು ಎಂದು ಅನುಷ್ಕಾ ಅವರ ಟೀಮ್​ ಒತ್ತಾಯಿಸಿದೆ.
ಅನುಷ್ಕಾ ಶೆಟ್ಟಿ ಅವರು ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಯಾವಾಗಲೂ ಘನತೆ ಮತ್ತು ಗೌರವವನ್ನು ಕಾಯ್ದುಕೊಂಡಿದ್ದಾರೆ. ಖ್ಯಾತಿಗಾಗಿ ಅವರು ಎಂದಿಗೂ ಪ್ರಚಾರದ ಗಿಮಿಕ್‌ಗಳನ್ನು ಅವಲಂಬಿಸಿಲ್ಲ. ಅವರು ತಮ್ಮ ಖಾಸಗಿ ಜೀವನವನ್ನು ಖಾಸಗಿಯಾಗಿಡಲು ಬಯಸುವವರು. ಮದುವೆ ಎಂಬುದು ವೈಯಕ್ತಿಕ ನಿರ್ಧಾರವಾಗಿದೆ. ಅದನ್ನು ಸುದ್ದಿ ಮತ್ತು ಕ್ಲಿಕ್‌ಗಳಿಗಾಗಿ ಬಳಸಬಾರದು. ವ್ಯಕ್ತಿಯ ಗೌಪ್ಯತೆಯನ್ನು ಗೌರವಿಸುವುದು ಅತ್ಯಂತ ಮುಖ್ಯವಾದ ವಿಷಯ. ಮದುವೆಯಂತಹ ವಿಷಯಗಳಲ್ಲಿ ಅಧಿಕೃತ ಘೋಷಣೆ ಬರುವವರೆಗೆ ಮಾಧ್ಯಮಗಳು ಕಾಯಬೇಕು ಎಂದು ಹೇಳುವ ಮೂಲಕ ಅನುಷ್ಕಾ ಅವರ ತಂಡ ವದಂತಿಗಳಿಗೆ ತೆರೆ ಎಳೆದಿದೆ. 
ಅಂದಹಾಗೆ, ಅನುಷ್ಕಾ ಶೆಟ್ಟಿ ಈ ವರ್ಷ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ತಮ್ಮ ಕುಟುಂಬಕ್ಕೆ ಪರಿಚಿತರಾಗಿರುವ ಉದ್ಯಮಿಯ ಜತೆ ಅನುಷ್ಕಾ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಇದೆ. ಆದರೆ, ಅನುಷ್ಕಾ ಶೆಟ್ಟಿ ಅವರು ಇದನ್ನು ತಳ್ಳಿಹಾಕಿದ್ದಾರೆ. 
ಇನ್ನು ಅನುಷ್ಕಾ ಅವರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುವುದು ಇದೇ ಮೊದಲಲ್ಲ. ಅನುಷ್ಕಾ ಮತ್ತು ನಟ ಪ್ರಭಾಸ್ ಬಾಹುಬಲಿ ಸಿನಿಮಾದ ಆರಂಭದಿಂದಲೂ ಪ್ರೀತಿಸುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವರದಿಗಳು ಈ ಹಿಂದೆ ಹಬ್ಬಿದ್ದವು. ಆದರೆ, ಇಬ್ಬರು ಇದನ್ನು ನಿರಾಕರಿಸಿದರು. ಇದಿಷ್ಟೇ ಅಲ್ಲದೆ, ಅನುಷ್ಕಾ ಅವರು ದುಬೈನ ಉದ್ಯಮಿಯೊಬ್ಬರನ್ನು ವರಿಸಲಿದ್ದಾರೆ ಎಂಬ ಮಾಹಿತಿ ಕೂಡ ಹರಿದಾಡಿತ್ತು, (ಏಜೆನ್ಸೀಸ್​).