ನಟಿ ಹನ್ಸಿಕಾ ಮೊಟ್ವಾನಿ 
ಟಾಲಿವುಡ್

ಸಾಮಾಜಿಕ ಜಾಲತಾಣದಲ್ಲಿ ದಿಢೀರ್​ ಟ್ರೆಂಡ್​ ಆದ ನಟಿ ಹನ್ಸಿಕಾ ಮೊಟ್ವಾನಿ: ಖಾಸಗಿ ವಿಡಿಯೋ ಸೋರಿಕೆಯದ್ದೇ ಚರ್ಚೆ! Hansika Motwani

ಮುಂಬೈ: ದಿವಂಗತ ನಟ ಪುನೀತ್​ ರಾಜ್​ಕುಮಾರ್ ನಟನೆಯ ಬಿಂದಾಸ್​ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿರುವ​ ನಟಿ ಹನ್ಸಿಕಾ ಮೊಟ್ವಾನಿ ( Hansika Motwani ), ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಇತ್ತೀಚೆಗಷ್ಟೇ ಡಿವೋರ್ಸ್ ವಿಚಾರಕ್ಕೆ ಹನ್ಸಿಕಾ ಸುದ್ದಿಯಾಗಿದ್ದರು. ಇದೀಗ ದಿಢೀರನೇ ಸಾಮಾಜಿಕ ಜಾಲತಾಣದಲ್ಲಿ ಹನ್ಸಿಕಾ ಟ್ರೆಂಡ್​ ಆಗಿದ್ದಾರೆ. ಎಕ್ಸ್​, ಫೇಸ್​ಬುಕ್​ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹನ್ಸಿಕಾ ಹೆಸರು ಹೆಚ್ಚು ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಏನು ಅಂತ ನೋಡಿದಾಗ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಸೋರಿಕೆಯಾಗಿದೆ ಅನ್ನೋ ವದಂತಿಗಳು ಹರಿದಾಡುತ್ತಿವೆ. ಅಷ್ಟಕ್ಕೂ ಖಾಸಗಿ ವಿಡಿಯೋ ಲೀಕ್​ ಆಗಿರುವುದು ನಿಜಾನಾ? ಈ ಕುರಿತಾದ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬೆಳೆದಂತೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಯಾವುದು ಅಸಲಿ, ಯಾವುದು ನಕಲಿ ಎಂದು ಗುರುತಿಸುವುದು ಅತ್ಯಂತ ಕಷ್ಟಕರವಾಗಿದೆ. ಅದರಲ್ಲೂ ಮುಖ್ಯವಾಗಿ ಸಿನಿಮಾ ನಟಿಯರು ಈ ಎಐ ಸೃಷ್ಟಿತ ಡಿಜಿಟಲ್ ಕಿರುಕುಳದಿಂದ ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಜಾಲತಾಣದಲ್ಲಿ ಲೈಕ್ಸ್ ಮತ್ತು ವೀಕ್ಷಣೆ ಪಡೆಯಲು ನಟಿಯರ ಮುಖಗಳನ್ನು ತಂತ್ರಜ್ಞಾನದ ಮೂಲಕ ಬೇರೆಯವರ ವಿಡಿಯೋಗಳಿಗೆ ಮಾರ್ಫ್ ಮಾಡಿ ಹಂಚಿಕೊಳ್ಳುವ ಕೃತ್ಯಗಳು ದಿನೇ ದಿನೇ ಹೆಚ್ಚುತ್ತಿವೆ. ಈಗಾಗಲೇ ಸಾಲು ಸಾಲು ನಟಿಯರು ಈ 'ಡೀಪ್‌ಫೇಕ್' (Deepfake) ತಂತ್ರಜ್ಞಾನದ ಬಲೆಗೆ ಬಿದ್ದು ಸಂಕಟ ಅನುಭವಿಸಿದ್ದು, ಇದೀಗ ಆ ಸಾಲಿಗೆ ಬಹುಭಾಷಾ ನಟಿ ಹನ್ಸಿಕಾ ಮೊಟ್ವಾನಿ ಅವರ ಹೆಸರೂ ಕೂಡ ಸೇರಿಕೊಂಡಿದೆ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದ ವಿಶೇಷ ಗುರುತನ್ನು ಹೊಂದಿರುವ ನಟಿ ಹನ್ಸಿಕಾ ಮೊಟ್ವಾನಿ ಅವರ ಹೆಸರಿನಲ್ಲಿ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದವೊಂದು ಹರಿದಾಡುತ್ತಿದೆ. ರೆಡ್ಡಿಟ್ (Reddit) ಹಾಗೂ ಎಕ್ಸ್ (X) ಖಾತೆಗಳಲ್ಲಿ ಹನ್ಸಿಕಾ ಅವರ ವೈಯಕ್ತಿಕ ಅಥವಾ ಪ್ರೈವೇಟ್ ವಿಡಿಯೋ ಲೀಕ್ ಆಗಿದೆ ಎಂಬ ರೂಮರ್‌ಗಳು ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿವೆ. ಅಷ್ಟೇ ಅಲ್ಲದೆ, ಹಲವು ನೆಟ್ಟಿಗರು ಆಘಾತಕಾರಿ ಮೀಮ್ಸ್‌ಗಳನ್ನು ಹಾಗೂ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಈ ವಿಚಾರವನ್ನು ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಯ ವಿಷಯವನ್ನಾಗಿ ಮಾಡಿದ್ದಾರೆ.

ಆದರೆ, ಈ ಆನ್‌ಲೈನ್ ಪ್ರಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಈ ವೈರಲ್ ವಿಡಿಯೋದ ಕುರಿತು ಹರಿಬಿಡಲಾಗುತ್ತಿರುವ ಯಾವುದೇ ಹಕ್ಕು ಪ್ರತಿಪಾದನೆಗಳಿಗೆ ಸೂಕ್ತ ಆಧಾರವಾಗಲಿ ಅಥವಾ ಸಾಕ್ಷ್ಯಾಧಾರಗಳಾಗಲಿ ಪತ್ತೆಯಾಗಿಲ್ಲ. ಇದು ಕೇವಲ ಎಐ ಡೀಪ್‌ಫೇಕ್ ಅಥವಾ ಮಾರ್ಫ್ ಮಾಡಲಾದ ನಕಲಿ ಕಂಟೆಂಟ್ ಎಂದು ಹಲವು ನೆಟ್ಟಿಗರು ವಾದಿಸುತ್ತಿದ್ದಾರೆ.

ಯಾವುದೇ ಆಧಾರವಿಲ್ಲದೆ ಹರಿದಾಡುವ ಇಂತಹ ಆಧಾರರಹಿತ ಸುದ್ದಿಗಳನ್ನು ಯಾರೂ ನಂಬಬಾರದು ಎಂದು ನೆಟ್ಟಿಗರು ಸಾರ್ವಜನಿಕರಲ್ಲಿ ವಿನಂತಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆಯೂ ಹನ್ಸಿಕಾ ಅವರ ಹೆಸರಿನಲ್ಲಿ ಇಂತಹದೇ ನಕಲಿ ಹಾಗೂ ಮಾರ್ಫಿಂಗ್ ವಿವಾದಗಳು ಸೃಷ್ಟಿಯಾಗಿದ್ದು, ನಂತರ ಅವು ಸಂಪೂರ್ಣ ಸುಳ್ಳು ಎಂದು ಸಾಬೀತಾಗಿದ್ದವು.

ವೈಯಕ್ತಿಕ ಜೀವನದ ವಿಷಯಕ್ಕೆ ಬಂದರೆ, ಹನ್ಸಿಕಾ 2022ರಲ್ಲಿ ಉದ್ಯಮಿ ಸೊಹೇಲ್ ಕಥೂರಿಯಾ ಅವರನ್ನು ಪ್ರೀತಿಸಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಈ ದಾಂಪತ್ಯ ಜೀವನವು ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಏಕೆಂದರೆ, ಹನ್ಸಿಕಾ ಮದುವೆಯಾಗಿದ್ದು ತನ್ನ ಆಪ್ತ ಸ್ನೇಹಿತೆಯ ಪತಿಯನ್ನು. ಅವರ ವಿವಾಹದ ಡಾಕ್ಯುಮೆಂಟರಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲೂ ಪ್ರಸಾರವಾಗಿತ್ತು. ಆದರೆ, ವೈಯಕ್ತಿಕ ಮನಸ್ತಾಪಗಳಿಂದಾಗಿ ಇತ್ತೀಚೆಗಷ್ಟೇ ಇಬ್ಬರೂ ವಿಚ್ಛೇದನ ಪಡೆದು ಪ್ರತ್ಯೇಕಗೊಂಡಿದ್ದಾರೆ. ಸದ್ಯಕ್ಕೆ ಹನ್ಸಿಕಾ ಯಾವುದೇ ದೊಡ್ಡ ಸಿನಿಮಾಗಳಲ್ಲಿ ಸಕ್ರಿಯರಾಗಿಲ್ಲದಿದ್ದರೂ, ಅವರ ಹೆಸರನ್ನು ಬಳಸಿ ಸೃಷ್ಟಿಸಲಾಗಿರುವ ಈ ಸೈಬರ್ ಹಾಗೂ ಡೀಪ್‌ಫೇಕ್ ವಿಡಿಯೋ ಕುರಿತು ಅವರು ಮುಂದಿನ ದಿನಗಳಲ್ಲಿ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).