ಜ್ಯೋತಿಷಿ ವೇಣು ಸ್ವಾಮಿ ಬಗ್ಗೆ ನಟಿ ಡಿಂಪಲ್​ ಹಯಾತಿ ಅಚ್ಚರಿ ಹೇಳಿಕೆ 
ಟಾಲಿವುಡ್

ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಬೋಲ್ಡ್​ ಬ್ಯೂಟಿ ಡಿಂಪಲ್​ ಹಯಾತಿ! Dimple Hayathi

ಪ್ರಮುಖ ಮುಖ್ಯಾಂಶಗಳು

  • ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ಜ್ಯೋತಿಷಿ ವೇಣು ಸ್ವಾಮಿ ತೆಲುಗಿನಲ್ಲಿ ಖ್ಯಾತರಾಗಿದ್ದಾರೆ
  • ಟಾಲಿವುಡ್​ನಲ್ಲಿ ಕೆಲ ಸೆಲೆಬ್ರಿಟಿಗಳು ಯಾವುದೇ ಪೂಜಾ-ವಿಧಾನ ನೆರವೇರಿಸುವುದಾದರೂ ವೇಣು ಸ್ವಾಮಿ ಮೊರೆ ಹೋಗುತ್ತಾರೆ
  • ನಟಿ ಡಿಂಪಲ್​ ಹಯಾತಿ ಮನೆಯಲ್ಲೂ ವೇಣು ಸ್ವಾಮಿ ಪೂಜೆ ಮಾಡಿದ್ದಾಗ ಭಾರಿ ಚರ್ಚೆಯಾಗಿತ್ತು
  • ಇದೀಗ ವೇಣು ಸ್ವಾಮಿ ಬಗ್ಗೆ ಹಯಾತಿ ನೀಡಿರುವ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ
Dimple Hayathi : ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ಜ್ಯೋತಿಷಿ ವೇಣು ಸ್ವಾಮಿ ತೆಲುಗಿನಲ್ಲಿ ಖ್ಯಾತರಾಗಿದ್ದಾರೆ. ಇವರ ಭವಿಷ್ಯವನ್ನು ಆರಂಭದಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಟಾಲಿವುಡ್​ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರು ಬೇರೆಯಾದರೂ ಆಗ ವೇಣು ಅವರ ಭವಿಷ್ಯವನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಹೀಗಾಗಿ ಅನೇಕ ಸೆಲೆಬ್ರಿಟಿಗಳ ನೆಚ್ಚಿನ ಜ್ಯೋತಿಷಿಯಾಗಿದ್ದಾರೆ. 
ಟಾಲಿವುಡ್​ನಲ್ಲಿ ಕೆಲ ಸೆಲೆಬ್ರಿಟಿಗಳು ಯಾವುದೇ ಪೂಜಾ-ವಿಧಾನ ನೆರವೇರಿಸುವುದಾದರೂ ವೇಣು ಸ್ವಾಮಿ ಮೊರೆ ಹೋಗುತ್ತಾರೆ. ಹಿಂದೊಮ್ಮೆ ರಶ್ಮಿಕಾ ಮಂದಣ್ಣಾ ಕೂಡ ತಮ್ಮ ಹೈದರಾಬಾದ್​ ನಿವಾಸಕ್ಕೆ ವೇಣು ಸ್ವಾಮಿ ಅವರಿಂದಲೇ ಪೂಜೆ ನೆರವೇರಿಸಿದ್ದರು. ಅಲ್ಲದೆ,​ ನಟಿ ಡಿಂಪಲ್​ ಹಯಾತಿ ಮನೆಯಲ್ಲೂ ವೇಣು ಸ್ವಾಮಿ ಪೂಜೆ ಮಾಡಿದ್ದರು. ಅದರಲ್ಲೂ ಹಯಾತಿ ಮನೆಯಲ್ಲಿ ಪೂಜೆಯ ನಡುವೆ ವೈನ್​ ಬಾಟಲ್ ಕಾಣಿಸಿಕೊಂಡಿದ್ದು ಭಾರಿ ಚರ್ಚೆಯಾಗಿತ್ತು. ಅಲ್ಲದೆ, ಟ್ರೋಲ್​ ಕೂಡ ಆಗಿತ್ತು. ಇದೀಗ ವೇಣು ಸ್ವಾಮಿ ಬಗ್ಗೆ ಹಯಾತಿ ನೀಡಿರುವ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ.
ಅಂದಹಾಗೆ, ಡಿಂಪಲ್ ಹಯಾತಿ ಅವರು 'ಭರ್ತ ಮಹಾಶಯಲುಕು ವಿಜ್ಞಾಪತಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರವಿತೇಜ ಅವರು ನಟಿಸಿರುವ ಈ ಸಿನಿಮಾಗೆ ಕಿಶೋರ್ ತಿರುಮಲ ಅವರು ನಿರ್ದೇಶನ ಮಾಡಿದ್ದಾರೆ. ನಟಿ ಆಶಿಕಾ ರಂಗನಾಥ್ ಮತ್ತೊಬ್ಬ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೌಟುಂಬಿಕ ಮತ್ತು ರೊಮ್ಯಾಂಟಿಕ್​ ಕಥಾಹಂದರವುಳ್ಳ ಈ ಚಿತ್ರ ಜನವರಿ 13 ರಂದು ಸಂಕ್ರಾಂತಿ ಉಡುಗೊರೆಯಾಗಿ ತೆರೆಗೆ ಬರಲಿದೆ.
ಇದರ ಭಾಗವಾಗಿ, ಚಿತ್ರತಂಡ ಪ್ರಚಾರಗಳನ್ನು ಪ್ರಾರಂಭಿಸಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಡಿಂಪಲ್ ಹಯಾತಿ, ವೇಣು ಸ್ವಾಮಿ ಬಗ್ಗೆ ಮತ್ತು ಅವರು ತಮ್ಮ ಮನೆಯಲ್ಲಿ ಮಾಡಿದ ಪೂಜೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಟ್ರೋಲಿಂಗ್ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ್ದಾರೆ.
ಕೇವಲ ಪೂಜೆಗಳಿಂದ ಜನರು ಸ್ಟಾರ್‌ಗಳಾಗುತ್ತಾರೆ ಎಂದು ನಾನು ನಂಬುವುದಿಲ್ಲ. ನಾನು ಮತ್ತು ನನ್ನ ಕುಟುಂಬ ನಿಯಮಿತವಾಗಿ ದೇವಸ್ಥಾನಕ್ಕೆ ಹೋಗುತ್ತೇವೆ. ನಮ್ಮ ಹಿರಿಯರು ಹೇಳಿದಂತೆ ನಾವು ಪೂಜೆಗಳನ್ನು ಸಹ ಮಾಡುತ್ತೇವೆ ಎಂದು ಹಯಾತಿ ಅವರು ಹೇಳಿದರು. 
ಎಲ್ಲದಕ್ಕೂ ಸಮಯ ಬರಬೇಕು. ಆಗ ಮಾತ್ರ ಎಲ್ಲಾ ಸತ್ಯ ಹೊರಬರುತ್ತದೆ. ಪೂಜೆ ಮಾಡುತ್ತಾರೆ ಎಂಬ ಕಾರಣಕ್ಕೆ ನಿಮ್ಮ ವೃತ್ತಿಜೀವನ ಬದಲಾಗುವುದಿಲ್ಲ. ಇಲ್ಲಿ ಬೇಕಾಗಿರುವುದು ಕಠಿಣ ಪರಿಶ್ರಮ ಮತ್ತು ತಾಳ್ಮೆ. ನನ್ನ ಜನರಿಗೆ ನಾನು ಏನೆಂದು ಚೆನ್ನಾಗಿ ತಿಳಿದಿದೆ. ಹೀಗಾಗಿ ನಾನು ಟ್ರೋಲ್​ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು, (ಏಜೆನ್ಸೀಸ್​).